Monday, October 12, 2026
spot_img

ಮಂಡ್ಯದ ಎಳನೀರು ಮಾರಾಟಗಾರರಿಗೆ ವಂಚನೆ:ದೆಹಲಿ ವರ್ತಕನ ಬಂಧನಕ್ಕೆ ಆಗ್ರಹ

ಮಂಡ್ಯದ ಸುಂಡಳ್ಳಿ ಮಾರುಕಟ್ಟೆಯಲ್ಲಿ ಎಳನೀರು ಮಾರಾಟ ಮಾಡುವ ರೈತರಿಗೆ 20 ಲಕ್ಷ ಮೋಸವಾಗಿದೆ ಎಂದು ಎಳನೀರು ವ್ಯಾಪಾರಿಗಳು ಜಿಲ್ಲಾ ವರಿಷ್ಟಾಧಿಕಾರಿ ಕಚೇರಿಗೆ ರೈತ ಮುಖಂಡರು ಹಾಗೂ ವ್ಯಾಪಾರಿಗಳ ನಿಯೋಗ ಮನವಿ ಸಲ್ಲಿಸಿದರು.

ಮಂಡ್ಯ ನಗರದ ಜಿಲ್ಲಾ ವರಿಷ್ಟಾಧಿಕಾರಿಗಳ ಕಚೇರಿಯ ಮುಂದೆ 20ಕ್ಕೂ ಹೆಚ್ಚು ವಾಹನಗಳಲ್ಲಿ ಆಗಮಿಸಿದ ವರ್ತಕರು ಎಳನೀರು ವ್ಯಾಪಾರಿಗಳನ್ನು ಉದ್ದೇಶಿಸಿ ರೈತ ಮುಖಂಡರಾದ ಶಿವಳ್ಳಿ ಚಂದ್ರಶೇಖರ್ ಮಾತನಾಡಿ ಮಂಡ್ಯ ಜಿಲ್ಲೆಯ ಸುಂಡಳ್ಳಿ ಎಳನೀರು ಮಾರುಕಟ್ಟೆಯಲ್ಲಿ ಸುಮಾರು ವರ್ಷಗಳಿಂದ ಮಂಡ್ಯದ ಎಳನೀರು ಬೇರೆ ರಾಜ್ಯಗಳಿಗೆ ಮಾರಾಟವಾಗುವ ಮಾರುಕಟ್ಟೆ ವ್ಯವಸ್ಥೆ ಇದೆ.

ಇದರಲ್ಲಿ ಡೆಲ್ಲಿ ಮೂಲದ ವ್ಯಕ್ತಿಯು ಹಲವು ವರ್ಷಗಳಿಂದ ಎಳನೀರು ಮಾರಾಟಗಾರರ ಜೊತೆ ವ್ಯವಹಾರ ಮಾಡುತ್ತಿದ್ದರು.

ಇತ್ತೀಚಿನ ದಿನಗಳಲ್ಲಿ ಮಂಡ್ಯ ನಗರಕ್ಕೆ ಬಂದು ಸುಮಾರು ಐದರಿಂದ ಆರು ಲಾರಿ ಲೋಡ್ ಎಳನೀರು ಬೇಕೆಂದು ಮಾರಾಟಗಾರರಿಗೆ ತಿಳಿಸಿದಾಗ ಮಂಡ್ಯದ ಸುಂಡಳ್ಳಿ ಮಾರುಕಟ್ಟೆಯಲ್ಲಿ 5 ಲಾರಿ ಎಳನೀರನ್ನು ತೆಗೆದುಕೊಂಡು ಹೋಗಿರುತ್ತಾರೆ.

ನಂತರ ಹಣ ಸಂದಾಯ ಮಾಡುತ್ತೇನೆ ಎಂದು ನಂಬಿಸಿದರು. ಮೊದಲಿನಿಂದಲೂ ವ್ಯವಹಾರ ಮಾಡುತ್ತಿದ್ದರಿಂದ ಎಳನೀರು ಮಾರಾಟಗಾರರು ನಂಬಿಕೆ ಮೇರೆಗೆ ಎಳನೀರು ಲೋಡ್ ತುಂಬಿ ಕಳಿಸಿದ್ದಾರೆ. ಆದರೆ ಎಳನೀರು ತೆಗೆದುಕೊಂಡು ಹೋದ ಡೆಲ್ಲಿ ಮೂಲದ ವ್ಯಕ್ತಿ ಹಣ ಕೊಡದೆ ಫೋನನ್ನು ಎತ್ತದೆ ಮೋಸ ಮಾಡುತ್ತಿದ್ದಾನೆ ಅದಕ್ಕಾಗಿ ಮೋಸ ಮಾಡಿದ ವ್ಯಕ್ತಿ ವಿರುದ್ಧ ದೂರು ದಾಖಲಿಸಬೇಕು 20 ಲಕ್ಷ ವಸೂಲು ಮಾಡಿಕೊಡಬೇಕೆಂದು ಜಿಲ್ಲಾ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.

ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್
ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿ ಆ ವ್ಯಕ್ತಿಯ ಮೇಲೆ ದೂರು ನೀಡಿದರೆ ತನಿಖೆ ಮಾಡಿ ಕ್ರಮವಹಿಸುವುದಾಗಿ ಭರವಸೆ ನೀಡಿದರು.

ಮೋಸಕ್ಕೆ ಒಳಗಾದ ರೈತರು ಮೋಸ ಮಾಡಿದ ಡೆಲ್ಲಿ ಮೂಲದ ವ್ಯಕ್ತಿಗೆ ಕ್ರಿಮಿನಲ್ ಕೇಸ್ ದಾಖಲಿಸಿ ನ್ಯಾಯ ಒದಗಿಸಿ ಕೊಡಬೇಕೆಂದು ಒತ್ತಾಯಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!