Saturday, November 7, 2026
spot_img

ಪಿಎಂ ಕಿಸಾನ್ ಸಮಸ್ಯೆ ಇತ್ಯರ್ಥಕ್ಕೆ ಕಿರಂಗೂರು ಪಾಪು ಆಗ್ರಹ

ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಯಿಂದ ಜಿಲ್ಲೆಯ ರೈತರಿಗಾಗುತ್ತಿರುವ ಸಮಸ್ಯೆ ಇತ್ಯರ್ಥಗೊಳಿಸುವಂತೆ ಕೇಂದ್ರ ಸಚಿವರು, ಜಿಲ್ಲಾಧಿಕಾರಿಗಳಿಗೆ ಕಿರಂಗೂರು ಪಾಪು ಒತ್ತಾಯ

ಮಂಡ್ಯ : ರೈತರಿಗೋಸ್ಕರ ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆ ಜಾರಿ ಮಾಡಿ ರೈತರಿಗೆ ಹಲವು ಕಂತುಗಳನ್ನು ಬಿಡುಗಡೆ ಮಾಡುವ ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗುತ್ತಾ ಬಂದಿದೆ. ಆದರೆ ಇಕೆವೈಸಿ ನೆಪದಲ್ಲಿ ಯೋಜನೆಯನ್ನು ಹೊಸದಾಗಿ ಅರ್ಜಿ ಸಲ್ಲಿಸುವ ರೈತರಿಗೆ ಪೌತಿ ಖಾತೆ, ಖಾತೆ ವರ್ಗಾವಣೆ, ವಿಭಾಗ ರೀತಿ ಖಾತೆ ಬದಲಾವಣೆ, ಕ್ರಯದಂತೆ ಖಾತೆ ಬದಲಾವಣೆ ಇನ್ನಿತರ ಸಣ್ಣಪುಟ್ಟ ತಿದ್ದುಪಡಿಗಳಾಗಿಕಿಸಾನ್ ಯೋಜನೆಗೆ ಅವಕಾಶ ವಂಚಿತರಾಗಿರುವ ರೈತರಿಗೆ ಹೊಸದಾಗಿ ಅರ್ಜಿ ಹಾಕಲು ಅವಕಾಶ ಇಲ್ಲದಂತಾಗಿದೆ ಎಂದು ಕರ್ನಾಟಕ ರೈತಸಂಘದ ಮುಖಂಡರಾದ ಮೋಹನ್‌ಕುಮಾರ್ @ ಕಿರಂಗೂರು ಪಾಪು ಆರೋಪಿಸಿದ್ದಾರೆ.

ಜಿಲ್ಲೆಯಲ್ಲಿ ಸಾವಿರಾರು ರೈತರು ಇದರಿಂದ ವಂಚಿತರಾಗುತ್ತಿದ್ದಾರೆ. ಕೃಷಿ ಅಧಿಕಾರಿಗಳು, ಕೃಷಿ ಸಂಪರ್ಕ ಕೇಂದ್ರಗಳು ರೈತರಿಗೆ, ಜನಸಾಮಾನ್ಯರಿಗೆ ಮೇಲ್ಕಂಡ ಯೋಜನೆ ಬಗ್ಗೆ ಸರಿಯಾದ ಮಾಹಿತಿಗಳನ್ನೂ ನೀಡುತ್ತಿಲ್ಲ. ಈ ಯೋಜನೆಗೆ ಅವಕಾಶ ವಂಚಿತರಾದ ರೈತರು ದಿನನಿತ್ಯ ಕೃಷಿ ಇಲಾಖೆ ಹಾಗೂ ಕೃಷಿ ಸಂಪರ್ಕ ಕೇಂದ್ರಗಳಿಗೆ ನೂರಾರು ರೂಪಾಯಿ ಖರ್ಚು ಮಾಡಿಕೊಂಡು ಅಲೆದಾಡುತ್ತಿದ್ದಾರೆ. ಆದರೆ ಕೃಷಿ ಅಧಿಕಾರಿಗಳು ಕೇಂದ್ರ ಸರ್ಕಾರದ ಕಡೆ ಬೊಟ್ಟು ತೋರಿಸಿ ಪಿಎಂ ಕಿಸಾನ್ ಯೋಜನೆಯಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಲು ಆನ್‌ಲೈನ್‌ನಲ್ಲಿ ಅವಕಾಶವಿಲ್ಲ, ಗ್ರಾಮ ಒನ್‌ನಲ್ಲಿ ವಿಚಾರಣೆ ಮಾಡಿ ಎಂದು ಸಬೂಬು ಹೇಳಿ ಕಳುಹಿಸುತ್ತಿದ್ದಾರೆ. ಆದರೆ ರೈತರು ಎಲ್ಲಾ ಕಡೆ ಸುತ್ತಾಡಿ ಸುತ್ತಾಡಿ ಬಂದ ದಾರಿಗೆ ಸುಂಕವಿಲ್ಲ ಎಂದು ಹೋಗುತ್ತಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಸಾವಿರಾರು ರೈತರು ಜೀವನೋಪಾಯಕ್ಕಾಗಿ ಈ ಹಣವನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದರು. ಆದರೆ ಇಂಥ ಗಂಭೀರ ಸಮಸ್ಯೆಯಿಂದಾಗಿ ಖಾತೆದಾರರಾದ ರೈತರಿಗೆ ಹಣ ಕೈಸೇರುತ್ತಿಲ್ಲ. ಕೆಲವು ಸಮಸ್ಯೆಯಿಂದಾಗಿ ೬-೭ ಕಂತು ಹಣ ಕೈಸೇರಿಲ್ಲ. ಅವರು ದಿನನಿತ್ಯ ಅಲ್ಲಿ ಇಲ್ಲಿ ಅರ್ಜಿ ಹಾಕಿಕೊಂಡರೂ ಇದರ ಬಗ್ಗೆ ಸಮರ್ಪಕವಾದ ಮಾಹಿತಿ ದೊರಕುತ್ತಿಲ್ಲ. ಆದ್ದರಿಂದ ಮಾನ್ಯ ಜಿಲ್ಲಾಧಿಕಾರಿಗಳು ಕಿಸಾನ್ ಯೋಜನೆಯ ಸಮಸ್ಯೆಯಿಂದ ಬಳಲುತ್ತಿರುವ ಜಿಲ್ಲೆಯಲ್ಲಿ ಸಾವಿರಾರು ರೈತರ ಕಷ್ಟ ಆಲಿಸುವಂತೆ ತಾಲ್ಲೂಕುಮಟ್ಟದ ಕೃಷಿ ಅಧಿಕಾರಿಗಳು, ಹೋಬಳಿಮಟ್ಟದ ಕೃಷಿ ಸಂಪರ್ಕ ಕೇಂದ್ರದ ಅಧಿಕಾರಿಗಳ ಸಭೆ ಕರೆದು ಸಾಧಕ ಬಾಧಕಗಳನ್ನು ಚರ್ಚೆ ಮಾಡಿ ಆಗಿರುವ ಸಮಸ್ಯೆಯನ್ನು ಪರಿಗಣಿಸಿ ಜಿಲ್ಲೆಯ ಸಂಸದರು, ಕೇಂದ್ರ ಸಚಿವರೂ ಆದರ ಎಚ್.ಡಿ.ಕುಮಾರಸ್ವಾಮಿಯವರ ಬಳಿ ಇದರ ವಿಚಾರವಾಗಿ ಚರ್ಚೆ ಮಾಡಿ ಕೇಂದ್ರದ ಕೃಷಿ ಸಚಿವರಿಗೆ ಮನವರಿಕೆ ಮಾಡುವ ಮೂಲಕ ಸಾವಿರಾರು ಜಿಲ್ಲೆಯ ರೈತರ ಸಮಸ್ಯೆಯನ್ನು ಇತ್ಯರ್ಥಗೊಳಿಸುವ ಮೂಲಕ ಬೆಳಕು ಚೆಲ್ಲುವ ಕೆಲಸ ಮಾಡಬೇಕು ಎಂದು ಕಿರಂಗೂರು ಪಾಪು ಪ್ರಕಟಣೆಯಲ್ಲಿ ಮನವಿ ಮೂಲಕ ರೈತರ ಪರವಾಗಿ ಒತ್ತಾಯಿಸಿದ್ದಾರೆ

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!