ನೇರಪಾವತಿಗೆ ಆಗ್ರಹಿಸಿ ಹೊರಗುತ್ತಿಗೆ ನೌಕರರ ಪ್ರತಿಭಟನೆ
ಹಣಕಾಸು ಇಲಾಖೆಯ ಮುಂದಿರುವ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ನೇರಪಾವತಿ ಕಡತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಂಕಿತ ಹಾಕುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ನಗರಪಾಲಿಕೆ ನಗರಸಭೆ ಪುರಸಭೆ ಪಟ್ಟಣ ಪಂಚಾಯತಿ ಹೊರಗುತ್ತಿಗೆ ನೌಕರರ ಸಂಘಟನೆಯ ನೇತೃತ್ವದಲ್ಲಿ ನಗರದ ಫ್ರೀಡಂ ಪಾರ್ಕ್ ನಲ್ಲಿ ಹೊರಗುತ್ತಿಗೆ ನೌಕರರು ಧರಣಿ ನಡೆಸಿದರು.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಯಂ ನೇರಪಾವತಿ ಗುತ್ತಿಗೆ ಎಂಬ ತಾರತಮ್ಯ ನಿವಾರಣೆ ಮಾಡುವಂತೆ ಆಗ್ರಹಿಸಿದ ಪ್ರತಿಭಟನಾಕಾರರು
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರನ್ನು ಈಗಾಗಲೇ ನೇರಪಾವತಿಗೆ ತರಲಾಗಿದೆ.ಆದರೆ ಪೌರಕಾರ್ಮಿಕರೊಟ್ಟಿಗೆ ಸ್ವಚ್ಚತೆಯಲ್ಲಿ ಭಾಗೀಯಾಗಿರುವ ಕಸದ ಚಾಲಕರು ಲೋಡರ್ಸ್ ಕ್ಲೀನರ್ಸ್ ನೀರು ಸರಬರಾಜು ಸಹಾಯಕರು ಸೇರಿದಂತೆ 16.794 ಹೊರಗುತ್ತಿಗೆ ನೌಕರರ ನೇರಪಾವತಿ ಕಡತ ಮೂರನೇ ಬಾರಿಗೆ ಹಣಕಾಸು ಇಲಾಖೆಗೆ ಮಂಡಿತವಾಗಿದೆ.
ಮುಖ್ಯಮಂತ್ರಿಗಳು ಯಾವುದೆ ಮೀನಾಮೇಷ ಎಣಿಸದೆ ಕಡತಕ್ಕೆ ಅಂಕಿತ ಹಾಕಬೇಕಿದೆ.ಇಲ್ಲವಾದಲ್ಲಿ ಈ ಎಲ್ಲ ಕಾರ್ಮಿಕರಿಗೆ ಸ್ವತಃ ಮುಖ್ಯಮಂತ್ರಿಗಳೇ ತಾರತಮ್ಯ ಎಸಗಿದಂತಾಗುತ್ತದೆ.
ಈ ಹಿನ್ನೆಲೆಯಲ್ಲಿ ಈ ಸಾರಿಯ ಬಜೆಟ್ಟಿನಲ್ಲಿ ನೇರಪಾವತಿ ಘೋಷಣೆಯಾಗುವಂತೆ ಮುಖ್ಯಮಂತ್ರಿಗಳು ಕಡತಕ್ಕೆ ಅನುಮೋದನೆ ನೀಡಬೇಕು.ಇದರಿಂದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಕಾರ್ಮಿಕರ ನಡುವಿನ ತಾರತಮ್ಯ ಕೊನೆಯಾಗಲಿದೆ.
ರಾಜ್ಯ ಸರ್ಕಾರ ಈ ಬಜೆಟ್ ನಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಗೆ ನೇರಪಾವತಿ ಘೋಷಣೆ ಮಾಡದಿದ್ದಲ್ಲಿ ಮುಂದಿನ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವ ಕುರಿತು ಅಗತ್ಯ ಪರಾಮರ್ಶೆ ನಡೆಸಲಾಗುವುದು.ಈ ಕುರಿತು ಕಾಂಗ್ರೆಸ್ ಸರಕಾರ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ಕುರಿತು
ನಿರ್ಧಾರವನ್ನು ಈ ಬಜೆಟ್ಟಿನಲ್ಲಿ ಘೋಷಿಸುವಂತೆ ಒತ್ತಾಯಿಸಿದರು.
ಬೇಡಿಕೆಗಳು
೧) ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಎಲ್ಲ ಹೊರಗುತ್ತಿಗೆ ನೌಕರರನ್ನು ನೇರಪಾವತಿಗೆ ತರುವ ಪ್ರಸ್ತಾವನೆಗೆ ಮುಖ್ಯಮಂತ್ರಿಗಳು ಅಂಕಿತ ಹಾಕಬೇಕು.
೨)ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಾಕೀ ಉಳಿದಿರುವ ಪೌರಕಾರ್ಮಿಕ ಹುದ್ದೆಗಳ ಭರ್ತಿಗೆ ಶೀಘ್ರ ಅಗತ್ಯ ಕ್ರಮವಹಿಸಬೇಕು.
೩)ನಗರ ಸ್ಥಳೀಯ ಸಂಸ್ಥೆಗಳ ವೃಂದ ಮತ್ತು ನೇಮಕಾತಿಯಲ್ಲಿ ಅಗತ್ಯ ಪರಿಷ್ಕರಣೆ ನಡೆಸಿ ಅಗತ್ಯಕನುಗುಣವಾಗಿ ಪೌರಚಾಲಕ ಹುದ್ದೆಗಳನ್ನು ಸೃಜಿಸಬೇಕು
ಮನವಿ ಸ್ವೀಕರಿಸಿದ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ರವೀಂದ್ರ ನೇರಪಾವತಿ ಕಡತ ಈಗಾಗಲೇ ಹಣಕಾಸು ಇಲಾಖೆಗೆ ರವಾನಿಸಿದ್ದು ಸರಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ.ಬಾಕೀ ಇರುವ ಪೌರಕಾರ್ಮಿಕರ ನೇಮಕಾತಿ ಸಂಬಂದ ಪ್ರಸ್ತಾವನೆ ಸಲ್ಲಿಸಲಾಗಿದೆ.ಪ್ರತಿ ಮೂರು ವರ್ಷಕೊಮ್ಮೆ ವೃಂದ ಮತ್ತು ನೇಮಕಾತಿ ನಿಯಮಗಳ ಪರಿಷ್ಕರಣೆ ಮಾಡಲಾಗುತ್ತಿದ್ದು.ನಗರಗಳ ಅಗತ್ಯಕ್ಕೆ ತಕ್ಕಂತೆ ಪೌರಚಾಲಕ ಹುದ್ದೆಗಳನ್ನು ಸೃಜಿಸಲು ಅಗತ್ಯ ಕ್ರಮವಹಿಸುವುದಾಗಿ ತಿಳಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ. ಬೀದರ್ ಜಿಲ್ಲಾಧ್ಯಕ್ಷ ಪವನ್ ಯಾದಗಿರಿ ಗವೀಂದ್ರ.ಕರಾವಳಿ ವಿಭಾಗ ಸಂಚಾಲಕ ಅಣ್ಣಪ್ಪ ಕಾರೇಕಾಡು.ಹಾಸನ ಕಾಂತರಾಜು.ಚಿಕ್ಕಬಳ್ಳಾಪುರ ಸುರೇಶ್ ಬಾಬು.ವೆಂಕಟ ಲಕ್ಷ್ಮೀ. ಚಿನ್ನರಾಜೂ ಚಂದ್ರು ಸೇರಿದಂತೆ ವಿವಿಧ ಜಿಲ್ಲೆಗಳ ಹೊರಗುತ್ತಿಗೆ ಮುಖಂಡರು ಭಾಗೀಯಾಗಿದ್ದರು.


