ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಬಿ.ಪಿ.ಪ್ರಕಾಶ್ ನೇಮಕ
ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಪತ್ರಕರ್ತ ಬಿ.ಪಿ.ಪ್ರಕಾಶ್ ಆಯ್ಕೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬಿ.ಪಿ.ಪ್ರಕಾಶ್ ರಣಕಹಳೆ ಪತ್ರಿಕೆಯ ಸಂಪಾದಕರಾಗಿದ್ದು ಇವರ ಪತ್ನಿ ಶಶಿಕಲಾ ಕಳೆದ ನಗರಸಭೆ ಕೌನ್ಸಿಲ್ ಸದಸ್ಯರಾಗಿದ್ದರು.
ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮಾಜಿ ನಗರಸಭಾ ಸದಸ್ಯ ಎಂ.ಎನ್ ಶ್ರೀಧರ್ ಸೇರಿದಂತೆ ಹಲವರು ಪ್ರಯತ್ನ ನಡೆಸಿದ್ದರು ಅಂತಿಮವಾಗಿ ಕಾಂಗ್ರೆಸ್ ಪಕ್ಷ ಪ್ರಕಾಶ್ ಗೆ ಮಣೆ ಹಾಕಿದೆ.


