Wednesday, September 16, 2026
spot_img

ಒಕ್ಕಲಿಗ ಸಮುದಾಯದ ನಾಯಕರ ಮಾತುಗಳು ಎಲ್ಲೇ ಮೀರದಿರಲಿ:ನೇಗಿಲಯೋಗಿಗಳ ಕಿವಿಮಾತು

ಒಕ್ಕಲಿಗ ಸಮುದಾಯದ ಯಾವುದೇ ನಾಯಕರುಗಳು ಯಾವುದೇ ಪಕ್ಷದಲ್ಲಿದ್ದರೂ ಒಗ್ಗಟಾಗಿರಬೇಕು ಇಲ್ಲದಿದ್ದರೆ ಸಮಾಜದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನೇಗಿಲಯೋಗಿ ಸಮಾಜ ಸೇವ ಟ್ರಸ್ಟಿನ ಅಧ್ಯಕ್ಷರಾದ ಸಿ.ಎಸ್ ರಮೇಶ್ ಬೇಸರ ವ್ಯಕ್ತಪಡಿಸಿದರು

ನಗರದ ಪತ್ರಿಕ ಭವನದಲ್ಲಿ ಪತ್ರಿಕ ಗೋಷ್ಡಿಯಲ್ಲಿ ಮಾತನಾಡಿದ ಅವರು ಒಕ್ಕಲಿಗ ಸಮುದಾಯ ತನ್ನದೇ ಆದಂತ ಗೌರವ ಮತ್ತು ಪರಂಪರೆಯನ್ನು ಒಳಗೊಂಡಂತಹ ಇತಿಹಾಸವಿದೆ ನಾಡು ಕಟ್ಟಿದ ಕೆಂಪೇಗೌಡರು ಸೇರಿದಂತೆ ನಾಡಿನ ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯ ಹಾಗೂ ಇಲ್ಲಿವರೆಗೂ ಆಳಿದ ಮುಖ್ಯಮಂತ್ರಿಗಳವರೆಗೂ ಎಲ್ಲರಿಗೂ ತಮ್ಮದೆ ಆದ ಇತಿಹಾಸವಿದೆ.

ಆದರೆ ಪರಸ್ಪರ ವೈಯಕ್ತಿಕ ಕಾರಣಗಳಿಗೆ ಎಲ್ಲ ಪಕ್ಷದ ಸಮುದಾಯ ನಾಯಕರು ಪರಸ್ಪರ ಗೌರವ ಕೊಡುವಂತಹ ಸಂಸ್ಕಾರ ಬರಬೇಕು ಇಲ್ಲವಾದರೆ ನಮ್ಮ ಸಮುದಾಯದ ಮೂರು ಮಠಗಳ ಸ್ವಾಮೀಜಿಗಳನ್ನು ಒಳಗೊಂಡಂತಹ ಸಭೆ ಕರೆದು ಎಲ್ಲಾ ಪಕ್ಷದ ಒಕ್ಕಲಿಗ ಸಮುದಾಯದ ನಾಯಕರುಗಳಿಗೆ ಸ್ವಾಮೀಜಿ ಗಳಿಂದ ಸಂಸ್ಕಾರದ ಪಾಠ ಹೇಳಬೇಕಿದೆ.

ಪರಸ್ಪರ ವೈಷಮ್ಯ ಕಾಲೆಳೆಯುವುದರಿಂದ ಸಮುದಾಯಕ್ಕೆ ಧಕ್ಕೆ ಆಗಲಿದೆ.
ಎಚ್ ಡಿ ಕುಮಾರಸ್ವಾಮಿ ಹಾಗೂ ಚೆಲುವರಾಯಸ್ವಾಮಿ ಡಿಕೆ ಶಿವಕುಮಾರ್ ಇವರೆಲ್ಲರೂ ಮಾತನಾಡುವಾಗ ಸಂಸ್ಕಾರ ಮತ್ತು ಪದ್ಧತಿಯನ್ನು ತೋರಬೇಕೆಂದು ಹೇಳಿದರು .
ಪತ್ರಿಕಾಗೋಷ್ಠಿಯಲ್ಲಿ ರಮೇಶ್ ಚಿಕ್ಕಮಯ ಶಿವಶಂಕರ್ ಗೋಪಾಲ್ ಮಲ್ಲಿಕ್ ತಿಮ್ಮೇಗೌಡ ಪ್ರಶಾಂತ್ ಭಾಗವಹಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!