Sunday, March 15, 2026
spot_img

ಗಂಡುಮಕ್ಕಳಿಗೆ ಗಡ್ಡ ಮೀಸೆಯಷ್ಟೆ ಹೆಣ್ಮಕ್ಕಳು ಋತುಮತಿಯಾಗುವುದು ಸಹಜ:ಡಾ ಪ್ರೇಮಲತಾ

ಹೆಣ್ಣು ಮಕ್ಕಳ ಆರೋಗ್ಯ ಸಮಸ್ಯೆಗಳು ಸಾಮಾನ್ಯ ವಿಚಾರದಂತೆ ಚರ್ಚಿತವಾಗಬೇಕು.ಶಾಲಾ ಕಾಲೇಜು ಸ್ನೇಹಿತರ ಜತೆ ಸಾಮಾನ್ಯ ವಿಷಯದಂತೆ ಅವು ಚರ್ಚಿತವಾಗಬೇಕೆ ಹೊರತು ಅತಿ ರಂಜಿತಗೊಳ್ಳಬಾರದು ಎಂಬ ದೃಷ್ಟಿಯಿಂದ ತಾನು ಕೃತಿ ರಚಿಸಿದ್ದಾಗಿ ಅನಿವಾಸಿ ಭಾರತೀಯ ವೈದ್ಯ ಡಾ.ಪ್ರೇಮಲತಾ ಬಿ ತಮ್ಮ ಅಭಿಮತ ವ್ಯಕ್ತಪಡಿಸಿದರು.

ನಗರದ ಕರ್ನಾಟಕ ಸಂಘದಲ್ಲಿ ಚಿತ್ರಕೂಟ ಹಾಗೂ ಪರಿಚಯ ಪ್ರಕಾಶನ ಹೊರತಂದಿರುವ ಒಡಲು ಮತ್ತು ಸೃಷ್ಟಿ ಪುಸ್ತಕದ ಬಿಡುಗಡೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೃತಿ ಲೇಖಕಿ ಪ್ರೇಮಲತಾ.ಪ್ರಸ್ತುತ ಸಮಾಜದಲ್ಲಿ ಹೆಣ್ಣು ಮಕ್ಕಳ ಆರೋಗ್ಯ ಸಮಸ್ಯೆಗಳನ್ನು ಅತಿರಂಜಿತವಾಗಿ ಇಲ್ಲವೆ ಸಂಭ್ರಮದ ರೀತಿಯಲ್ಲಿ ಚರ್ಚಿಸಲಾಗುತ್ತದೆ.ಇದರ ಬದಲು ಇದೊಂದು ಸಾಮಾನ್ಯ ಸಂಗತಿಯಂತೆ ಸ್ವೀಕರಿಸಬೇಕು.ಹುಡುಗರಿಗೆ ಗಡ್ಡ ಮೀಸೆ ಮೂಡುವುದು ಎಷ್ಟು ಸಹಜವೋ ಹೆಣ್ಮಕ್ಕಳು ಋತುಮತಿಯಾಗುವುದು ಅಷ್ಟೇ ಸಹಜ ಎಂಬುದು ಸಮಾಜ ಸ್ವೀಕರಿಸಬೇಕು ಎಂದರು.

ಎಲ್ಲ ಹೆಣ್ಮಕ್ಕಳಿಗೆ ತಮ್ಮ ದೇಹದ ಬಗ್ಗೆಯಾಗಲಿ‌.ಆರೋಗ್ಯದ ಬಗೆಯಾಗಲಿ ತಜ್ಞ ವೈದ್ಯರನ್ನು ಭೇಟಿ ಮಾಡುವುದು ಕಷ್ಟದ ವಿಷಯವಾಗಿದೆ. ಇದಕ್ಕೆ ಹಣಕಾಸಿನ ಅನುಕೂಲದ ಕೊರತೆಯು ಒಂದು ಪ್ರಮುಖ ಕಾರಣವಾಗಿದೆ.

ದೇಹದ ಬೆಳವಣಿಗೆ ಬಗ್ಗೆ ಎಲ್ಲರಿಗೂ ಕುತೂಹಲವಿದೆ.ಯೂರೋಪ್ ದೇಶಗಳಲ್ಲಿ ಆರಂಭದಲ್ಲೆ ಗುಡ್ ಟಚ್ ಬ್ಯಾಡ್ ಟಚ್ ಬಗ್ಗೆ ಅರಿವು ಮೂಡಿಸಲಾಗುತ್ತದೆ.ಹೈಸ್ಕೂಲ್ ಹಂತದಲ್ಲಿ ಲೈಂಗಿಕ ಶಿಕ್ಷಣ ನೀಡಲಾಗುತ್ತದೆ. ಆದರೆ ಭಾರತದಲ್ಲಿ ಆ ಪರಿಸ್ಥಿತಿ ಇಲ್ಲವಾಗಿದೆ‌.ಇಲ್ಲಿ ಅರಿವು ಮೂಡಿಸುವುದೂ ಹೆಚ್ಚು ಅನಿವಾರ್ಯವಾಗಿದೆ‌.ಅ ಕೊರತೆಯನ್ನು ತಮ್ಮ ಕೃತಿ ತುಂಬುತ್ತದೆಂದು ಸದಾಶಯ ವ್ಯಕ್ತಪಡಿಸಿದರು.

ಋತುಮತಿಯಾದ ಮಹಿಳೆಯರನ್ನು ಅಶುಭ.ಮೈಲಿಗೆ ಎಂದು ಪರಿಭಾವಿಸುತ್ತಾರೆ.ಇದೊಂದುಸಹಜ ನೈಸರ್ಗಿಕ ಕ್ರಿಯೆ ಎಂಬ ಸಹಜ ಅರಿವು ಸಮಾಜಕ್ಕಿಲ್ಲವಾಗಿದೆ.ಸ್ವತಃ ಬಹಳಷ್ಟು ಮಹಿಳೆಯರಿಗೆ ಋತುಚಕ್ರದ ಅರಿವಿಲ್ಲ.ನಾವು ಡಿಜಿಟಲ್ ಯುಗದಲ್ಲಿದ್ದರು ಶೇ೮೬ ರಷ್ಟು ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡುಗಳಿಲ್ಲ.ಬಟ್ಟೆ.ಮಣ್ಣು ‌ಕಾಗದಗಳಿಂದ ಋತುಚಕ್ರ ಕ್ರಿಯೆ ನಿರ್ವಹಿಸುವ ದುಸ್ಥಿತಿ ದೇಶದಲ್ಲಿದೆ ಎಂದು ವಿಷಾದಿಸಿದರು.

ರಾಮನಗರ ಲೋಕಾಯುಕ್ತ ಎಸ್ ಪಿ ಸ್ನೇಹಾ ಪಿ.ವಿ. ಪುಸ್ತಕ ಬಿಡುಗಡೆಗೊಳಿಸಿದರು.ಸಮಾರಂಭದಲ್ಲಿ ನಿವೃತ್ತ ಉಪನ್ಯಾಸಕ ಎಸ್ ಬಿ.ಶಂಕರೇಗೌಡ.ಪರಿಚಯ ಪ್ರಕಾಶನದ ಶಿವಕುಮಾರ.ಸ್ರಿ ರೋಗ ತಜ್ನೆ ಸುಶ್ಮಾ ವಿ ದೇವ್. ಆರಾಧ್ಯ.ಕವಯತ್ರಿ ಆಶಾ ಹನಿಯಂಬಾಡಿ ಸಂವಾದ ನಡೆಸಿಕೊಟ್ಟರು. ಉಪನ್ಯಾಸಕಿ ಶ್ವೇತಾ ಕಾರ್ಯಕ್ರಮ ನಿರ್ವಹಿಸಿದರು

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!