Monday, October 19, 2026
spot_img

ಡಾಲು ರವಿ ಮನ್ ಮುಲ್ ಗೆ ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಲಿ:ಜೆಡಿಎಸ್ ಅಧ್ಯಕ್ಷ ಸವಾಲು

ಕೆ.ಆರ್.ಪೇಟೆ,ಅ.19: ಮನ್‌ಮುಲ್ ನಿರ್ದೇಶಕ ಡಾಲು ರವಿ ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನೇ ಪಡೆದುಕೊಂಡಿಲ್ಲ ಹಾಗಾಗಿ ಅವರು ಜೆಡಿಎಸ್ ಪಕ್ಷದ ಕಾರ್ಯಕರ್ತರೇ ಅಲ್ಲ. ಆದರೂ ನಾನು ಜೆಡಿಎಸ್ ಕಾರ್ಯಕರ್ತ ಎಂದು ಹೇಳಿಕೊಳ್ಳುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ತಾಲ್ಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷರಾದ ಮಲ್ಲೇನಹಳ್ಳಿ ಎಂ.ಮೋಹನ್ ಹೇಳಿದರು.

ಅವರು ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ತಾಲ್ಲೂಕು ಜೆಡಿಎಸ್ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಮ್ಮ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ಮೊನ್ನೆ ತಮ್ಮ ಬೆಂಬಲಿಗರ ಸಭೆಯಲ್ಲಿ ಬೆದರಿಕೆ ಹಾಕಿದ್ದು, ಮುಂದಿನ ದಿನಗಳಲ್ಲಿ ಇದು ಮರುಕಳಿಸಿದರೆ ಜೆಡಿಎಸ್ ಪಕ್ಷದ ಸಾವಿರಾರು ಕಾರ್ಯಕರ್ತರು ತಮ್ಮ ಮನೆಯ ಮುಂದೆ ಬೃಹತ್ ಚಳುವಳಿ ನಡೆಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಡಾಲು ರವಿ ಅವರಿಗೆ ಮಲ್ಲೇನಹಳ್ಳಿ ಮೋಹನ್ ಎಚ್ಚರಿಕೆ ನೀಡಿದರು.

ನಮ್ಮ ಶಾಸಕರಾದ ಹೆಚ್.ಟಿ.ಮಂಜಣ್ಣ ಅವರನ್ನಾಗಲಿ ಅಥವಾ ನಮ್ಮ ಪಕ್ಷದ ಮುಖಂಡರನ್ನಾಗಿ ಏಕವಚನದಲ್ಲಿ ಟೀಕೆ ಮಾಡಿದರೆ ನಾವು ಸುಮ್ಮನೆ ಕೂರುವುದಿಲ್ಲ. ನಿಮ್ಮ ಯಾವುದೇ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ. ನಿಮಗೆ ತಾಲ್ಲೂಕು ಹಾಲು ಉತ್ಪಾದಕರು ಜವಾಬ್ದಾರಿ ಕೊಟ್ಟಿದ್ದಾರೆ ಆ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಣೆ ಮಾಡಿ ಆದರೆ ನಮ್ಮ ಪಕ್ಷದ ಕಾರ್ಯಕರ್ತರ ಸಹವಾಸಕ್ಕೆ ಬರಬೇಡಿ ಎಂದು ತಾಕೀತು ಮಾಡಿದರು. ನೀವು ಜೆಡಿಎಸ್ ಪಕ್ಷದವರಾಗಿದ್ದರೆ ಟಿಎಪಿಸಿಎಂಎಸ್ ಚುನಾವಣೆಯಲ್ಲಿ, ಪಿ.ಎಲ್.ಡಿ ಬ್ಯಾಂಕ್ ಚುನಾವಣೆಯಲ್ಲಿ ಹಾಗೂ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿದ್ದು ಏಕೆ? ಎಂದು ಪ್ರಶ್ನಿಸಿದರು. ಮೊನ್ನೆ ಐಬಿಯಲ್ಲಿ ನಡೆದ ತಮ್ಮ ಬೆಂಬಲಿಗರ ಸಭೆಯಲ್ಲಿ ಯಾರು ಜೆಡಿಎಸ್ ಮುಖಂಡರಿದ್ದರು? ವೇದಿಯಲ್ಲಿದ್ದವರಲ್ಲಿ ಶೇ.99ರಷ್ಟು ಮಂದಿ ಎಲ್ಲರೂ ಕಾಂಗ್ರೆಸ್ ಮುಖಂಡರೇ ಆಗಿದ್ದಾರೆ. ಆದರೂ ನಾನು ಈಗಲೂ ಜೆಡಿಎಸ್ ಪಕ್ಷದ ಕಾರ್ಯಕರ್ತ ಎಂದು ಹೇಳುವುದಕ್ಕೆ ಯಾವ ನೈತಿಕತೆ ಇದೆ. ಶಾಸಕರನ್ನು ರಾಜೀನಾಮೆ ನೀಡಿ ಚುನಾವಣೆಗೆ ಬನ್ನಿ ಎಂದು ಸವಾಲು ಹಾಕಿದ್ದೀರಿ, ನೀವು ಮನ್‌ಮುಲ್ ನಿರ್ದೇಶಕರ ಸ್ಥಾನಕ್ಕೆ ರಾಜೀನಾಮೆ ನೀಡಿ ಬನ್ನಿ ನಾನೂ ಸಹ ಚುನಾವಣೆಗೆ ನಿಲ್ಲುತ್ತೇನೆ. ನಾನು ನಿಮ್ಮನ್ನು ಸೋಲಿಸದೇ ಇದ್ದಲ್ಲಿ ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ. ಮೊದಲು ನನ್ನನ್ನು ಸೋಲಿಸಿ ನಂತರ ಶಾಸಕರನ್ನು ಎದುರಿಸಿ ಎಂದು ಮಲ್ಲೇನಹಳ್ಳಿ ಮೋಹನ್ ಸವಾಲು ಹಾಕಿದರು.

2028ಕ್ಕೆ ನೀವೇ ಅಭ್ಯರ್ಥಿಯಾಗಿ ಮಂಜಣ್ಣ ಅವರೇ ಜೆಡಿಎಸ್ ಅಭ್ಯರ್ಥಿಯಾಗುತ್ತಾರೆ. ಚುನಾವಣಾ ಅಖಾಡದಲ್ಲಿ ಸೈನಿಕರಂತಹ ಜೆಡಿಎಸ್ ಕಾರ್ಯಕರ್ತರು ಮಂಜಣ್ಣ ಅವರನ್ನು ಮತ್ತೊಮ್ಮೆ ಗೆಲ್ಲಿಸಿ ಶಾಸಕರನ್ನಾಗಿ ಮಾಡಲು ಶ್ರಮಿಸುತ್ತೇವೆ. ನಿಮಗೆ ತಾಕತ್ ಇದ್ದರೆ ಮಂಜಣ್ಣ ಗೆಲುವನ್ನು ತಡೆಯಿರಿ ಎಂದು ಸವಾಲು ಹಾಕಿದರು.
ತಾಲ್ಲೂಕು ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಬಲದೇವ್ ಮಾತನಾಡಿ ಗ್ರಾಮೀಣ ಶೈಲಿಯಲ್ಲಿ ನಾನು ಮಾತನಾಡಿದ್ದೇನೆ ಆದರೆ ನೀವು ನಿಮ್ಮ ಮನೆಗೆ ಬಂದ ಹಾಲು ಉತ್ಪಾದಕರ ಸಹಕಾರ ಸಂಘಗಳ ಚುನಾಯಿತ ಪ್ರತಿನಿಧಿಗಳಿಗೆ ಹಾಗೂ ಮುಖಂಡರಿಗೆ ಬಾಯಿಗೆ ಬಂದಂತೆ ಅಪ್ಪ-ಅವ್ವ ಎಂದು ಬೈಯ್ದು ಕಳಿಸುತ್ತಿರುವುದು ಸರಿಯೇ? ನಮಗೂ ನಿಮ್ಮಂತೆಯೇ ಕೆಟ್ಟ ಪದಗಳನ್ನು ಬಳಸಲು ಬರುತ್ತದೆ ಆದರೆ ನಮ್ಮ ಶಾಸಕರ ಸೂಚನೆಯ ಮೇರೆಗೆ ಎಲ್ಲವನ್ನು ಸಹಿಸಿಕೊಂಡು ಸುಮ್ಮನಿದ್ದೇವೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ನಿಮ್ಮ ಹೊಲಸು ಮಾತುಗಳಿಂದ ಟೀಕೆ ಮಾಡಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಏಕವಚನದಲ್ಲಿಯೇ ಡಾಲು ರವಿ ವಿರುದ್ದ ವಾಗ್ದಾಳಿ ನಡೆಸಿದರು.
ಸಿಂಧುಘಟ್ಟ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಐ.ಗಿರೀಶ್ ಮಾತನಾಡಿ ಡಾಲು ರವಿ ಅವರೇ ಈಗಿನ ನಿಮ್ಮ ಆಧಾಯದ ಮೂಲ ಯಾವುದು ಬಹಿರಂಗ ಪಡಿಸಿ?, ಯಾವ ಉದ್ಯಮ ನಡೆಸುತ್ತಿದ್ದೀರಿ, ನೀವು ಮೊದಲು ಸೆಕೆಂಡ್ಸ್ ಮಧ್ಯ ಮಾರುತ್ತಿದ್ರಿ, ನಂತರ ಮರಳು ದಂದೆ ಮಾಡ್ತಾ ಇದ್ರಿ, ನಂತರ ಹೋಟೆಲ್ ನಡೆಸ್ತಾ ಇದ್ರಿ, ನಂತರ 2015ರಲ್ಲಿ ಮನ್‌ಮುಲ್ ನಿರ್ದೇಶಕರಾಗಿ ಆಯ್ಕೆ ಆದ ಮೇಲೆ 5ಕೋಟಿ ರೂ ಮನೆ ಕಟ್ಟಿದ್ದೀರಿ ಯಾವ ಆಧಾಯದಿಂದ ಕಟ್ಟಿದ್ದೀರಿ ಸ್ವಲ್ಪ ತಿಳಿಸಿ ನಂತದ ನಮ್ಮ ಜೆಡಿಎಸ್ ಪಕ್ಷದ ಕಿಕ್ಕೇರಿ ಮಧು ಅಕ್ಕಿ, ತೆಂಗಿನ ಕಾಯಿ ವ್ಯಾಪಾರದ ಬಗ್ಗೆ ಮಾತನಾಡಿ ಎಂದು ತಿರುಗೇಟು ನೀಡಿದರು.
ಹರಳಹಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಭೈರಾಪುರ ಹರೀಶ್ ಮಾತನಾಡಿ ನಮ್ಮ ಶಾಸಕರಾದ ಹೆಚ್.ಟಿ.ಮಂಜಣ್ಣ ಅವರು ನಡೆಸುತ್ತಿರುವ ಜಲ್ಲಿ ಕ್ರಷರ್ ಕಾನೂನು ಪ್ರಕಾರ ನಡೆಯುತ್ತಿದೆ ಆದರೆ ನೀವು ಕಾನೂನು ಬಾಹಿರವಾಗಿ ನಡೆಯತ್ತಿದೆ ಎಂದು ಟೀಕೆ ಮಾಡುತ್ತಿರುವುದಕ್ಕೆ ದಾಖಲೆ ಕೊಡಿ. ಸುಮ್ಮನೆ ಟೀಕಿಸುವದನ್ನು ಬಿಟ್ಟು ಲೀಗಲ್ ಇಲ್ಲದಿದ್ದರೆ ನಿಮ್ಮ ಕಾಂಗ್ರೆಸ್ ಪಕ್ಷದ ಸರಕಾರವೇ ಇದೆ ತನಿಖೆ ಮಾಡಿಸಿ ನೋಡೋಣ ಎಂದು ಸವಾಲು ಹಾಕಿದರು.
ಮುಖಂಡರಾದ ಐಕನಹಳ್ಳಿಕೊಪ್ಪಲು ದೇವೇಗೌಡ ಮಾತನಾಡಿ ನಮ್ಮ ಪತ್ನಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವ ಡೇರಿಯಲ್ಲಿ ಎಲ್ಲವೂ ಪಾರದರ್ಶಕವಾಗಿ ನಡೆದಿರುತ್ತದೆ. ಬೇರೆ ಬೇರೆ ಖಾತೆಗಳಿಗೆ ಹೋದ ಹಣ ಲೆಕ್ಕವನ್ನೂ ಸಹ ನೀಡಲಾಗಿದೆ ಎಲ್ಲ ಹಣವನ್ನು ಡೇರಿ ಖಾತೆಗೆ ಜಮಾ ಮಾಡಲಾಗಿದೆ ಈ ಬಗ್ಗೆ ಸಹಕಾರ ಕಾನೂನು 64 ರೀತ್ಯಾ ತನಿಖೆ ನಡೆಯುತ್ತಿದೆ ತನಿಖೆಯಲ್ಲಿ ನಮ್ಮ ಶಾಸಕ ಮಂಜಣ್ಣ ಅವರು ಯಾವುದೇ ಹಸ್ತಕ್ಷೇಪ ಮಾಡುತ್ತಿಲ್ಲ ತನಿಖೆ ಪಾರದರ್ಶಕವಾಗಿ ನಡೆದು ನಮ್ಮದೇನು ತಪ್ಪಿಲ್ಲ ಎಂದು ತನಿಖಾ ವರದಿ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್ ಮಾತನಾಡಿ ನಮ್ಮ ನಾಯಕರಾದ ಹೆಚ್.ಟಿ.ಮಂಜಣ್ಣ ಅವರ ಬಗ್ಗೆ ಹಾಗೂ ನಮ್ಮ ಪಕ್ಷದ ಕೆ.ಬಿ.ಮಧು ಸೇರಿದಂತೆ ಯಾವುದೇ ಮುಖಂಡರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಸಬೇಕು. 2028ಕ್ಕೆ ಶಾಸಕರಾದ ಮಂಜಣ್ಣ ಅವರನ್ನು ಮತ್ತೊಮ್ಮೆ ಗೆಲ್ಲಿಸಿ, ಮೈತ್ರಿ ಸರಕಾರದಲ್ಲಿ ಸಚಿವರನ್ನಾಗಿ ಮಾಡುತ್ತೇವೆ ಎಂಬ ಶಪಥ ಮಾಡಿದ್ದೇವೆ. ತಾಕತ್ ಇದ್ದರೆ ತಡೆಯಿರಿ ಎಂದು ಡಾಲು ರವಿ ಅವರಿಗೆ ಸವಾಲು ಹಾಕಿದರು.
ಟಿಎಪಿಸಿಎಂಎಸ್ ನಿರ್ದೇಶಕ ನಾಗರಘಟ್ಟ ದಿಲೀಪ್‌ಕುಮಾರ್ ಮಾತನಾಡಿ ಡಾಲು ರವಿ ಅವರು ಮೊದಲು ತಾವು ಯಾವ ಪಕ್ಷ ಎಂಬುದನ್ನು ತಾಲ್ಲೂಕಿನ ಜನತೆಗೆ ತಿಳಿಸಬೇಕು. ನಿಮ್ಮ ಕುಟುಂಬದ ಸದಸ್ಯರನ್ನು ನಿಲ್ಲಿಸುವ ಮಾತುಗಳು ಕೇಳಿ ಬರುತ್ತಿವೆ. ಯಾವ ಪಕ್ಷದಿಂದ ನಿಲ್ಲಿಸುತ್ತೀರಿಅದನ್ನು ಬಹಿರಂಗಪಡಿಸಬೇಕು. ನಾನು ಜೆಡಿಎಸ್ ಪಕ್ಷದಿಂದ ನಿಲ್ಲುತ್ತೇನೆ. ನೀವು ಮೊದಲು ನನ್ನನ್ನು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸೋಲಿಸಿ ನಂತರ ನಮ್ಮ ಶಾಸಕರಾದ ಹೆಚ್.ಟಿ.ಮಂಜಣ್ಣ ಅವರನ್ನು ಸೋಲಿಸುವ ಮಾತುಗಳನ್ನಾಡಿ ಎಂದು ತಿರುಗೇಟು ನೀಡಿದ್ದಾರೆ.
ಸಭೆಯಲ್ಲಿ ತಾಲ್ಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ಮೆಣಸ ಮಹದೇವೇಗೌಡ, ತಾಲ್ಲೂಕು ಜೆಡಿಎಸ್ ರೈತ ಮೋರ್ಚಾ ಅಧ್ಯಕ್ಷ ಹುಲ್ಲೇಗೌಡ, ಟಿಎಪಿಸಿಎಂಎಸ್ ಉಪಾಧ್ಯಕ್ಷ ಕಾಯಿ ಮಂಜೇಗೌಡ, ಹಿರಿಯ ಜೆಡಿಎಸ್ ಮುಖಂಡರಾದ ಬೇಲದಕೆರೆ ನಂಜಪ್ಪ, ಬಲ್ಲೇನಹಳ್ಳಿ ರಾಮಚಂದ್ರನ್, ವಿ.ಎಸ್.ಧನಂಜಯ್‌ಕುಮಾರ್, ಐನೋರಹಳ್ಳಿ ಮಲ್ಲೇಶ್, ಕಿಕ್ಕೇರಿ ಶೇಖರ್, ಐಕನಹಳ್ಳಿ ಕೃಷ್ಣೇಗೌಡ, ತೋಟಪ್ಪಶೆಟ್ಟಿ, ಎಸ್.ಐ.ಗಿರೀಶ್, ಜಿ.ಪಂ.ಮಾಜಿ ಉಪಾಧ್ಯಕ್ಷ ಪೂವನಹಳ್ಳಿ ರೇವಣ್ಣ, ಟಿಎಪಿಸಿಎಂಎಸ್ ನಿರ್ದೇಶಕರಾದ ಕುರುಬಹಳ್ಳಿ ನಾಗೇಶ್, ಎನ್.ಕೆ. ದಿಲೀಪ್‌ಕುಮಾರ್, ಕಿಕ್ಕೇರಿ ಮಧು, ಹೆಚ್.ಟಿ.ಲೋಕೇಶ್, ವಡ್ಡರಹಳ್ಳಿ ಮಹಾದೇವೇಗೌಡ, ವಕೀಲರಾದ ಕೆ.ಆರ್.ಮಹೇಶ್, ಎಸ್.ಆರ್.ನವೀನ್‌ಕುಮಾರ್, ಐಕನಹಳ್ಳಿಕೊಪ್ಪಲು ದೇವೇಗೌಡ, ಬಿ.ಬಿ.ಕಾವಲು ನಂಜುಂಡಸ್ವಾಮಿ, ಭೈರಾಪುರ ಹರೀಶ್, ಅಶೋಕ್, ರೇಖಾ, ರತಿಮಹಾದೇವ್, ಸೇರಿದಂತೆ ನೂರಾರು ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

====================================

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!