ಮಂಡ್ಯ ಜಿಲ್ಲೆಯ ದಿವಂಗತ ನಾಯಕರುಗಳ ಸಮಾಧಿಗೆ ಇಂದು ಎಚ್ ಡಿಕೆ ನಮನ
ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ರವರು ಮಂಡ್ಯ ಜಿಲ್ಲೆಯ ದಿವಂಗತ ನಾಯಕರುಗಳ ಸಮಾಧಿಗೆ ತೆರಳಿ ನಮನ ಸಲ್ಲಿಸಲಿದ್ದಾರೆ.ಈ ಮೂಲಕ ಅಪ್ಪಟ ಮಂಡ್ಯ ಶೈಲಿಯ ರಾಜಕಾರಣಕ್ಕೆ ಚಾಲನೆ ನೀಡಿದ್ದಾರೆ.
ಇಂದು ಮಧ್ಯಾಹ್ನ 3ಗಂಟೆಗೆ ದಿವಂಗತ ರೈತ ಹೋರಾಟಗಾರ ಕೆ.ಎಸ್ ಪುಟ್ಟಣ್ಣಯ್ಯ ನವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಲಿದ್ದಾರೆ.(ಕ್ಯಾತನಹಳ್ಳಿ)
ಮಧ್ಯಾಹ್ನ 3:25ಕ್ಕೆ ಮಾಜಿ ಶಾಸಕರು ಹಾಗೂ ಪಿ.ಇ.ಟಿ ಸಂಸ್ಥೆಯ ಮಾಜಿ ಅಧ್ಯಕ್ಷರು ದಿವಂಗತ ಚೌಡಯ್ಯ ನವರ ಸಮಾಧಿಗೆ ಪುಷ್ಪ ನಮನ.( ಹೊಳಲು ಗ್ರಾಮ)
ಮಧ್ಯಾಹ್ನ 3:30ಕ್ಕೆ ಕೀಲಾರದಲ್ಲಿರುವ ನಿತ್ಯ ಸಚಿವ ಕೆ.ವಿ ಶಂಕರೇಗೌಡ ಸಮಾಧಿಗೆ ಪುಷ್ಪ ನಮನ.
ಸಂಜೆ 4ಗಂಟೆಗೆ ಸೂನಗಹಳ್ಳಿಯಲ್ಲಿರುವ ಮಾಜಿ ಸಚಿವ ಎಸ್.ಡಿ ಜಯರಾಂ ರವರ ಸಮಾಧಿಗೆ ಪುಷ್ಪ ನಮನ
ಸಂಜೆ 4:30ಕ್ಕೆ ಮಂಡ್ಯದ ಗಾಂಧಿ ಮಾಜಿ ಸಂಸದ ರೈತ ಹೋರಾಟಗಾರ ಜಿ.ಮಾದೇಗೌಡ ರವರ ಸಮಾಧಿಗೆ ಪುಷ್ಪ ನಮನ.( ಹನುಮಂತನಗರ)
ಸಂಜೆ 4:45ಕ್ಕೆ ಹಿರಿಯ ನಟ ಮಾಜಿ ಸಚಿವ ಡಾ ಅಂಬರೀಷ್ ರವರ ಸಮಾಧಿಗೆ ಪುಷ್ಪ ನಮನ.
ಈ ಸಂದರ್ಭದಲ್ಲಿ ಎಚ್ ಡಿಕೆ ಜತೆಗೆ ಮಂಡ್ಯ ಜಿಲ್ಲೆಯ ಮಾಜಿ ಸಚಿವರು, ಶಾಸಕರು ಮತ್ತು ಹಾಲಿ ಶಾಸಕರು ಹಾಗೂ ಬಿಜೆಪಿ -ಜೆಡಿಎಸ್ ಎಲ್ಲ ನಾಯಕರು ಸಾಥ್ ನೀಡಲಿದ್ದಾರೆ.
ಮಂಡ್ಯ v/s ಹೊರಗಿನವರು ಎಂಬ ಪ್ರಚಾರ ತೀವ್ರತೆ ಪಡೆಯುತ್ತಿರುವ ಹೊತ್ತಿನಲ್ಲಿ ಎಚ್ ಡಿಕೆ ಜಿಲ್ಲೆಯ ದಿವಂಗತ ನಾಯಕರ ಸಮಾಧಿಗೆ ನಮನ ಸಲ್ಲಿಸುತ್ತಿರುವುದು ಗಮನ ಸೆಳೆದಿದೆl