ಮೈಸೂರು: ನಂಜನಗೂಡು ನಗರಸಭೆ ಯಲ್ಲಿ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿದ್ದ ನಾಲ್ವರು ಬಿಜೆಪಿ ಸದಸ್ಯರ ಸದಸ್ಯತ್ವವನ್ನು ಜಿಲ್ಲಾ ದಂಡಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ರದ್ದುಗೊಳಿಸಿ ಆದೇಶಿಸಿದ್ದಾರೆ.
ನಗರಸಭೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಬಹುಮತ ಹೊಂದಿತ್ತು. ಆದರೆ,ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಶ್ರೀಕಂಠಸ್ವಾಮಿ ಗೆಲುವು ಸಾಧಿಸಿದ್ದರು. ಬಿಜೆಪಿಯ ಸದಸ್ಯರಾದ ಗಿರೀಶ್ ಕುಮಾರ್, ಗಾಯತ್ರಿ ಮುರುಗೇಶ್, ಮೀನಾಕ್ಷಿ ನಾಗರಾಜ್ ಹಾಗೂ ವಿಜಯಲಕ್ಷ್ಮಿ ಕುಮಾರ್ ಅವರು ಪಕ್ಷದ ‘ವಿಪ್ ಉಲ್ಲಂಘಿಸಿ, ಗೈರು ಹಾಜರಾಗಿದ್ದರು. ಇದು ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಕಾರಣವಾಗಿತ್ತು.
ಬಿಜೆಪಿ ನಂಜನಗೂಡು ನಗರ ಘಟಕದ ಅಧ್ಯಕ್ಷ ಸಿದ್ದರಾಜು, ಸದಸ್ಯ ದೇವ ಅವರು 2024ರ ಅ.29ರಂದು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು.
ಮಂಡ್ಯದಲ್ಲು ವಿಚಾರಣೆ:ಮಂಡ್ಯ ನಗರಸಭೆಯ ಬಾಕೀ ೧೩ ತಿಂಗಳ ಅವಧಿಯ ಅಧ್ಯಕ್ಷ ಹುದ್ದೆಗೆ ಕಳೆದ ಆಕ್ಟೋಬರ್ ನಲ್ಲಿ ಚುನಾವಣೆ ನಡೆದಿತ್ತು.ಈ ಸಂಧರ್ಭದಲ್ಲಿ ಕಾಂಗ್ರೇಸ್ ನಿಂದ ಕೆಲವರು ಜನತಾ ದಳಕ್ಕೆ ಜನತಾ ದಳದಿಂದ ಕೆಲ ನಗರಸಭಾ ಸದಸ್ಯರು ಪಕ್ಷಾಂತರ ಮಾಡಿದ್ದರು.ಪಕ್ಷಾಂತರ ಮಾಡಿದ ಸದಸ್ಯರ ಅನರ್ಹತೆ ಕೋರಿ ಮಂಡ್ಯ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಈಗಾಗಲೇ ಪ್ರಕರಣ ದಾಖಲಾಗಿದೆ.ಸದ್ಯ ವಿಚಾರಣೆ ನಡೆದಿದ್ದು ತೀರ್ಪು ಬಾಕೀ ಇದೆ.ಅನರ್ಹತೆ ಘೋಷಣೆಯಾದ ಸದಸ್ಯರು ಮುಂದಿನ ಆರು ವರ್ಷಗಳ ಕಾಲ ಯಾವುದೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.