ಮೆಡಿಕಲ್ ಕಾಲೇಜು ಒತ್ತುವರಿ ತೆರವುಗೊಳಿಸಲು ಸಚಿವರಿಗೆ ಇಚ್ಚಾಶಕ್ತಿ ಕೊರತೆ
ಮಂಡ್ಯ ಮೆಡಿಕಲ್ ಕಾಲೇಜಿಗೆ ಸೇರಿದ ಭೂಮಿಯ ಒತ್ತುವರಿ ತೆರವುಗೊಳಿಸುವಲ್ಲಿ ಉಸ್ತುವಾರಿ ಸಚಿವರಿಗೆ ಅಗತ್ಯ ಇಚ್ಚಾಶಕ್ತಿ ಇಲ್ಲವೆಂದು ಮಾಜಿ ಶಾಸಕ ಡಿ.ಸಿ ತಮ್ಮಣ್ಣ ಟೀಕಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಮಾತನಾಡಿದ ಅವರು ಮೆಡಿಕಲ್ ಕಾಲೇಜು ಭೂಮಿ ಉಳಿಸಲು ಜಿ.ಟಿ ನರೇಂದ್ರ ಕುಮಾರ್ ನಿವೃತ್ತ ಇಂಜಿನಿಯರ್ ಹೊನ್ನಯ್ಯ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ತೆರವಿಗೆ ಆದೇಶ ತಂದರು ಈವರೆಗೂ ಒತ್ತುವರಿ ತೆರವು ಮಾಡಿಸಲು ಇವರಿಗೆ ಸಾಧ್ಯವಾಗಿಲ್ಲ.
ಇದರಿಂದಾಗಿ ವೈದ್ಯಕೀಯ ವಿದ್ಯಾರ್ಥಿಗಳು ಶವಾಗಾರದ ಬಳಿ ವಾಸ ಮಾಡುವಂತಾಗಿದೆ.ಇಡೀ ಕಾಲೇಜು ವಾತವರಣ ಒಂದು ಮೆಡಿಕಲ್ ಕಾಲೇಜಿಗೆ ಇರಬೇಕಾದ ಶೈಕ್ಷಣಿಕ ವಾತವರಣದ ಕೊರತೆ ಎದುರಿಸುತ್ತಿದೆ.ಅಗತ್ಯ ಭೂಮಿ ನೀಡದ ಕಾರಣಕ್ಕೆ ಮೆಡಿಕಲ್ ಕೌನ್ಸಿಲ್ ಮಂಡ್ಯ ಕ್ಕೆ ಬರಬೇಕಾದ ೫೦ ಮೆಡಿಕಲ್ ಸೀಟುಗಳನ್ನು ನಿರಾಕರಿಸಿದೆ.
ತಾಯಿ ಮಕ್ಕಳ ಆಸ್ಪತ್ರೆಯನ್ನು ಮಂಡ್ಯದಿಂದ ಹತ್ತು ಕಿಲೋ ಮೀಟರ್ ದೂರದ ಬಿ ಹೊಸೂರಿನಲ್ಲಿ ನಿರ್ಮಿಸಿ ಜನರ ಉಪಯೋಗಕ್ಕೆ ಬರದಂತೆ ಮಾಡಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಉಸ್ತುವಾರಿ ಸಚಿವರು ಜಿಲ್ಲೆಯ ಬಗ್ಗೆ ಬದ್ದತೆಯಿಂದ ಸಭೆ ಕರೆಯಲಿ.ನಾವು ಭಾಗೀಯಾಗಿ ಅಗತ್ಯ ಸಹಕಾರ ಕೊಡಲು ಸಿದ್ದ ಎಂದರು.


