Sunday, November 29, 2026
spot_img

ಮಿಮ್ಸ್ ಭದ್ರತಾ ಲೋಪ:ಅನರ್ಹತೆಯೆ ಅರ್ಹತೆಯಾದ ಕಥೆ!

ಮಿಮ್ಸ್ ಭದ್ರತಾ ಲೋಪ:ಐಡಿಯಲ್ ಏಜೆನ್ಸಿಯ ಅನರ್ಹತೆಯೆ ಅರ್ಹತೆಯಾಯಿತೆ?

ಮಂಡ್ಯ ಮಿಮ್ಸ್ ನಲ್ಲಿ ಅಳವಡಿಸಿದ್ದ ನಾಮಫಲಕದಲ್ಲಿನ ಕುಮಾರಸ್ವಾಮಿ ಹಾಗೂ ಮೋದಿಯವರ ಚಿತ್ರಗಳಿಗೆ ಟೇಪ್ ಅಂಟಿಸಿ ಮುಖ ಮುಚ್ಚಿದ ಪ್ರಕರಣದ ಕುರಿತು ಮಂಡ್ಯ ಜಿಲ್ಲಾಧಿಕಾರಿಗಳು ಇಪ್ಪತ್ತು ನಾಲ್ಕ ಗಂಟೆಯೊಳಗೆ ವಿವರಣೆ ನೀಡುವಂತೆ ಮಿಮ್ಸ್ ನಿರ್ದೇಶಕರಿಗೆ ಸೂಚಿಸಿದ್ದಾರೆ.

ಒಂದಿಬ್ಬರು ಭದ್ರತಾ ಸಿಬ್ಬಂದಿ ಯನ್ನು ಹೊಣೆಗಾರರಾಗಿಸಿ ಮಿಮ್ಸ್ ಅಧಿಕಾರಿಗಳು ನುಣುಚಿಕೊಳ್ಳಬಹುದು.ಒಂದಿಬ್ಬರು ಭದ್ರತಾ ಸಿಬ್ಬಂದಿಯ ತಲೆದಂಡವೂ ಆಗಬಹುದು.

ಆದರೆ ಈ ಟೇಪ್ ಅಂಟಿಸಿದ ಪ್ರಕರಣದಲ್ಲಿ ರಾಜಕೀಯ ಕುತಂತ್ರವಿದ್ದು.ಇದರಲ್ಲಿ ಮಿಮ್ಸ್ ಅಧಿಕಾರಿಗಳು ಸಹ ಶಾಮೀಲಾಗಿದ್ದಾರೆಂಬುದು ಕಾಂಗ್ರೆಸ್ ನಾಯಕರ ಶಂಕೆಯಾಗಿದೆ.
.ಇದರ ಬೆನ್ನಲ್ಲೆ ಆಸ್ಪತ್ರೆಯ ಭದ್ರತಾ ಹೊಣೆ ಹೊತ್ತಿರುವ ಐಡಿಯಲ್ ಏಜೆನ್ಸಿಗೆ ಇಲ್ಲಿ ಅನರ್ಹತೆಯೆ ಅರ್ಹತೆಯಾಗಿ ಪರಿಗಣಿಸಿದ ಭದ್ರತಾ ಸೇವೆಯ ಕಾರ್ಯಾದೇಶ ನೀಡಲಾಗಿದೆ.

ಕಳೆದ ಮೇನಲ್ಲಿ ಮಂಡ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಹೊರಗುತ್ತಿಗೆ ಆಧಾರದಲ್ಲಿ ನೂರಕ್ಕು ಹೆಚ್ಚು ಭದ್ರತಾ ಸಿಬ್ಬಂದಿ ಒದಗಿಸುವ ಟೆಂಡರ್ ಅಹ್ವಾನಿಸಲಾಗುತ್ತದೆ.

೨೦೨೬ ರ ಹಿಂದಿನ ಐದು ವರ್ಷಗಳಲ್ಲಿ ಕನಿಷ್ಠ ನೂರು ಮಂದಿ ಭದ್ರತಾ ಸಿಬ್ಬಂದಿಯನ್ನು ಖಾಸಗಿ ಇಲ್ಲವೆ ಸರಕಾರಿ ಆಸ್ಪತ್ರೆಗೆ ನಿರಂತರವಾಗಿ ಮೂರು ವರ್ಷ ಪೂರೈಸಿರಬೇಕು ಎಂಬ ಷರತ್ತು ಹಾಕಲಾಗುತ್ತದೆ.ಇದಲ್ಲದೆ ಟೆಂಡರ್ ನಿಯಮಗಳನ್ನು ನಿಯಮಬಾಹಿರವಾಗಿ ತಿದ್ದುಪಡಿ ಮಾಡಿ ಖಾಸಗಿ ಸಂಸ್ಥೆಗಳಿಗೂ ಪೂರೈಸಿರಬೇಕು ಎಂಬ ಸಾಲು ಸೇರಿಸಿ ಐಡಿಯಲ್ ಏಜೆನ್ಸಿಯನ್ನು ಎಲ್ ೧ ಆಗಿ ಪರಿಗಣಿಸಲಾಗುತ್ತದೆ.

ಆದರೆ ಸದರಿ ಏಜೆನ್ಸಿ ಕೆಂಪ್ಕೋ ಎಂಬ ಖಾಸಗಿ ಕಂಪನಿಗೆ ಭದ್ರತಾ ಸಿಬ್ಬಂದಿ ಪೂರೈಸಿರುವುದಾಗಿ ಸೇವಾ ಅನುಭವದ ಪ್ರಮಾಣ ಪತ್ರ ಸಲ್ಲಿಸಿದೆ.ಆದರೆ ಈ ಸೇವಾ ಅನುಭವ ಪ್ರಮಾಣ ಪತ್ರದ ನೈಜತೆ ಬಗೆಯೆ ಹಲವು ಪ್ರಶ್ನೆಗಳಿವೆ.

ಇದಲ್ಲದೆ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಮಾನವ ಸಂಪನ್ಮೂಲ ಪೂರೈಸಿದ ಹಲವು ಏಜೆನ್ಸಿಗಳನ್ಮು ಕಡೆಗಾಣಿಸಿ ಐಡಿಯಲ್ ಏಜೆನ್ಸಿಯನ್ನೆ ಎಲ್ ಒನ್ ಆಗಿ ಪರಿಗಣಿಸಲು ಆಡಳಿತರೂಡಾ ಪಕ್ಷದ ಶಾಸಕರೊಬ್ಬರ ತೀವ್ರ ಶಿಫಾರಸ್ಸೆ ಕಾರಣ ಎನ್ನಲಾಗಿದೆ.

ಇದರ ನಡುವೆ ಸದರಿ ಏಜೆನ್ಸಿ ಸಲ್ಲಿಸಿರುವ ಅನುಭವ ಪ್ರಮಾಣ ಪತ್ರದ ನೈಜತೆ ವಿರುದ್ದ ಮಿಮ್ಸ್ ಗೆ ದೂರು ದಾಖಲಾಗಿದೆ.

ಸದರಿ ಏಜೆನ್ಸಿ ಖಾಸಗಿ ಕಂಪನಿಗೆ ಮಾನವ ಸಂಪನ್ಮೂಲ ಸೇವೆ ಒದಗಿಸಿದ ಸಂಬಂದ ಕಂಪನಿಯಿಂದ ಪಡೆದಿರುವ ಕಾರ್ಯಾದೇಶ.ಕಂಪನಿಯಿಂದ ಪಡೆದಿರುವ ವೇತನ ಬಾಬ್ತು ಬಿಲ್ ವಿವರ ಪಡೆಯುವಂತೆ ಬಿಲ್ ಮೂಲದಲ್ಲಿ ಜಿಎಸ್ ಟಿ ಕಡಿತಗೊಳಿಸಿರುವ ಕುರಿತು ಮಾಹಿತಿ ಪಡೆಯುವಂತೆ ದೂರಿನಲ್ಲಿ ಕೋರಲಾಗಿದೆ.

ಆದರೆ ದೂರಿನ ಸಂಬಂದ ಯಾವುದೆ ಕ್ರಮ ಕೈಗೊಳ್ಳಲು ಮಿಮ್ಸ್ ಆಡಳಿತ ಮಂಡಳಿ ಸಿದ್ದವಿಲ್ಲ.ಇಷ್ಟೆಲ್ಲ ಅನರ್ಹತೆಯನ್ನೆ ಅರ್ಹತೆಯಾಗಿಸಿ ಟೆಂಡರ್ ಕಾರ್ಯಾದೇಶ ನೀಡಿದ ಮಿಮ್ಸ್ ನಿರ್ದೇಶಕ ಹಾಗೂ ಮೆಡಿಕಲ್ ಸೂಪರಿಂಟೆಂಡೆಂಟ್ ತಲೆದಂಡವಾಗುವಂತೆ ಕುಮಾರಸ್ವಾಮಿ ಯವರ ಪ್ರಕರಣ ಎದ್ದು ನಿಂತಿದೆ.

ರಾಜ್ಯ ಸರ್ಕಾರ ನಿರ್ದೇಶಕ ಹಾಗೂ ಮೆಡಿಕಲ್ ಸೂಪರಿಂಟೆಂಡೆಂಟ್ ತಲೆದಂಡ ಪಡೆದು ಕುಮಾರಸ್ವಾಮಿ ಟೇಪ್ ಪ್ರಕರಣ ಅಂತ್ಯ ಹಾಡಲಿದೆಯೋ..ಇಲ್ಲವೆ ಅನರ್ಹ ಏಜೆನ್ಸಿಯ ಕಾರ್ಯಾದೇಶ ರದ್ದುಗೊಳಿಸಿ ನಿರ್ದೇಶಕರು ತಪ್ಪು ಸರಿ ಮಾಡಿಕೊಳ್ಳುವರೋ..ಕಾದು ನೋಡಬೇಕಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!