Friday, November 7, 2025
spot_img

ನಗರ ಸ್ಥಳೀಯ ಸಂಸ್ಥೆಗಳ ಅವಧಿ ವಿಸ್ತರಣೆ ಕನಸು ಭಗ್ನ!

ಅವಧಿ ಮುಗಿದ ನಗರ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಿಸದಂತೆ ಹೈಕೋರ್ಟ್ ಮೆಟ್ಟಿಲೇರಿದ್ದ ನಗರಸಭಾ ಸದಸ್ಯರ ಕನಸು ನನಸಾಗದಿರುವುದು ದಿಟವಾಗಿದೆ.

ರಾಜ್ಯದ ಹಲವು ನಗರ ಸ್ಥಳೀಯ ಸಂಸ್ಥೆಗಳಿಗೆ ೨೦೧೮ ರಲ್ಲಿ ಚುನಾವಣೆಗಳು ನಡೆದಿದ್ದವು.ನಂತರದಲ್ಲಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯ ಪ್ರಥಮ ಸಭೆಗಳು ಆಕ್ಟೋಬರ್ ಹಾಗೂ ನವೆಂಬರ್ ೨೦೧೮ ರಲ್ಲಿ ನಡೆದಿದ್ದವು.

ಮೊದಲ ೩೦ ತಿಂಗಳ ಅಧ್ಯಕ್ಷರ ಅವಧಿ ಮುಗಿದ ಮೇಲೆ ಎರಡನೇ ಅವಧಿಯ ಅಧ್ಯಕ್ಷರ ಆಯ್ಕೆಯ ಸಂಧರ್ಭದಲ್ಲಿ ಕೆಲವರು ಮೀಸಲಾತಿ ನಿಗದಿ ಸಂಬಂದ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಇದರ ಪರಿಣಾಮವಾಗಿ ಎರಡನೇ ಅವಧಿ ೧೩ ತಿಂಗಳು ವಿಳಂಬವಾಗಿ ಎರಡನೇ ಅವಧಿಯಲ್ಲಿ ಅಧ್ಯಕ್ಷರ ಅಧಿಕಾರ ೧೭ ತಿಂಗಳಿಗೆ ಸಿಮೀತವಾಯಿತು.

ಈಗ ರಾಜ್ಯದ ಬಹುತೇಕ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರವಧಿ ಮುಗಿಯುತ್ತಿದ್ದಂತೆ ಕೋರ್ಟು ಮೆಟ್ಟಿಲೇರಿದ ೬೦ ಕ್ಕು ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳ ಕೌನ್ಸಿಲರುಗಳು ತಮ್ಮ ಅಧಿಕಾರವಧಿಯನ್ನು ೧೩ ತಿಂಗಳು ವಿಸ್ತರಿಸುವಂತೆ ಕೋರಿದ್ದರು.

ವಾಸ್ತವದಲ್ಲಿ ಈ ೧೩ ತಿಂಗಳ ಅವಧಿಯಲ್ಲಿ ಆಡಳಿತಾಧಿಕಾರಿ ಅಧ್ಯಕ್ಷತೆಯಲ್ಲಿ ಕೌನ್ಸಿಲ್ ಸಭೆಗಳು ನಡೆದು ಅನುದಾನ ಹಂಚಿಕೆ ಹಾಗೂ ಸದಸ್ಯರು ಭತ್ಯೆಯನ್ನು ಪಡೆದಿದ್ದರು.ಆದಾಗ್ಯೂ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತು.

ಆದರೆ ಭಾರತ ಸಂವಿಧಾನ ಅನುಚ್ಚೇಧ ೨೪೩(ಯೂ)(೧) ರಂತೆ ನಗರ ಸ್ಥಳೀಯ ಸಂಸ್ಥೆಯ ಮೊದಲ ಸಭೆಯಿಂದ ಐದು ವರ್ಷಗಳಿಗೆ ಅದರ ಅಧಿಕಾರವಧಿ ಮುಗಿಯಬೇಕು ಎಂದು ಹೇಳುತ್ತದೆ.

ಕರ್ನಾಟಕ ಪೌರಸಭೆಗಳ ಅಧಿನಿಯಮ೧೯೬೪ ಪ್ರಕರಣ ೧೮(೧-ಎ) ಸಹ ಯಾವುದೆ ನಗರ ಸ್ಥಳೀಯ ಸಂಸ್ಥೆ ಮೊದಲ ಸಭೆಯಿಂದ ಐದು ವರ್ಷಗಳ ಅವಧಿಗೆ ಅದರ ಅಧಿಕಾರ ಕೊನೆಗೊಳ್ಳುತ್ತದೆ ಎಂದು ಹೇಳುತ್ತದೆ.ನ್ಯಾಯಾಲಯದಲ್ಲಿ ಪ್ರಕರಣ ಬಾಕೀ ಇರುವುದನ್ನು ಮುಂದಿಟ್ಟುಕೊಂಡು
ಮಂಡ್ಯ ಜಿಲ್ಲೆಯ ಕೆಲ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರು. ಅಧ್ಯಕ್ಷರು ನಿಯಮಬಾಹಿರವಾಗಿ ಕಚೇರಿ ಪ್ರವೇಶಿಸಿ ಅಧಿಕಾರ ಚಲಾಯಿಸಲು ಯತ್ನಿಸಿದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿಗಳು ಮೇಲ್ಕಂಡ ಕಾಯ್ದೆಯನ್ವಯ ಆದೇಶ ಹೊರಡಿಸಿ ಸ್ಥಳೀಯ ಸಂಸ್ಥೆಗಳ ಮಾಜಿ ಸದಸ್ಯರು ಯಾವುದೆ ಅಧಿಕಾರ ಚಲಾಯಿಸದಂತೆ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚನೆ ನೀಡಿ ಆದೇಶ ಹೊರಡಿಸಿದ್ದಾರೆ.

ಈ ಸಂಬಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಸದಸ್ಯರಿಗೆ ಸೂಕ್ತ ಕಾನೂನಿನ ಮನವರಿಕೆ ಮಾಡಿಕೊಡಲು ಮುಖ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಅವಧಿ ಮೀರಿದ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಕಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದ ಆದೇಶಕ್ಕಾಗಿ ಕಾಯಲಾಗುತ್ತಿದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಈ ಆದೇಶದೊಂದಿಗೆ ಮುಂದಿನ ೧೩ ತಿಂಗಳು ಅಧಿಕಾರ ವಿಸ್ತರಣೆಯ ಕನಸು ಕಾಣುತ್ತಿದ್ದ. ಸದಸ್ಯರ ಕನಸಿಗೆ ಬಲೂನು ಚುಚ್ಚಿದಂತಾಗಿದ್ದು.ಈ ಎಲ್ಲ ಸದಸ್ಯರು ಈಗ ಮಾಜಿಗಳಾದಂತಾಗಿದೆ.

ಇನ್ನು ನ್ಯಾಯಾಲಯ ಸೂಚನೆಯಂತೆ ಚುನಾವಣೆ ದಿನಾಂಕ ಸಂಬಂದ ಚುನಾವಣಾ ಆಯೋಗ ಹಾಗೂ ಸರ್ಕಾರದ ಸಭೆ ನ೫ ರಂದು ನಡೆಯಲಿದೆ.ಸರಕಾರದ ಅವೈಜ್ಞಾನಿಕ ಮೀಸಲು ನಿಗದಿ ವಿಳಂಬ ಧೋರಣೆಯಿಂದ ಕಳೆದ ಕೌನ್ಸಿಲ್ ಅವಧಿ ಏಳು ವರ್ಷಗಳ ಕಾಲ ನಡೆದಂತಾಗಿದೆ.ಸರಕಾರ ಇನ್ನಾದರೂ ಸಕಾಲಕ್ಕೆ ಚುನಾವಣೆ ನಡೆಸಿ ಆಡಳಿತ ವಿಕೇಂದ್ರೀಕರಣ ನೀತಿಯನ್ನು ಎತ್ತಿ ಹಿಡಿಯುವುದೆ ಇಲ್ಲವೆ ಬಿಬಿಎಂಪಿ ಜಿಪಂ ತಾಪಂ ಮಾದರಿಯಲ್ಲಿ ಇದನ್ನು ಕಸದ ಬುಟ್ಟಿಗೆ ಹಾಕುವುದೆ ಕಾದು ನೋಡಬೇಕಿದೆ.ಚುನಾವಣೆ ವಿಳಂಬವಾದರೆ ಆಯಾ ಪಕ್ಷದ ಕಾರ್ಯಕರ್ತರಿಗೆ ಅವರ ಪಕ್ಷದ ನಾಯಕರು ಮಕ್ಕಳು ಮರಿ ಮಕ್ಕಳಿಗೆ ಜೈಕಾರ ಹಾಕುವುದು ಫ್ಲೆಕ್ಸ್ ಕಟ್ಟುವುದು ಖಾಯಂ ಆಗಲಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!