ನಾಳೆ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ
ಮಂಡ್ಯ:ಎ.೩.ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ನಾಳೆ (ಎ.೦೪)ರಂದು ಮಂಡ್ಯ ಲೋಕಸಭಾ ಕ್ಷೇತ್ರದ ಜ್ಯಾದಳ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ.
ನಾಮಪತ್ರ ಸಲ್ಲಿಕೆಗೂ ಮುನ್ನಾ ಮಂಡ್ಯ ನಗರದ ಪ್ರಮುಖ ದೇವಾಲಯಗಳಾದ
ಶ್ರೀಅರ್ಕೇಶ್ವರ ದೇವಾಲಯದಲ್ಲಿ ಬೆಳಿಗ್ಗೆ ೯ಗಂಟೆಗೆ ಪೂಜೆ ಸಲ್ಲಿಸಲಿದ್ದಾರೆ( ಗುತ್ತಲು, ಮಂಡ್ಯ)
ಬೆಳಿಗ್ಗೆ 9 30 ಕ್ಕೆ ಗ್ರಾಮದೇವತೆ ಕಾಳಮ್ಮನ ಗುಡಿಯಲ್ಲಿ ಪೂಜೆ
ಬೆಳಿಗ್ಗೆ 9 45 ಕ್ಕೆ
ಶ್ರೀ ಲಕ್ಷ್ಮಿ ಜನಾರ್ದನ ಸ್ವಾಮಿ ದೇವಸ್ಥಾನ
10.15 ಕ್ಕೆ
ನೀರಾವರಿ ಇಲಾಖೆ ಮುಂಭಾಗ ಇರುವ ಕಾವೇರಿ ಮಾತೆ ಪುತ್ತಳಿ, ವಿಶ್ವೇಶ್ವರಯ್ಯ ಪುತ್ತಳಿ. ನಾಲ್ವಡಿ ಕೃಷ್ಣರಾಜ ಒಡೆಯರ ಪುತ್ತಳಿಗಳಿಗೆ ಮಾಲಾರ್ಪಣೆ ಮಾಡಲಿದ್ದಾರೆ
10.30 ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪಾರ್ಕಿನಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವನ್ ರಾಂ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿ
10-45 ಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ11 ಗಂಟೆಗೆ ಬಹಿರಂಗ ಸಭೆಯನ್ನು (ವಿವಿ ಮೈದಾನ – ಬಾಲಕರ. ಕಾಲೇಜು) ಇಲ್ಲಿ ನಡೆಸಲಿದ್ದಾರೆ.
*ಬಹಿರಂಗ ಸಭೆಯಲ್ಲಿ
ಹೆಚ್.ಡಿ.ಕುಮಾರಸ್ವಾಮಿ ಜೊತೆಗೆ ಬೆಂಬಲ ತೋರಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೋವಾ ಮುಖ್ಯಮಂತ್ರಿಗಳು, ನಿಖಿಲ್ ಕುಮಾರಸ್ವಾಮಿ, ಯಧುವೀರ್ ಒಡೆಯರ್ ಸೇರಿದಂತೆ ಜಿಲ್ಲೆಯ ಹಾಲಿ ಮತ್ತು ಮಾಜಿ ಶಾಸಕರು, ಮಾಜಿ ಸಚಿವರು ಸೇರಿದಂತೆ ಜೆ.ಡಿಎಸ್ ಹಾಗೂ ಬಿಜೆಪಿ ಮುಖಂಡರುಗಳು ಭಾಗವಹಿಸಲಿದ್ದಾರೆ.