ಮೈ ಷುಗರ್ ಅಧ್ಯಕ್ಷರಿಂದ ದುರುದ್ದೇಶಪೂರಿತ ದೂರು ದಾಖಲು- ಕ್ರಮಕ್ಕೆ ಶಿವಕುಮಾರ್ ಆಗ್ರಹ
ಮಂಡ್ಯ:ಮೈ ಷುಗರ್ ಕಾರ್ಖಾನೆ ೧೦೦ ವರ್ಷ ತುಂಬುತ್ತಿರುವ ರಾಜ್ಯ ಸರ್ಕಾರದ ಏಕೈಕ ಕಾರ್ಖಾನೆಯಾಗಿದ್ದು ಅದನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿರುತ್ತದೆ. ಆದಕಾರಣ ಮಾಹಿತಿ ಹಕ್ಕು ಅಧಿನಿಯಮ ಪ್ರಕಾರ ದಾಖಲಾತಿ ಪಡೆದುಕೊಂಡು ಕಾರ್ಖಾನೆಯ ಅಧ್ಯಕ್ಷರ ಅವ್ಯವಹಾರಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ ಕಾರಣ ಮೈ ಷುಗರ್ ಅಧ್ಯಕ್ಷರು ತಮ್ಮ ವಿರುದ್ಧ ದುರುದ್ದೇಶಪೂರಿತ ದೂರು ದಾಖಲಿಸಿದ್ದಾರೆ ಎಂದು ಮಾಜಿ ನಗರಸಭಾ ಸದಸ್ಯ ಶಿವಕುಮಾರ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ೨೦೨೫-೨೬ ನೇ ಸಾಲಿನಲ್ಲಿ ಸಕ್ಕರೆ ಕಂಪನಿ ಅಧ್ಯಕ್ಷರು ೪,೫೦,೦೦೦ ಲಕ್ಷ ಟನ್ ಕಬ್ಬನ್ನು ಅರೆಯುವುದಾಗಿ ಕೇವಲ ೧,೧೯,೧೮೦ ಟನ್ ಅರೆಯುವುದಕ್ಕೆ ಸುಸ್ತಾಗಿದೆ. ರೈತರು ಸಾಗಾಣಿಕೆ ಮಾಡಿದ ಕಬ್ಬಿಗೆ ಹಣವನ್ನು ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.
ಸರ್ಕಾರದ ನೌಕರರ ವೃಂದಾ ಮತ್ತು ನೇಮಕಾತಿ ನಿಯಮ ರೋಸ್ಡರ್ ಪಾಲಿಸದೆ ಅಧ್ಯಕ್ಷರ ಟಿಪ್ಪಣಿ ಮೇರೆಗೆ ನೌಕರರ ನೇಮಕಾತಿ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ.ಇವರು ಕಾಂಗ್ರೆಸ್ ಪದಾಧಿಕಾರಿಗಳನ್ನು ನೇಮಕ ಮಾಡುವಂತೆ ಕಾರ್ಖಾನೆಗೆ ನೌಕರರನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಕಂಪನಿಯ ಮುಖ್ಯ ಆಡಳಿತಾಧಿಕಾರಿ ಮನುಜಶ್ರೀ ವೈ.ಸಿ. ರವರು ಕಂಪನಿಯ ಅಧ್ಯಕ್ಷರು ನಮಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆಂದು ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿರುವುದೇ ಇವರ ಅವ್ಯವಹಾರಕ್ಕೆ ಸಾಕ್ಷಿಯಾಗಿದೆ ಎಂದರು.
ಮಲಾಸಸ್ (ಕಾಕಂಬಿ) ಟ್ಯಾಂಕ್ ಸುಮಾರು ಅಂದಾಜು ೧೨೦೦ ಟನ್‌ಗಿಂತ ಅಧಿಕ ಸೋರಿಕೆಯಾಗಿ ಆಗಿ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿದ್ದರೂ ಈ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಪಾಪಣ್ಣ, ಅಪ್ಪಾಸಾಹೇಬ್ ಪಾಟೀಲ್ ಇನ್ನಿತರರಿಗೆ ವ್ಯವಸ್ಥಾಪಕ ನಿರ್ದೇಶಕರು ಕಾರಣ ಕೇಳಿ ನೋಟಿಸ್ ನೀಡುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.
ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಕೇಳಿದಾಗ ಕೆಲವೊಂದು ದಾಖಲಾತಿಯನ್ನು ಮಾತ್ರ ನೀಡಿದ್ದು, ಇನ್ನೂ ಕೆಲವು ದಾಖಲೆಗಳನ್ನು ನೀಡುತ್ತಿಲ್ಲ. ವಿನಾ ಕಾರಣ ಕಂಪನಿಯ ಅಧ್ಯಕ್ಷರಾದ ಸಿ.ಡಿ.ಗಂಗಾಧರ್ ರವರು ಸುಳ್ಳಿನ ಆರೋಪ ವಹಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ನನ್ನ ಮೇಲೆ ದೂರು ನೀಡಿರುವುದು ಎಷ್ಟು ಸರಿ.ಗಾಳಿಯಲ್ಲಿ ಗುಂಡು ಹಾರಿಸುವುದನ್ನು ಬಿಟ್ಟು ರೈತರ ಕ್ಷಮೆ ಕೇಳಲಿ.ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬಿ.ಜೆ.ಪಿ. ವತಿಯಿಂದ ಉಗ್ರ ಹೋರಾಟವನ್ನು ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ನಗರಸಭಾ ಮಾಜಿ ಸದಸ್ಯ ಪ್ರಸನ್ನಕುಮಾರ್,ಮುಖಂಡರಾದ ಮನುಕುಮಾರ್, ದೀಪಕ್, ಸುನಿಲ್,ಶಿವಲಿಂಗು ಹಾಜರಿದ್ದರು.


