ಕರ್ನಾಟಕದಲ್ಲಿ ಆರ್ ಎನ್ ಐ ಪ್ರಾದೇಶಿಕ ಕಚೇರಿ ಸ್ಥಾಪನೆಗೆ ಸಂಪಾದಕರ ಸಂಘ ಆಗ್ರಹ
ದೇಶದ ಮಾಧ್ಯಮಗಳನ್ನು ನಿರ್ವಹಿಸುವ ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆಯ ದಕ್ಷಿಣ ಭಾರತದ ಪ್ರಾದೇಶಿಕ ಕಚೇರಿಯನ್ನು ಬೆಂಗಳೂರಿನಲ್ಲಿ ಆರಂಭಿಸುವಂತೆ ಕರ್ನಾಟಕ ರಾಜ್ಯ ಸಂಪಾದಕರ ಸಂಘ ನಿರ್ಣಯ ಕೈಗೊಂಡಿದೆ.
ಮಂಡ್ಯ ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಜಿಲ್ಲಾ ಸಭೆಯಲ್ಲಿ ಈ ಸಂಬಂದ ನಿರ್ಣಯ ಕೈಗೊಂಡು ವಾರ್ತಾ ಮತ್ತು ಪ್ರಸಾರ ಖಾತೆಯ ಕಚೇರಿ ದೆಹಲಿಯಲ್ಲಿರುವುದರಿಂದ ಸಂವಹನಕ್ಕೆ ಭಾಷೆಯ ತೊಡಕು ಬಹುದೊಡ್ಡ ಸಮಸ್ಯೆಯಾಗಿದೆ.ಇದಲ್ಲದೆ ಆರ್ಥಿಕವಾಗಿಯೂ ಸಣ್ಣ ಪತ್ರಿಕೆಗಳಿಗೆ ದುಬಾರಿಯಾಗಿದ್ದು.ದಕ್ಷಿಣ ಭಾರತದ ಸಣ್ಣ ಪತ್ರಿಕೆಗಳಿಗೆ ಅನುಕೂಲದ ದೃಷ್ಟಿಯಿಂದ ಬೆಂಗಳೂರಿನಲ್ಲಿ ಪ್ರಾದೇಶಿಕ ಕಚೇರಿ ಆರಂಭಿಸಲು ಹಾಗೂ ಈಗಾಗಲೇ ಸ್ಥಗಿತಗೊಳಿಸಿರುವ ಪತ್ರಕರ್ತರ ರೈಲ್ವೇ ಪಾಸ್ ಯೋಜನೆಯನ್ನು ಜಾರಿಗೊಳಿಸಲು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿಯವರ ಮೂಲಕ ಒತ್ತಾಯಿಸಲು ನಿರ್ಣಯ ಕೈಗೊಳ್ಳಲಾಯಿತು.
ಇದೇ ಸಂಧರ್ಭದಲ್ಲಿ ಕೇಂದ್ರ ಸರ್ಕಾರ ಸ್ಥಳೀಯ ಪತ್ರಿಕೆಗಳಿಗೆ ಕೇಂದ್ರದ ಯಾವುದೆ ಯೋಜನೆ ಕಾಮಗಾರಿಯ ಜಾಹೀರಾತು ನೀಡದೆ ತಾರತಮ್ಯ ಎಸಗುತ್ತಿದ್ದು.ಕೇಂದ್ರದ ಯಾವುದೆ ಯೋಜನೆ ಕಾಮಗಾರಿಗಳ ಜಾಹೀರಾತನ್ನು ಸ್ಥಳೀಯ ಪತ್ರಿಕೆಗಳಿಗೂ ಬಿಡುಗಡೆಗೊಳಿಸುವಂತೆ ಸಭೆಯು ಒತ್ತಾಯಿಸಿತು.
ಡಿ.೨೧ ರಂದು ತುಮಕೂರಿನಲ್ಲಿ ನಡೆಯಲಿರುವ ರಾಜ್ಯ ಕಾರ್ಯಕಾರಿಣಿಯಲ್ಲಿ ಈ ಎಲ್ಲ ವಿಷಯಗಳ ಕುರಿತು ಮುಂದಿನ ಹೋರಾಟ ರೂಪಿಸಲು ನಿರ್ಧರಿಸಲಾಯಿತು.
ಶ್ವೇತಪತ್ರಕ್ಕೆ ಆಗ್ರಹ:ಜಿಲ್ಲಾ ಮಟ್ಟದ ವಾರ್ತಾ ಇಲಾಖೆಯ ಜಾಹೀರಾತು ಬಿಡುಗಡೆಯಲ್ಲಿ ತಾರತಮ್ಯ ನಡೆಯುತ್ತಿದ್ದು.ಪ್ರತೀ ಮೂರು ತಿಂಗಳಿಗೊಮ್ಮೆ ಸ್ಥಳೀಯವಾಗಿ ಬಿಡುಗಡೆಯಾದ ಜಾಹೀರಾತುಗಳ ಸಂಬಂದ ಶ್ವೇತಪತ್ರ ಹೊರಡಿಸಲು ವಾರ್ತಾ ಇಲಾಖೆಯನ್ನು ಕೋರಲು ಸಭೆಯು ನಿರ್ಧಾರ ಕೈಗೊಂಡಿದೆ.
ಸಂಘದ ಜಿಲ್ಲಾಧ್ಯಕ್ಷ ಎಲ್.ಶಿವಶಂಕರ.ಕಾರ್ಯದರ್ಶಿ ಎಂ.ಬಿ.ನಾಗಣ್ಣಗೌಡ. ಟಿ.ಕೆ.ಗೋಪಾಲ್.ಚನ್ನಪ್ಪ.ಬೂದನೂರು ಸ್ವಾಮಿ.ನಾಗಯ್ಯ.ಕಬ್ಬನಹಳ್ಳಿ ಮೂರ್ತಿ ಎಲ್ ಶೇಖರ್ ಸೇರಿದಂತೆ ಪತ್ರಿಕೆಗಳ ಸಂಪಾದಕರು ಉಪಸ್ಥಿತರಿದ್ದರು.


