Sunday, March 15, 2026
spot_img

ಮಂಡ್ಯದಲ್ಲಿ ರೈಲ್ವೇ ಸಹಕಾರ ಬ್ಯಾಂಕ್ ಘಟಕ ಉದ್ಘಾಟನೆ

ಮಂಡ್ಯದಲ್ಲಿ ದಿ‌ ರೈಲ್ವೆ ಕೋ-ಆಪರೇಟಿವ್ ಬ್ಯಾಂಕ್ ನ ಶಾಖೆಯನ್ನು ಬೃಹತ್ ಕೈಗಾರಿಕೆ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ರಾಜ್ಯದ್ಯಾಂತ ರೈಲ್ವೆ ಕೋ ಆಪರೇಟಿವ್ ಬ್ಯಾಂಕ್ ಇದ್ದು ಇದೀಗ ಮಂಡ್ಯ ನಗರದಲ್ಲೂ ಬ್ಯಾಂಕ್ ತರೆದಿರುವುದು ಸ್ವಾತಾರ್ಹ. ರಾಜ್ಯದ ಹಲವು ಭಾಗಗಳಲ್ಲಿ 35000 ಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿರುವ ಬ್ಯಾಂಕ್ ಇದು. ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಠೇವಣಿ ಹಣಕ್ಕೆ ಕಡಿಮೆ ಬಡ್ಡಿ ನೀಡುತ್ತಾರೆ. ಆದರೆ ರೈಲ್ವೆ ಕೋ-ಆಪರೇಟಿವ್ ಬ್ಯಾಂಕ್ 8% ಬಡ್ಡಿಯನ್ನು ನೀಡುವುದು ಸ್ವಾಗತಾರ್ಹ, ಅಂದು ಮಹಾರಾಜ ರ ಕಾಲದಲ್ಲಿ ಶುರುವಾದ ಈ ಬ್ಯಾಂಕ್ ಉತ್ತಮವಾದ ರೀತಿಯಲ್ಲಿ ಕೆಲಸ ಮಾಡಿ ಈ ಸಂಸ್ಥೆ ಮಾಡಿರುವುದಕ್ಕೆ ಈ ಮಟ್ಟಕ್ಕೆ ಬಂದಿದೆ. ಸಾರ್ವಜನಿಕರಿಗೆ ಇನ್ನೂ ಹೆಚ್ಚಿನ ಕೆಲಸ ಮಾಡಿ ಎಂದು ಹೇಳಿದರು. ವೇದಿಕೆಯಲ್ಲಿ ದಿ ರೈಲ್ವೆ ಕೋ- ಆಪರೇಟಿವ್ ಬ್ಯಾಂಕ್ ನ ಅಧ್ಯಕ್ಷರಾದ ಡಾ. ಮಂಜೇಗೌಡ, ಉಪಾಧ್ಯಕ್ಷ ಡಾ.ಆನಂದ್ ಎಸ್, ನಿರ್ದೇಶಕರುಗಳಾದ ಹನುಮಂತು, ಯೋಗಾನಂದ, ಮತ್ತು ಕುಮಾರ್, ಚಂದ್ರಶೇಖರ, ಯತಿರಾಜ್, ರಾಮನಂದನ್, ಮಂಜುನಾಥ್, ಶಿವ ಶಂಕರ್, ಉತ್ತೇಜ್, ಶ್ವೇತ, ನಿರ್ಮಲಾ, ಚಂದ್ರಶೇಖರ್, ನಂದ ಕುಮಾರ್ ಹಾಗೂ CEO ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!