ಮಂಡ್ಯ ನಗರಸಭೆಯಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಕ್ರಮವಹಿಸುವಂತೆ ಇಂದು ಮಂಡ್ಯ ನಗರಸಭೆ ಆಯುಕ್ತರಿಗೆ ಕನ್ನಡಪರ ಸಂಘಟನೆಗಳು ಮನವಿ ಸಲ್ಲಿಸಿದವು.
ನಗರಸಭೆ ಆವರಣದಲ್ಲಿ ಜಮಾವಣೆಗೊಂಡು .ಮಂಡ್ಯ ನಗರಸಭೆಯ ವ್ಯಾಪ್ತಿಯಲ್ಲಿ ಪರವಾನಗಿ ಪಡೆಯದೆ.ನಕ್ಷೇ ಉಲ್ಲಂಘಿಸಿ ನಿಯಮಾನುಸಾರ ಸೆಟ್ ಬ್ಯಾಕ್ ಬಿಡದೆ ಕಟ್ಟಡಗಳನ್ನು ನಿರ್ಮಿಸುತ್ತಿದ್ದು ಕ್ರಮ ಕೈಗೊಳ್ಳುವಲ್ಲಿ ನಗರಸಭೆ ವಿಫಲವಾಗಿದ್ದು ಅಕ್ರಮ ನಿರ್ಮಾಣಕಾರರೊಂದಿಗೆ ನಗರಸಭೆ ಅಧಿಕಾರಿಗಳು ಶಾಮೀಲಾಗಿದ್ದಾರೆ.ಈ ಸಂಬಂದ ಯಾವುದೆ ದೂರು ನೀಡಿದರು ಯಾವುದೆ ಕ್ರಮ ಜರುಗುತ್ತಿಲ್ಲ.ಬದಲಿಗೆ ನೋಟಿಸ್ ನೀಡಿದಂತೆ ಮಾಡಿ ಅಕ್ರಮ ನಿರ್ಮಾಣದ ಮಾಲೀಕರಿಂದ ಲಂಚ ಪಡೆದು ಸುಮ್ಮನಾಗುತ್ತಿದ್ದಾರೆ.ಇದರಿಂದಾಗಿ ಮಂಡ್ಯ ನಗರ ಕಾಂಕ್ರೀಟ್ ಸ್ಲಂ ಆಗಿ ಪರಿವರ್ತನೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯ ನಗರ ವ್ಯಾಪ್ತಿಯಲ್ಲಿ ಹೆದ್ದಾರಿ ಹಾಗೂ ಪಾದಚಾರಿ ಮಾರ್ಗ ಅಭಿವೃದ್ದಿಪಡಿಸಲಾಗುತ್ತಿದೆ.ಈ ಸಂದರ್ಭದಲ್ಲಿ ಪಾದಚಾರಿ ಮಾರ್ಗದ ಒತ್ತುವರಿ ತೆರವುಗೊಳಿಸದೆ ವಿದ್ಯುತ್ ಕಂಬಗಳನ್ನು ಸ್ಥಳಾಂತರಗೊಳಿಸದೆ ಕಾಮಗಾರಿ ನಡೆಸಲಾಗುತ್ತಿದೆ.
ಇದರಿಂದಾಗಿ ಸರಕಾರದ ಕೋಟ್ಯಾಂತರ ರೂಪಾಯಿ ವೆಚ್ಚದ ಕಾಮಗಾರಿಗಳು ಯಾವುದೆ ಪ್ರಯೋಜನಕ್ಕಿಲ್ಲದಂತಾಗಿದೆ.
ನಗರಸಭೆ ಕಚೇರಿಯಲ್ಲಿ ಸಾರ್ವಜನಿಕರ ಕೆಲಸಗಳು ಸುಗಮವಾಗಿ ಸಾಗುತ್ತಿಲ್ಲ.ನಮೂನೆ ೩ ಸೇರಿದಂತೆ ಪ್ರತಿಯೊಂದಕ್ಕು ಸಾರ್ವಜನಿಕರು ಅಲೆಯುವಂತಾಗಿದೆ.ಖಾತೆ ಬದಲಾವಣೆಗೆ ಅನಗತ್ಯ ವಿಳಂಬ ಲಂಚಕ್ಕಾಗಿ ಅಲೆದಾಡಿಸಲಾಗುತ್ತಿದೆ.
ಕೆಟಿಟಿಪಿ ನಿಯಮ ಉಲ್ಲಂಘಿಸಿ ನಗರಸಭೆಗೆ ಸೇರಿದ ಕಟ್ಟಡವನ್ನು ಎಚ್ ಡಿ ಎಫ್ ಸಿ ಬ್ಯಾಂಕಿಗೆ ನೀಡಲಾಗಿದೆ.ಇದರಿಂದ ನಗರಸಭೆಗೆ ಎರಡುವರೆ ಕೋಟಿ ನಷ್ಟವಾಗಿದೆ.ಈಗಿರುವ ಆಯುಕ್ತರು ಗ್ರೇಡ್ -೧ ನಗರಸಭೆಗೆ ಆಯುಕ್ತರಾಗುವ ಅರ್ಹತೆ ಹೊಂದಿಲ್ಲ.
ಈ ಹಿನ್ನೆಲೆಯಲ್ಲಿ ಅಕ್ರಮ ನಿರ್ಮಾಣಕ್ಕೆ ಸಂಬಂದಿಸಿದಂತೆ ಅಯಾ ಇಂಜಿನಿಯರುಗಳನ್ನು ಹೊಣೆಗಾರರನ್ನಾಗಿಸಬೇಕು.ಮಂಡ್ಯ ನಗರಸಭೆಗೆ ಅರ್ಹರನ್ನು ಆಯುಕ್ತರನ್ನಾಗಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಒತ್ತಾಯಿಸಿದರು.
ಮಂಡ್ಯ ನಗರ ವ್ಯಾಪ್ತಿಯ ಬೆಂಗಳೂರು ಮೈಸೂರು ಹೆದ್ದಾರಿಯ ಇಕ್ಕೆಲಗಳ ಪಾದಚಾರಿ ಮಾರ್ಗದ ಒತ್ತುವರಿ ತೆರವುಗೊಳಿಸಬೇಕು.ಎಚ್ ಡಿ ಎಫ್ ಸಿ ಬ್ಯಾಂಕ್ ಅಕ್ರಮಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ದ ಕ್ರಮ ಜರುಗಬೇಕು.ಕಟ್ಟಡವನ್ನು ಮರುವಶ ಪಡೆದು ನಿಯಮಾನುಸಾರ ವಿಲೇವಾರಿ ಮಾಡಬೇಕು ಎಂದು ಒತ್ತಾಯಿಸಿದರು.ನಗರದ ಬಹಳಷ್ಟು ಕಡೇ ಶೌಚಾಲಯಗಳು ಬಾಗಿಲು ಮುಚ್ಚಿವೆ.ಹೆಚ್ಚಿನ ಆದಾಯ ಇರುವ ಶೌಚಾಲಯಗಳನ್ನು ಸೇರಿಸಿ ಎಲ್ಲ ಶೌಚಾಲಯಗಳ ಸಮಗ್ರ ನಿರ್ವಹಣೆಗೆ ಟೆಂಡರ್ ನೀಡಬೇಕು.ಕುಡಿಯುವ ನೀರಿನ ಘಟಕಗಳನ್ನು ನಿರ್ವಹಿಸುವ ಸಂಬಂದ ನಿಯಮಾನುಸಾರ ಟೆಂಡರ್ ನಡೆಸದೆ ನಗರಸಭೆಗೆ ಅನಗತ್ಯ ನಷ್ಟ ಉಂಟು ಮಾಡಲಾಗುತ್ತಿದೆ ಸಿಟಿಕ್ಲಬ್ ಒತ್ತುವರಿ ಮಾಡಿಕೊಂಡಿರುವ ಜಮೀನು ತೆರವಿಗೆ ಯಾವುದೆ ಕ್ರಮವಹಿಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಮನವಿ ಸ್ವೀಕರಿಸಿದ ಆಯುಕ್ತೆ ಪಂಪಶ್ರೀ ಶೌಚಾಲಯಗಳನ್ನು ಸಮಗ್ರವಾಗಿ ನಿರ್ವಹಿಸಲು ಹಾಗೂ ಶುದ್ದ ಕುಡಿಯುವ ನೀರಿನ ಘಟಕದ ನಿರ್ವಹಣೆಯ ಟೆಂಡರ್ ನಡೆಸಲಾಗುವುದು.ಅಕ್ರಮ ಹಾಗೂ ನಕ್ಷೇ ಉಲ್ಲಂಘನೆಯ ಪ್ರಕರಣಗಳಲ್ಲಿ ಕಟ್ಟಡ ತೆರವಿಗೆ ಕ್ರಮವಹಿಸಲಾಗುವುದು.
ಬೆಂಗಳೂರು ಮೈಸೂರು ಹೆದ್ದಾರಿಯುದ್ದಕ್ಕು ಪಾದಚಾರಿ ಮಾರ್ಗದ ಒತ್ತುವರಿಯನ್ನು ಹದಿನೈದು ದಿನಗಳೊಳಗೆ ತೆರವುಗೊಳಿಸಲಾಗುವುದು ನಿಯಮ ಉಲ್ಲಂಘಿಸಿ ಎಚ್ ಡಿ ಎಫ್ ಸಿ ಬ್ಯಾಂಕಿಗೆ ಕಟ್ಟಡ ಬಾಡಿಗೆಗೆ ನೀಡಿರುವ ಸಂಬಂದ ವರದಿ ಮಂಡನೆಯಾದ ತಕ್ಷಣ ಕ್ರಮವಹಿಸಲಾಗುವುದು ಎಂದರು.ಸಿಟಿ ಕ್ಲಬ್ ನವರು ನಗರಸಭೆ ಜಾಗ ಒತ್ತುವರಿ ಮಾಡಿಕೊಂಡಿರುವ ಸ್ಥಳ ತೆರವಿಗೆ ನೋಟಿಸ್ ಜಾರಿಗೊಳಿಸಲಾಗುತ್ತಿದೆಯೆಂದರು.
ಮುಂದಿನ ಒಂದು ತಿಂಗಳೊಳಗೆ ಈ ಸಮಸ್ಯೆಗಳನ್ನು ಬಗೆಹರಿಸುವಂತರೆ ಪ್ರತಿಭಟನಾಕಾರರು ಆಯುಕ್ತೆಗೆ ಗಡುವು ನೀಡಿದರು.
ಈ ಸಂಧರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಚ್ ಡಿ ಜಯರಾಂ. ಕರ್ನಾಟಕ ರಾಷ್ಟ್ರ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ್ ಗೌಡ.ಕರುನಾಡ ಸೇವಕರ ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ .ರಾಜೇಙದ್ರ ಸಿಂಗ್ ಬಾಬು.ಮಲ್ಲೇಶ್.ಆಟೋ ವೆಂಕಟೇಶ್. ಮುದ್ದೇಗೌಡ.ಪಾಂಡಿಯನ್.ದೀಪಿಕಾ ಸೇರಿದಂತೆ ಹಲವರು ಭಾಗೀಯಾಗಿದ್ದರು.ನಗರಸಭೆಯ ಕಾರ್ಯಪಾಲಕ ಅಭಿಯಂತರ ಪುಟ್ಟಯ್ಯ.ಮಹೇಶ್ ಉಪಸ್ಥಿತರಿದ್ದರು


