ಮಂಡ್ಯ ನಗರಸಭೆ ಸದಸ್ಯರ ಅನರ್ಹತೆ ಪ್ರಕರಣ “ಇಬ್ಬರು ಸ್ವಾಮಿಗಳ ಮಧ್ಯೆ ರಾಜೀಯಾಯಿತೆ!
ಅಂತೂ ಇಂತೂ ಸುಧೀರ್ಘ ವಿಚಾರಣೆಯ ನಂತರ ಮಂಡ್ಯ ನಗರಸಭೆ ಹಾಗೂ ನಾಗಮಂಗಲ ಪುರಸಭೆಯ ಸದಸ್ಯರ ಅನರ್ಹತೆ ಪ್ರಕರಣದ ತೀರ್ಪು ಜಿಲ್ಲಾಧಿಕಾರಿಗಳ ನ್ಯಾಯಾಲಯದಿಂದ ಹೊರಬಿದ್ದಿದೆ.
ಅನರ್ಹತೆ ಕೋರಿ ಸಲ್ಲಿಕೆಯಾಗಿದ್ದ ಎಲ್ಲ ಅರ್ಜಿಗಳನ್ನು ವಜಾಗೊಳಿಸಿ ಜಿಲ್ಲಾಧಿಕಾರಿಗಳ ನ್ಯಾಯಾಲಯ ಆದೇಶ ಹೊರಡಿಸಿ ಅನರ್ಹರು ಎಂದು ಆರೋಪಿಸಲಾಗಿದ್ದ ಎಲ್ಲ ಸದಸ್ಯರ ಅರ್ಹರು ಎಂದು ಕ್ಲೀನ್ ಚಿಟ್ ನೀಡಿದೆ.
ಪ್ರಕರಣದ ಹಿನ್ನಲೆ:ಮಂಡ್ಯ ನಗರಸಭೆಯ ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರ ಹುದ್ದೆಗಳಿಗೆ ಬಾಕೀ ಇರುವ ೧೩ ತಿಂಗಳ ಅಧಿಕಾರಕ್ಕೆ ೨೦೨೪ ಆಗಸ್ಟ್ ೨೮ ರಂದು ಚುನಾವಣೆ ನಿಗದಿಯಾಗಿತ್ತು.ಒಟ್ಟು ೩೫ ಸದಸ್ಯ ಬಲದ ಮಂಡ್ಯ ನಗರಸಭೆಯಲ್ಲಿ ಜ್ಯಾದಳಕ್ಕೆ ಸೇರಿದ ೧೮ ಕಾಂಗ್ರೇಸ್ ೧೦ ಬಿಜೆಪಿ ೨ ಐವರು ಪಕ್ಷೇತ್ತರರ ಸಂಖ್ಯಾ ಬಲವಿತ್ತು.
ಮೀಸಲಾತಿ ನಿಗದಿಗಾಗಿ ರಾಜ್ಯ ಹೈಕೋರ್ಟು ಪ್ರಕರಣದಿಂದಾಗಿ ಬಾಕೀ ಉಳಿದ ೧೩ ತಿಂಗಳ ಅಧಿಕಾರಕ್ಕಾಗಿ ಈ ಹಿಂದಿನ ಅವಧಿಗೆ ಜ್ಯಾದಳದ ನಗರಸಭೆ ಅಧ್ಯಕ್ಷರಾಗಿದ್ದ ಎಚ್ ಎಸ್ ಮಂಜು ಮರಳಿ ಎರಡನೇ ಅವಧಿಗೂ ಪ್ರಯತ್ನ ಆರಂಭಿಸಿದ್ದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೊಂದಿಗೆ ಗುರುತಿಸಿಕೊಂಡಿದ್ದ ಮಂಜುಗೆ ಶಾಸಕ ಗಣಿಗ ರವಿಕುಮಾರ್ ಸಹ ಬೆಂಬಲಕ್ಕೆ ನಿಂತರು.
ಪರಿಣಾಮ ಕಾಂಗ್ರೆಸ್ ಮತ್ತು ಪಕ್ಷೇತ್ತರರ ಬೆಂಬಲ ಮಾತ್ರವಲ್ಲದೆ ಜ್ಯಾದಳದಿಂದ ಆಯ್ಕೆಯಾಗಿದ್ದ ೧೨ ನೇ ವಾರ್ಡ್ ನ ಭಾರತೀಶ .೩೨ ನೇ ವಾರ್ಡುನ ಸಿ.ಕೆ ರಜನಿಯನ್ನು ತಮ್ಮ ಬೆಂಬಲಕ್ಕೆ ಬರುವಂತೆ ನೋಡಿಕೊಂಡರು.
ಆದಾಗ್ಯೂ ಜ್ಯಾದಳ ಕಾಂಗ್ರೆಸ್ ನ ಟಿ ಕೆ ರಾಮಲಿಂಗಯ್ಯನವರರನ್ನು ಸೆಳೆದು ಕುಮಾರಸ್ವಾಮಿ ಬೆಂಬಲದೊಂದಿಗೆ ಮಂಡ್ಯ ನಗರಸಭೆ ಅಧಿಕಾರವನ್ನು ಜ್ಯಾದಳದ ಅಧಿಕೃತ ಅಭ್ಯರ್ಥಿ ಎಂ.ವಿ.ನಾಗೇಶ್ ಗೆ ಕೊಡಿಸುವಲ್ಲಿ ಯಶಸ್ವಿಯಾಯಿತು.
ನಂತರದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ವ್ವಿಪ್ ಉಲ್ಲಂಘನೆ ಕಾರಣಕ್ಕಾಗಿ ಜ್ಯಾದಳದ ಭಾರತೀಶ.ಎಚ್ ಎಸ್ ಮಂಜು.ಸಿ.ಕೆ ರಜನಿ ವಿರುದ್ದ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಜ್ಯಾದಳ ಅಧ್ಯಕ್ ಡಿ.ರಮೇಶ್ ಮೂಲಕ ಪ್ರಕರಣ ದಾಖಲಿಸಲಾಯಿತು.
ಅಂತೆಯೆ ಕಾಂಗ್ರೆಸ್ ಸಹ ಅಧ್ಯಕ್ಷ ಸಿ.ಡಿ.ಗಂಗಧರ್ ಮೂಲಕ ಟಿ.ಕೆ ರಾಮಲಿಂಗಯ್ಯ ವಿರುದ್ದ ಪ್ರಕರಣ ದಾಖಲು ಮಾಡಿದರು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿಗಳ ನ್ಯಾಯಾಲಯ ವ್ವಿಪ್ ನೀಡುವಿಕೆಯಲ್ಲಿನ ಲೋಪಗಳು ಜ್ಯಾದಳ ಅಧ್ಯಕ್ಷ ಡಿ.ರಮೇಶ್ ವಿಚಾರಣೆಯ ಸಂಧರ್ಭದಲ್ಲಿ ನೀಡಿದ ದ್ವಂದ್ವ ಹೇಳಿಕೆಗಳ ಆಧಾರದ ಮೇಲೆ ಡಿ.ರಮೇಶ್ ಹಾಗೂ ಸಿ.ಡಿ ಗಂಗಧರ್ ನಗರಸಭಾ ಸದಸ್ಯರ ಅನರ್ಹತೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾಮಾಡಿ ಅನರ್ಹತೆಯ ಭೀತಿಯಿಂದ ನಗರಸಭಾ ಸದಸ್ಯರನ್ನು ಪಾರು ಮಾಡಿದೆ.
ಲೋಪಗಳೇನು? ಯಾವುದೆ ವ್ವಿಪ್ ನೀಡುವಾಗ ಚುನಾವಣೆಗೆ ಐದು ದಿನಗಳ ಮುಂಚೆ ನೇರವಾಗಿ ಇಲ್ಲವೆ ಕೊರಿಯರ್ ಅಂಚೆ ಇಲ್ಲವೆ ಕನಿಷ್ಟ ಇಮೇಲ್ ಆದರೂ ಸಂಬಂದಿತ ವ್ಯಕ್ತಿಗೆ ನೀಡಬೇಕು.ಆದರೆ ಈ ಪ್ರಕರಣದಲ್ಲಿ ಇದ್ಯಾವುದನ್ನು ಎರಡು ಪಕ್ಷಗಳ ಅಧ್ಯಕ್ಷರು ಮಾಡಿಲ್ಲ.
ಐದು ದಿನಗಳ ಮುಂಚೆ ವ್ವಿಪ್ ನೀಡಬೇಕು ಎಂದು ನಿಯಮ ಇದ್ದರು ವ್ವಿಪ್ ನೀಡಲು ಪಕ್ಷದ ಹೈಕಮಾಂಡ್ ನಿಂದ ಅನುಮತಿಯನ್ನು ವ್ವಿಪ್ ನೀಡುವ ಅವಧಿ ಮುಗಿದ ಮೇಲೆ ಕೋರಲಾಗಿದೆ.ಜ್ಯಾದಳ ಅಧ್ಯಕ್ಷ ಬಿಇ ಪದವೀಧರ ತಾವು ೩೦ ವರ್ಷಗಳಿಂದ ಪಕ್ಷದಲ್ಲಿರುವುದಾಗಿ ಹೇಳುತ್ತಾ ವಿಚಾರಣೆಯಲ್ಲಿ ಒಮ್ಮೆ ಪಕ್ಷಾಂತರ ಮಾಡಿದ ಮೂವರು ನಗರಸಭಾ ಸದಸ್ಯರಿಗೂ ಆಗಸ್ಟ್ ೨೩ ರಂದು ವ್ವಿಪ್ ನೀಡಿರುವುದಾಗಿ ಹೇಳಿ ನಂತರ ತಮ್ಮದೆ ಹೇಳಿಕೆಯನ್ನು ಬದಲಿಸಿ ೨೬ ಕ್ಕೆ ಕೊಟ್ಟಿರಬಹುದು ಎಂದು ತಮ್ಮದೆ ಹೇಳಿಕೆ ಬದಲಿಸುತ್ತಾರೆ.
ಅಲ್ಲಿಗೆ ವ್ವಿಪ್ ನೀಡಿರುವ ಬಗ್ಗೆ ಡಿ.ರಮೇಶ್ ದ್ವಂದ್ವ ಹೇಳಿಕೆಯೆ ಜ್ಯಾದಳಕ್ಕೆ ಮುಳುವಾಗಿದೆ.
ಮುಂದುವರಿದು ಎರಡು ಪ್ರಕರಣಗಳಲ್ಲಿ ಎಲ್ಲ ಸದಸ್ಯರಿಗೂ ವ್ವಿಪ್ ನೀಡಿರುವ ಕುರಿತು ಯಾವುದೆ ದಾಖಲೆಗಳನ್ನು ಎರಡು ಪಕ್ಷಗಳ ಅಧ್ಯಕ್ಷರು ವಿಚಾರಣೆಯಲ್ಲಿ ಮಂಡಿಸಿಲ್ಲ.
ವ್ವಿಪ್ ನೀಡುವ ಸಂಬಂದ ತಮ್ಮದೆ ಪಕ್ಷದ ನಗರಸಭಾ ಸದಸ್ಯರನ್ನು ಸಾಕ್ಷೀಯಾಗಿ ಮಾಡಿಕೊಳ್ಳುವ ಅವಕಾಶವನ್ನು ಕೈ ಚೆಲ್ಲಲಾಗಿದೆ.ಅಯಾ ಪಕ್ಷಗಳ ಮುಖ್ಯಸ್ಥರು ತಮ್ಮ ಪಕ್ಷದ ಸದಸ್ಯರಿಗೆ ವ್ವಿಪ್ ಜಾರಿ ಮಾಡಿದ ಸಂಬಂದ ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿಗಳಿಗೆ ಐದು ದಿನಗಳ ಮುಂಚೆ ಯಾವುದೆ ದಾಖಲೆಗಳನ್ನು ನೀಡಿಲ್ಲ.
ವ್ವಿಪ್ ನೀಡುವ ಸಂಬಂದ ನಡೆಸಿದ ಸಭೆಯ ನೋಟಿಸ್ ಪ್ರತಿ ಸಹ ಹಾಜರುಪಡಿಸಿಲ್ಲ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ) ಅಧಿನಿಯಮ ೧೯೮೭ ರ ಕಲಂ ೩(೧)(ಎ)& (ಬಿ)ರಡಿ ಅನರ್ಹಗೊಳಿಸಲು ನಿರಾಕರಿಸಿ ಜಿಲ್ಲಾಧಿಕಾರಿಗಳ ನ್ಯಾಯಾಲಯ ಆದೇಶ ಹೊರಡಿಸಿದೆ.
ರಾಜೀಯಾಯಿತೆ?
ಮಂಡ್ಯ ಮಾತ್ರವಲ್ಲದೆ ನಾಗಮಂಗಲ ಪುರಸಭೆ ಪ್ರಕರಣದಲ್ಲು ಪಕ್ಷಾಂತರ ಮಾಡಿದ್ದ ಜನತಾದಳದ ಮೂವರು ಪುರಸಭಾ ಸದಸ್ಯರ ಪ್ರಕರಣದಲ್ಲು ಇದೇ ತೀರ್ಪು ಹೊರಬಿದ್ದಿದೆ.ಆರಂಭದಿಂದಲೂ ಇಡೀ ಪ್ರಕರಣದ ವ್ವಿಪ್ ನೀಡುವಿಕೆ ಸೇರಿದಂತೆ ಹಲವು ವಿಷಯಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಲಾಗಿದೆ.ಸ್ವತಃ ಬಿಇ ಸಿವಿಲ್ ಎಂಜಿನಿಯರ್ ಡಿ.ರಮೇಶ್ ಎಂಎ ಪದವೀಧರ ಸಿ.ಡಿ ಗಂಗಧರ್ ಗೆ ಇದ್ಯಾವುದು ತಿಳಿಯದ ವಿಷಯವೇನಲ್ಲ.ಅದರಲ್ಲು ಡಿ.ರಮೇಶ್ ವಿಚಾರಣೆಯ ಸಂಧರ್ಭದಲ್ಲಿ ತಮ್ಮ ಹೇಳಿಕೆ ಬದಲಿಸಿದ್ದು ಜ್ಯಾದಳಕ್ಕೆ ದುಬಾರಿ ಹೊಡೆತವಾಗಿದೆ.
ಒಂದು ಹಂತದಲ್ಲಿ ಈ ಪ್ರಕರಣಗಳನ್ನು ಯಾರಿಗೂ ನಷ್ಟವಾಗದಂತೆ ರಾಜೀ ಕಬೂಲಿ ನಡೆಸೀ ಇತ್ಯರ್ಥ ಮಾಡಿಕೊಳ್ಳಲು ತೀರ್ಮಾನಿಸಲಾಗಿತ್ತು ಎನ್ನಲಾಗಿದೆ.
ಆದರೆ ಈ ರಾಜೀ ಹಿಂದೆ ಕುಮಾರಸ್ವಾಮಿ ಇದ್ದಾರೋ ಚಲುವರಾಯಸ್ವಾಮಿ ಇದ್ದಾರೋ ಗೊತ್ತಿಲ್ಲ..ರಾಜ್ಯದ ಎಲ್ಲೆಡೆ ಈ ರೀತಿಯ ಪ್ರಕರಣಗಳು ಅನರ್ಹತೆಯ ಮೂಲಕ ಪರ್ಯವಸನ ಕಂಡರೆ ಮಂಡ್ಯದಲ್ಲಿ ಈ ರೀತಿಯ ಆದೇಶದೊಂದಿಗೆ ರಾಜಕೀಯ ಪಕ್ಷಗಳೇ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಅಣಕಿಸಿದಂತಾಗಿದೆ.