Monday, October 12, 2026
spot_img

ಪಬ್ ಗಳಲ್ಲಿ ಅಪ್ರಾಪ್ತರು:ಖುದ್ದು ಫೀಲ್ಡಿಗಿಳಿದ ಪೋಲಿಸ್ ಕಮೀಷನರ್

ಬೆಂಗಳೂರು: ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರ ನೇತೃತ್ವದಲ್ಲಿ ರಾತ್ರಿ ಪೊಲೀಸರು ಪಬ್,ಕ್ಲಬ್, ರೆಸ್ಟೊರೆಂಟ್, ಹಾಗೂ ಲೇಡಿಸ್ ಪಬ್‌ಗಳ ಮೇಲೆ ದಿಢೀರ್ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

ರಾಜಧಾನಿಯ ಜನನಿಬಿಡ ರಸ್ತೆಗಳಲ್ಲಿರುವ ಕ್ಲಬ್,ಪಬ್‌ಗಳು ನಿಗಧಿತ ಸಮಯಕ್ಕೆ ಬಂದ್ ಆಗುತ್ತಿದೆಯೇ, ನಿಯಮ ಪಾಲನೆ ಮಾಡಲಾಗುತ್ತಿದೆಯೇ ಎಂಬ ಬಗ್ಗೆ ಪರಿಶೀಲಿಸಲು ಖುದ್ದು ಆಯುಕ್ತರೇ ಫೀಲ್ಡ್ ಗೆ ಇಳಿದಿದ್ದರು.

ಅಪ್ರಾಪ್ತ ಮಕ್ಕಳ ಬಳಕೆ, ಅವಧಿ ಮೀರಿದ ಬಳಿಕ ವಹಿವಾಟು, ಅಕ್ರಮ ಚಟುವಟಿಕೆಗಳ ಪತ್ತೆಗಾಗಿ ಈ ವಿಶೇಷ ಕಾರ್ಯಾಚರಣೆ ನಡೆಸಲಾಯಿತು.
ಪ್ರಮುಖವಾಗಿ ಬ್ರಿಗೇಡ್ ಗಾರ್ಡನ್, ಪೇಜ್ ತ್ರಿ ಪಬ್, ಆನಂದ್‌ರಾವ್ ಸರ್ಕಲ್, ಕೋರಮಂಗಲದಲ್ಲಿರುವ ಬಾರ್‌ಗಳು ಹಾಗೂ ಬ್ರಿಗೇಡ್ ರಸ್ತೆಯಲ್ಲಿರುವ ಲೇಡಿಸ್ ಪಬ್‌ಗಳಲ್ಲಿ ಶೋಧ ನಡೆಸಿ ನಿಮಯ ಉಲ್ಲಂಘನೆಗಳ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ರೆಸ್ಟೊರೆಂಟ್ ಮುಚ್ಚುತ್ತಿರುವುದಾಗಿ ಹೇಳಿ ಗ್ರಾಹಕರನ್ನು ಸಿಬ್ಬಂದಿ ಹೊರಗೆ ಕಳುಹಿಸಿದರು.
ರಾತ್ರಿ ಪಬ್,ರೆಸ್ಟೊರೆಂಟ್‌ಗಳ ಮೇಲೆ ದಾಳಿಯಾಗುತ್ತಿದ್ದಂತೆ ಪಾರ್ಟಿಗೆ ಬಂದಿದ್ದ ವರು ಗಲಿಬಿಲಿಗೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ಆ ಸಂದರ್ಭದಲ್ಲಿ ಪೊಲೀಸರು ಹೊರಗೆ ಬಿಡದೇ ಕೂಲಂಕುಶ ವಾಗಿ ಮಾಹಿತಿ ಪಡೆದುಕೊಂಡು ನಂತರ ಕಳುಹಿಸಿದ್ದಾರೆ. ಪಬ್‌ಗಳು ನಿಯಮಾನು ಸಾರ ಕಾರ್ಯನಿರ್ವಹಿಸುತ್ತಿವೆಯೇ, ನಿಗಧಿತ ಸಮಯಕ್ಕೆ ವಹಿವಾಟುಗಳನ್ನು ಸ್ಥಗಿತಗೊಳಿಸಿ ಮುಚ್ಚಲಾಗುತ್ತಿದೆಯೇ ಎಂಬ ಬಗ್ಗೆ ಖಚಿತ ಪಡಿಸಿಕೊಳ್ಳುವುದು ಈ ತಪಾಸಣೆಯ ಪ್ರಮುಖ ಉದ್ದೇಶವಾಗಿತ್ತು.
ಪ್ರಮುಖವಾಗಿ ಪಬ್‌ಗಳಲ್ಲಿ ಅಪ್ರಾಪ್ತರಿಗೆ ಮದ್ಯ ನೀಡಲಾಗುತ್ತಿದೆಯೇ, ಅಕ್ರಮ ಚಟುವಟಿಕೆಗಳು ನಡೆಯುತ್ತಿದೆಯೇ ಎಂಬುವುದರ ಬಗ್ಗೆಯೂ ಪರಿಶೀಲನೆ ನಡೆಸಲಾಯಿತು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!