Sunday, October 12, 2025
spot_img

ಮಂಡ್ಯ:ಸಮೀಕ್ಷೆಯಲ್ಲಿ ಉಪಜಾತಿ ನಮೂದಿಸಲು ಒಕ್ಕಲಿಗ ಸ್ವಾಮೀಜಿ ಕರೆ

ಮಂಡ್ಯ: ರಾಜ್ಯ ಸರ್ಕಾರಗಳು ಸೆ.22ರಿಂದ ಆರಂಭಿಸಲಿರುವ ಸಾಮಾಜಿಕ ಸಮೀಕ್ಷೆಯಲ್ಲಿ ಒಕ್ಕಲಿಗ ಸಮುದಾಯದವರು ಒಕ್ಕಲಿಗ ಎಂದು ನಮೂದಿಸುವ ಜೊತೆಗೆ ಉಪಜಾತಿಗಳನ್ನೂ ನಮೂದಿಸಿ ಎಂದು ಶ್ರೀ ಅರೇಶಂಕರ ಮಠದ ಪೀಠಾಧ್ಯಕ್ಷ ಶ್ರೀ ಸಿದ್ದರಾಮ ಚೈತನ್ಯ ಸ್ವಾಮೀಜಿ ಕರೆ ನೀಡಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಒಕ್ಕಲಿಗ ಸಂಘವು ಒಕ್ಕಲಿಗ ಸಮುದಾಯದ ಎಲ್ಲಾ ಉಪ ಜಾತಿಗಳು ಒಕ್ಕಲಿಗ ಎಂದು ಮಾತ್ರವೇ ನಮೂದಿಸುವಂತೆ ಕರೆ ನೀಡಿರುವುದು ಒಕ್ಕಲಿಗರಲ್ಲಿ ಗೊಂದಲ ಮೂಡಿಸುವ ನಡೆಯಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಕಾಂತರಾಜು ಆಯೋಗದ ವರದಿಯಲ್ಲಿ ಗಂಗಡ್‌ಕಾರ್, ಮರಸು ಮತ್ತು ದಾಸ ಒಕ್ಕಲಿಗರನ್ನು ಕನಿಷ್ಠ ಸಂಖ್ಯೆಯಲ್ಲಿ ತೋರಿಸಿದ್ದು. ಅದು ಸಮುದಾಯಕ್ಕೆ ಮಾಡಿದ ಅನ್ಯಾಯವಾಗಿದೆ. ಪ್ರಸ್ತುತ ನಡೆಯುತ್ತಿರುವ ಸಮೀಕ್ಷೆಯಲ್ಲಿ ಸೂಕ್ತ ರೀತಿಯಲ್ಲಿ ಜಾತಿ ಕಾಲಂನ ಅಡಿಯಲ್ಲಿ ಒಕ್ಕಲಿಗ ಎಂದು ಉಪಜಾತಿ ಕಾಲಂ ಅಡಿಯಲ್ಲಿ ತಮ್ಮ ಜಾತಿಗಳನ್ನು ನಮೂದಿಸುವಂತೆ ಮನವಿ ಮಾಡಿದರು.
ರಾಜ್ಯ ಒಕ್ಕಲಿಗ ಸಂಘವು ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಕೆಲವು ಜಾಹೀರಾತುಗಳ ಮೂಲಕ ಒಕ್ಕಲಿಗ ಎಂದು ಮಾತ್ರವೇ ನಮೂದಿಸಲು ತಿಳಿಸಿದೆ. ಇದರಿಂದ ಭವಿಷ್ಯದಲ್ಲಿ ಸಮುದಾಯದ ಉಪಜಾತಿಗಳ ಆಚಾರ, ವಿಚಾರ, ಪದ್ದತಿಗಳಿಗೆ ತೊಡಕುಂಟಾಗಲಿದೆ. ಅವುಗಳನ್ನು ನಿಗ್ರಹಿಸಲು ಈಗಲೇ ಸಿದ್ದರಿರಬೇಕಾಗಿದ್ದು, ಉಪಜಾತಿಗಳನ್ನು ಮರೆಯದೇ ನಮೂದಿಸುವಂತೆ ಕರೆ ನೀಡಿದರು.
ಗೋಷ್ಠಿಯಲ್ಲಿ ಒಕ್ಕಲಿಗ ಧರ್ಮ ಮಹಾಸಭಾದ ರಾಜ್ಯ ಸಂಚಾಲಕ ಸಿ.ಎಂ.ಕ್ರಾಂತಿ ಸಿಂಹ, ಬ.ನಾ.ರವಿ, ಕೆ.ಪಿ.ರಕ್ಷಿತ್‌ಗೌಡ, ಕೆ.ಶಿವರಾಜ್, ಸಂತೋಷ್ ಇದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!