Sunday, March 15, 2026
spot_img

ಸೃಷ್ಟಿ ಒಡಲು ಕೃತಿ ಯುವಜನರ ಕೈಪುಸ್ತಕ:ಲೋಕಾಯುಕ್ತ ಎಸ್ ಪಿ ಸ್ನೇಹಾ ಅಭಿಮತ

ಸೃಷ್ಟಿ ಒಡಲು ಕೃತಿ ಯುವಜನರ ಕೈಪುಸ್ತಕ:ಲೋಕಾಯುಕ್ತ ಎಸ್ ಪಿ ಸ್ನೇಹಾ ಅಭಿಮತ

ಹೆಣ್ಮಕ್ಕಳ ಆರೋಗ್ಯ ಸೇರಿದಂತೆ ಹಲವು ವೈಜ್ಞಾನಿಕ ವಿಷಯಗಳನ್ನು ಚರ್ಚಿಸುವ ಅನಿವಾಸಿ ಭಾರತೀಯ ವೈದ್ಯೆ ಡಾ.ಪ್ರೇಮಲತಾ ಬಿ.ಯವರ ಸೃಷ್ಟಿ ಒಡಲು ಕೃತಿ ಯುವಜನರ ಕೈಪುಸ್ತಕವಾಗಬೇಕು ಎಂದು ರಾಮನಗರ ಲೋಕಾಯುಕ್ತ ಎಸ್ ಪಿ ಸ್ನೇಹಾ ಪಿ.ಇ
ವಿ ಅಭಿಪ್ರಾಯಪಟ್ಟರು ಮಂಡ್ಯದ ಕರ್ನಾಟಕ ಸಂಘದಲ್ಲಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು.ಈಗ ಮನೆಗಳನ್ನು ದೊಡ್ಡದಾಗಿ ಕಟ್ಟಿಸುತ್ತಾರೆ ಅಲ್ಲಿ ನಾಲ್ಕು ಪುಸ್ತಕಗಳು ಇರುವುದಿಲ್ಲ.ವೃತ್ತ ಪತ್ರಿಕೆ ತರಿಸುವ ಪರಿಪಾಠವೂ ಇಲ್ಲವಾಗಿದೆ.ಆದರೆ ಪುಸ್ತಕಗಳು ನಮ್ಮ ಬದುಕಿನ ಜತೆಗೆ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ .ಅಂಥಹ ಪುಸ್ತಕಗಳಲ್ಲಿ ಒಡಲು ಸೃಷ್ಟಿ ಕೃತಿಯೂ ಒಂದಾಗಿದೆ ಎಂದು ಶ್ಲಾಘಿಸಿದರು.

ಜೀವನದಲ್ಲಿ ಉದ್ಯೋಗ ಮತ್ತು ವೈಯಕ್ತಿಕ ಅಭಿರುಚಿಗಳು ಒಂದೇ ಆಗಿರುವುದು ವಿರಳವಾದ ಸಂಧರ್ಭವಾಗಿದೆ.

ಡಾ.ಪ್ರೇಮಲತಾ ಆ ದೃಷ್ಟಿಯಿಂದ ಅದೃಷ್ಟವಂತರು.ದೂರದ ದೇಶದಲ್ಲಿದ್ದರು ತಮ್ಮ ಸುತ್ತಲಿನ ವಾತಾವರಣವನ್ನು ಕನ್ನಡಮಯಗೊಳಿಸಿದ್ದಾರೆ.ಲೇಖಕಿ ಪ್ರೇಮಲತಾ ಪೂರ್ವ ಮತ್ತು ಪಶ್ಚಿಮ ಎರಡು ದೇಶಗಳ ಮಹಿಳೆಯರ ಬದುಕನ್ನು ಹತ್ತಿರದಿಂದ ಕಂಡು ಬರೆದಿದ್ದಾರೆ.

ಪುಸ್ತಕ ಅಕ್ಕ ತಂಗಿಯರ ನಡುವಿನ ಆತ್ಮೀಯ ಸಂಭಾಷಣೆಯಂತಿದೆ.ಹೆಣ್ಣಿನ ದೇಹ ರಚನೆ.ಅದರ ಕಾರ್ಯದ ಬಗ್ಗೆ ಸರಳವಾಗಿ ವಿವರಿಸುತ್ತಾ ತಪ್ಪು ತಿಳುವಳಿಕೆಗಳನ್ನು ಹೋಗಲಾಡಿಸುವಲ್ಲಿ ಇದು ಪ್ರಮುಖ ಕೃತಿಯಾಗಿದೆ.

ಸಂತಾನೋತ್ಪತ್ತಿಯನ್ನು ತೆಗಳುವ ಇಲ್ಲವೆ ವಿಜೃಂಭಿಸುವ ಪ್ರವೃತ್ತಿ ಸಲ್ಲದು.ಈ ಪುಸ್ತಕ ಹೆಣ್ಮಕ್ಕಳಿಗೆ ಆತ್ಮವಿಶ್ವಾಸ ತುಂಬುತ್ತದೆ .ಇದು ರಾಜ್ಯದ ಎಲ್ಲ ಗ್ರಾಪಂಗಳ ಗ್ರಂಥಾಲಯಗಳಿಗೆ ತಲುಪಿಸುವ ಕಾರ್ಯವಾಗಬೇಕು ಎಂದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!