ರೈತನ ಸಮಸ್ಯೆ ಆಲಿಸದ ಅಧಿಕಾರಿಗಳು:ಬೇಸತ್ತ ರೈತ ಡಿಸಿ ಕಚೇರಿ ಎದುರು ಆತ್ಮಹತ್ಯೆ ಯತ್ನ
ತಮ್ಮ ಜಮೀನು ವಿವಾದದ ಪರಿಹಾರ ಸಂಬಂದ ಸರಕಾರಿ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲವೆಂದು ಬೇಸತ್ತ ರೈತನೊಬ್ಬ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಮೈಮೇಲೆ ಪೇಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ.
ಕೃಷ್ಣರಾಜಪೇಟೆಯ ಮೂಡಲಕೊಪ್ಪಲು ಗ್ರಾಮದ ರೈತ ಮಂಜೇಗೌಡ(೫೫) ಆತ್ಮಹತ್ಯಗೆ ಯತ್ನಿಸಿದ ದುರ್ದೈವಿ ರೈತನಾಗಿದ್ದಾನೆ.ತನ್ನ ಜಮೀನು ಸಂಬಂದದ ಅಹವಾಲು ಹೇಳಿಕೊಳ್ಳಲು ನಿನ್ನೆ ಸಹ ಮಂಡ್ಯ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲು ಯತ್ನಿಸಿದ್ದಾನೆ.ಆದರೆ ಭೇಟಿ ಸಾಧ್ಯವಾಗಿಲ್ಲ.ಇಂದು ಸಹ ಜಿಲ್ಲಾಧಿಕಾರಿಗಳು ಕಚೇರಿಯಲ್ಲಿದ್ದರು ಭೇಟಿ ಸಾಧ್ಯವಾಗಿಲ್ಲ.ಬೇಸತ್ತ ರೈತ ಆತ್ಮಹತ್ಯೆಗೆ ಮುಂದಾಗಿದ್ದಾನೆ.
ಸುಟ್ಟುಗಾಯಗಳಿಂದ ತೀವ್ರ ಗಾಯಗೊಂಡಿರುವ ರೈತನನ್ನು ಮಿಮ್ಸ್ ನಲ್ಲಿ ಉಪಚರಿಸಲಾಗುತ್ತಿದೆ.


