ಲೋಕಾಯುಕ್ತ ಪೊಲೀಸರಿಂದ ತನಿಖೆ ಆರಂಭ
ಪುತ್ತೂರು ನಗರಸಭೆ ಕಸ ವಿಲೇವಾರಿಯಲ್ಲಿ ₹61.62 ಲಕ್ಷ ದುರುಪಯೋಗ
04/12/2025
ಪುತ್ತೂರು: ಇಲ್ಲಿನ ನಗರಸಭೆಯ ವ್ಯಾಪ್ತಿಯಲ್ಲಿ ಕಸ ವಿಲೇವಾರಿಯಲ್ಲಿ ₹ 61 ಲಕ್ಷ ದುರುಪಯೋಗ ಪಡಿಸಿಕೊಂಡ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಮಂಗಳವಾರ ಪುತ್ತೂರು ನಗರಸಭೆಯಲ್ಲಿ ಕಡತ ಪರಿಶೀಲನೆ ಮಾಡಿರುವುದು ತಿಳಿದು ಬಂದಿದೆ.
ಮಂಗಳೂರು ಲೋಕಾಯುಕ್ತ ಡಿವೈಎಸ್ಪಿ ಡಾ.ಗಾನ ಪಿ.ಕುಮಾರ್ ನೇತೃತ್ವದ ಸಿಬ್ಬಂದಿ ನಗರಸಭೆಗೆ ಭೇಟಿ ನೀಡಿ ಕಡತ ಪರಿಶೀಲನೆ ಮಾಡಿ ತೆರಳಿದೆ.
2018ರಲ್ಲಿ ಗುತ್ತಿಗೆ ಆಧಾರದಲ್ಲಿ ಪಡೆದುಕೊಂಡಿದ್ದ ಏಳು ಲಾರಿಗಳ ಪೈಕಿ 2 ವಾಹನಗಳನ್ನು ಮಾತ್ರ ಬಳಸಿ 5 ಲಾರಿಗಳ ನಕಲಿ ಬಿಲ್ಲು ಮಾಡಿ ₹ 61,62,000 ದುರುಪಯೋಗ ಮಾಡಲಾಗಿದೆ ಎಂದು ಆರೋಪಿಸಿ ಅಂದಿನ ನಗರಸಭೆ ಸದಸ್ಯ ಎಚ್.ಮಹಮ್ಮದ್ ಆಲಿ ಅವರು 2021ರ ಜನವರಿ 12ರಂದು ನೀಡಿ, ಅಂದಿನ ಪೌರಾಯುಕ್ತೆ ರೂಪಾ ಟಿ.ಶೆಟ್ಟಿ, ಹಿರಿಯ ಆರೋಗ್ಯ ನಿರೀಕ್ಷಕ ಕೆ.ರಾಮ ಚಂದ್ರ, ಲೆಕ್ಕಾಧಿಕ್ಷಕ ಚಂದ್ರರಾಮ ದೇವಾಡಿಗ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ದೂರಿನಲ್ಲಿ ಕೋರಿದ್ದರು.


