ಮಂಡ್ಯ:ನ.೯. ಮಂಡ್ಯ ತಾಲೋಕಿನ ಯಲಿಯೂರು ನಾಲೆಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದ ಯಶ್ವಂತ್ ಎಸ್ ಎ,(೨೨) ಮೃತಪಟ್ಟ ದುರ್ದೈವಿ ಎನ್ನಲಾಗಿದೆ.
ಮಂಡ್ಯ ಸಮೀಪ ಸಿದ್ದಯ್ಯನ ಕೊಪ್ಪಲು ಬಳಿ ಇರುವ ಕಾವೇರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದ ಯಶವಂತ್ ಇಂದು ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಕಾಲೇಜಿನಿಂದ ತನ್ನ ಸ್ನೇಹಿತರ ಜೊತೆಗೂಡಿ ಯಲಿಯೂರು ಬಳಿಯ ಕಾಳೇನಹಳ್ಳಿ ವಿಶ್ವೇಶ್ವರಯ್ಯ ನಾಲೆಯಲ್ಲಿ ಚಾಮುಂಡೇಶ್ವರಿ ದೇವಸ್ಥಾನದ ಬಳಿಯ ಇಳಿಜಾರು ಪ್ರದೇಶದಲ್ಲಿ ನಾಲೆಗೆ ಇಳಿದು ಒಬ್ಬರ ಕೈನ್ನೊಬ್ಬರು ಹಿಡಿದು ಸುತ್ತುವರೆದು ನಿಂತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಮೂವರು ವಿದ್ಯಾರ್ಥಿಗಳು ನೀರಿಗೆ ಬಿದ್ದ ನಂತರ ಅಲ್ಲಿದ್ದ ಕೆಲವರು ಇಬ್ಬರನ್ನು ರಕ್ಷಣೆ ಮಾಡಿ ಮತ್ತೊಬ್ಬ ಯುವಕ ವಿದ್ಯಾರ್ಥಿ ಯಶ್ವಂತ್ ಅವರನ್ನು ರಕ್ಷಣೆ ಮಾಡಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿರುತ್ತಾರೆ.
ಅಲ್ಲಿನ ಸ್ಥಳೀಯರು ಬಟ್ಟೆ ಒಗೆಯುವ ಮಹಿಳೆಯರು ಹೇಳುವ ಪ್ರಕಾರ ಈ ಹುಡುಗನಿಗೆ ಈಜು ಬಾರದಿದ್ದರೂ ಕೂಡ ಸ್ನೇಹಿತರು ಒತ್ತಾಯದ ಮೇರೆಗೆ ನಾವಿದ್ದೇವೆ ಕೈ ಜೋಡಿಸಿ ಹಿಡಿದುಕೊಳ್ಳುತ್ತೇವೆ ಜೊತೆಗಿದ್ದೇವೆ ಬಾ ಎಂದು ಒಳಗೆ ಕರೆದುಕೊಂಡು ಹೋಗಿರುತ್ತಾರೆ.ಒಳಗೆ ಹೋದ ತಕ್ಷಣ ಯಾರೋ ಒಬ್ಬ ಆಕಸ್ಮಿಕವಾಗಿ ಕಾಲ ಜಾರಿ ಹಿಂದಕ್ಕೆ ಬಿದ್ದ ತಕ್ಷಣ ಸ್ಥಳೀಯರು ಇಬ್ಬರು ವಿದ್ಯಾರ್ಥಿಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆದರೆ ಯಶವಂತ್ ರಕ್ಷಣೆ ಸಾಧ್ಯವಾಗಿಲ್ಲ. ವಿಷಯ ತಿಳಿದು ಸಂಬಂಧಿಕರು ದೌಡಾಯಿಸಿದರು ನಂತರ ಕಾಳೇನಹಳ್ಳಿ ಗ್ರಾಮಸ್ಥರು ಸಹಕಾರ ಕೊಟ್ಟು ಯುವಕನ ಪತ್ತೆಗೆ ಪ್ರಯತ್ನಿಸಿದ್ದಾರೆ.ಇದರೊಟ್ಟಿಗೆ ನಮ್ಮ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕೂಡ ತಮ್ಮ ಬೋಟಿನೊಂದಿಗೆ ಹುಡುಕಲು ಸತತ ಪ್ರಯತ್ನ ಪಟ್ಟರು ಯಶವಂತ್ ಪತ್ತೆಯಾಗಿಲ್ಲ. ನಂತರ ಶೋದ ಕಾರ್ಯ ಪ್ರಯತ್ನವನ್ನು ನಾಳೆಗೆ ಮುಂದೂಡಲಾಗಿದೆ. ಅಪರ ಪೊಲೀಸ್ ವರಿಷ್ಠಾಧಿಕಾರಿಗಳಾದ ಗಂಗಾಧರ್ ಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸಿ ನಿಗಾ ವಹಿಸುವಂತೆ ಪೋಲಿಸರಿಗೆ ಸೂಚನೆ ನೀಡಿದ್ದಾರೆ.