Wednesday, January 21, 2026
spot_img

ಶಿವಮೊಗ್ಗ ನಗರಪಾಲಿಕೆ ವಿರುದ್ದ ಪೋಲಿಸ್ ಠಾಣೆಯಲ್ಲಿ ದೂರು ದಾಖಲು

ಡಿಸೆಂಬರ್,03, 2025 : ಶಿವಮೊಗ್ಗ : 7 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ಶಿವಮೊಗ್ಗದ ವಿದ್ಯಾ ನಗರದಲ್ಲಿ ನಡೆದಿದೆ.

ಡಿಸೆಂಬರ್​ 02 ರಂದು 07 ವರ್ಷದ ಬಾಲಕ ಆಟವಾಡುತ್ತಿದ್ದ ವೇಳೆ ಬೀದಿ ನಾಯಿಯೊಂದು ಏಕಾಏಕಿ ಬಾಲಕನ ಮೇಲೆರಗಿದೆ. ಇದರಿಂದಾಗಿ ಬಾಲಕನಿಗೆ ದೇಹದ ಐದು ಕಡೆ ಕಚ್ಚಿದಗಾಯಗಳಾಗಿದ್ದು ಆತನನ್ನು ಸರ್ಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಿಂದಾಗಿ ಪೋಷಕರು ಪಾಲಿಕೆಯ ಅಧಿಕಾರಿಗಳ ಮೇಲೆ ಅಸಮಧಾನ ವ್ಯಕ್ತಪಡಿಸಿದ್ದು, ಪೊಲೀಸ್​ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.
10-15 ಬೀದಿನಾಯಿಗಳು ಸಾರ್ವಜನಿಕರಿಗೆ ತೀವ್ರತೊಂದರೆ ಉಂಟು ಮಾಡುತ್ತಿದೆ. ಈ ಕುರಿತು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದರೂ ಸಹ ಪಾಲಿಕೆ ಅಧಿಕಾರಿಗಳು ಯಾವ ಕ್ರಮವನ್ನೂ ಜರುಗಿಸಿಲ್ಲ. ಈ ಹಿನ್ನೆಕೆ ಪಾಲಿಕೆ ಆಯುಕ್ತರು ಮತ್ತು ಹೆಲ್ತ್ ಇನ್ ಸ್ಪೆಕ್ಟರ್ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ಬಾಲಕನ ಪೋಷಕರು ದೂರು ನೀಡಿದ್ದಾರೆ

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!