Thursday, April 18, 2024
spot_img

ಕನ್ನಡನಾಡಿನ ವ್ಯಾಪಾರಿ ಮಾರುಕಟ್ಟೆ ಕನ್ನಡಿಗರ ಕೈತಪ್ಪುತ್ತಿದೆ!

ಕೃಷ್ಣರಾಜ ಪೇಟೆಯ ಕನ್ನಡ ರಾಷ್ಟೀಯವಾದಿ ಬರಹಗಾರ ಕುಮಾರಸ್ವಾಮಿ ಬರೆಯುತ್ತಾರೆ

ಹೊಸ ಆಯಾಮದ ಕಡೆಗೆ ಕನ್ನಡ ಹೋರಾಟದ ಹಾದಿ
ಆತ್ಮೀಯರೇ, ಕಳೆದ ವರ್ಷ ಡಿಸೆಂಬರ್ ತಿಂಗಳ 27 ರಂದು ಬೆಂಗಳೂರಿನಲ್ಲಿ ನಾರಾಯಣಗೌಡರ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯು ವಾಣಿಜ್ಯ ಕಟ್ಟಡಗಳು, ವಾಣಿಜ್ಯ ಮಳಿಗೆಗಳು ಸೇರಿದಂತೆ ಖಾಸಗಿ/ಸರ್ಕಾರಿ ಉದ್ಯಮಗಳಲ್ಲಿ ಕನ್ನಡ ನಾಮಫಲಕ ಹಾಕಿಸುವ ದೊಡ್ಡ ಅಭಿಯಾನ ನಡೆಯಿತು .‌ಇದರಲ್ಲಿ ನಾರಾಯಣಗೌಡರು ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಹೋರಾಟಗಾರರು ಜೈಲು ಸೇರುವ ಹಂತಕ್ಕೆ ಹೋಯಿತು . ಆದರೆ ಇದು ಕನ್ನಡ ಮತ್ತು ಕರ್ನಾಟಕ ರಕ್ಷಣಾ ಹೋರಾಟದ ಹಾದಿಯನ್ನು ಹೊಸ ದಿಕ್ಸೂಚಿಯ ಕಡೆಗೆ ಹೋಗುವ ದಾರಿ ತೋರಿತ್ತು .
ಈ ಹೋರಾಟ ಪೂರ್ವಭಾವಿ ಸಭೆಯಲ್ಲಿ ನಾರಾಯಣಗೌಡರು ಒಬ್ಬ ಮಾರ್ವಾಡಿಯ ಬೆಳವಣಿಗೆಯನ್ನು ಹೇಳಿದರು . ಆತ ಗಾಂಧಿನಗರ ದಲ್ಲಿ ಒಂದು ಸಣ್ಣ ಮಳಿಗೆಯಲ್ಲಿ ಇದ್ದವನು ,ಈಗ ಬೆಂಗಳೂರಿನ ಪ್ರಮುಖ ಐಟಿ ಸೆಕ್ಟರ್ ನಲ್ಲಿ 300 ಕೋಟಿ ಬಾಡಿಗೆ ಗಳಿಸುತ್ತಿದ್ದಾನೆ . ಆತನನ್ನು ಕನ್ನಡ ನಾಮಫಲಕ ಹಾಕು ಎಂದರೆ , ನಾನು ಹಾಕುವುದಿಲ್ಲ ಎಂದು ಅಸಡ್ಡೆಯಿಂದ ಮಾತನಾಡಿ , ಕಡೆಗೆ ಗೌಡರ ಒತ್ತಾಯ ಹೆಚ್ಚಾದಾಗ ತನ್ನ ಪ್ರಭಾವ ಬಳಸಿ ನಾರಾಯಣಗೌಡರ ಮೇಲೆಯೇ ಪೋಲಿಸ್ ಠಾಣೆಯಲ್ಲಿ ದೂರು ನೀಡುತ್ತಾನೆ .
ಇತ್ತೀಚಿನ ದಿನಗಳಲ್ಲಿ ಜಿಲ್ಲಾ ,ತಾಲ್ಲೂಕು , ಹೋಬಳಿ ಮಟ್ಟದ ವಾಣಿಜ್ಯ ವ್ಯವಹಾರಗಳಲ್ಲಿ ಉತ್ತರ ಭಾರತೀಯರು ಅಧಿಪತ್ಯ ಸಾಧಿಸುತ್ತಿದ್ದಾರೆ . ಇಲ್ಲಿ PVC ಪೈಪ್ , ದಿನಸಿ , ಕಬ್ಬಿಣ, ಸಿಮೆಂಟ್ ಎಲ್ಲದರಲ್ಲೂ ಇವರದೇ ಪಾರಮ್ಯ . ಅದರಲ್ಲೂ ಈ‌ ಹಿಂದೆ ಚಿನ್ನ-ಬೆಳ್ಳಿ ಅಂಗಡಿ ನಡೆಸುತ್ತಿದ್ದ ಚಿನ್ನ ಬೆಳ್ಳಿ ಆಚಾರಿಗಳನ್ನು ಹೇಳ‌ ಹೆಸರಿಲ್ಲದಂತೆ ನಾಶ‌ ಮಾಡಿ‌ ಆ ಜಾಗಕ್ಕೆ ಅವರು ಬಂದು ಕುಳಿತು , ಗಿರವಿ ಹೆಸರಿನಲ್ಲಿ ನಾಡಿನ‌ ಜನರನ್ನು ಜೀವ ಹಿಂಡುತ್ತಿದ್ದಾರೆ . ಈಗ ಅದೇ ಜಾಗದಿಂದ ಅಕ್ರಮವಾಗಿ ಸಂಪಾದಿಸಿದ ಹಣದಿಂದ ಮೂಲ ಬೆಲೆಗಿಂತ ಹೆಚ್ಚು ಹಣ ಕೊಟ್ಟು ಅಥವಾ ಜಾಗಗಳ ಮಾಲೀಕರನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ನಗರ/ಪಟ್ಟಣ/ಹೋಬಳಿಗಳ ವಾಣಿಜ್ಯ ಜಾಗಗಳನ್ನು ಖರೀದಿಸಿ ವಾಣಿಜ್ಯ ವಹಿವಾಟುಗಳನ್ನು ತಮ್ಮ ಕಪಿ ಮುಷ್ಟಿಗೆ ತೆಗೆದುಕೊಳ್ಳುತ್ತಿದ್ದಾರೆ .

ಮಂಡ್ಯದಂತ ಸಣ್ಣ ನಗರಗಳಲ್ಲು ಸಹ ಎಳನೀರು ಹಾಗೂ ಬೆಲ್ಲದ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಆವರಿಸಿಕೊಂಡಿದ್ದಾರೆ ಇದೇ ಉತ್ತರ ಭಾರತೀಯ ವ್ಯಾಪಾರಿಗಳು.ಕೇಳಿದರೆ ಸೇಠುಗಳು ಒಳ್ಳೆಯ ವ್ಯಾಪಾರಸ್ಥರು ಪ್ರಾಮಾಣಿಕರು ಎಂದೆಲ್ಲ ಕತೆ ಹೇಳಲಾಗುತ್ತದೆ.ವಾಸ್ತವ ಬೇರೆಯೆ ಇದೆ.ಅಖಿಲ ಭಾರತ ಮಟ್ಟದಲ್ಲಿ ಈ ಉತ್ತರ ಭಾರತೀಯರಿಗೆ ದೊಡ್ಡ ವ್ಯಾಪಾರಿ ನೆಟ್ವರ್ಕ್ ಗಳಿವೆ.ಅಖಿಲ ಭಾರತ ಮಟ್ಟದ ರಾಜಕೀಯ ಬೆಂಬಲವೂ ಇದೆ.ಇದೇ ಮಾರ್ವಾಡಿಗಳು ಬೆಲ್ಲ ಹಾಗೂ ಎಳನೀರು ಮಾರುಕಟ್ಟೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡರು ವಾರ್ಷಿಕ 25 ಸಾವಿರ ಕೋಟಿ ರೂಪಾಯಿ ವಹಿವಾಟಿನ ಹೈನೋದ್ಯಮವನ್ನು ವಶಪಡಿಸಿಕೊಳ್ಳಲು ಈವರೆಗೂ ಸಾಧ್ಯವಾಗಿಲ್ಲ.ಕಾರಣ ಅಲ್ಲಿ ನಂದಿನಿ ಎಂಬ ಸಹಕಾರಿ ಸಂಸ್ಥೆ ಇದೆ.ಇದೇ ಮಾದರಿಯಲ್ಲಿ ಎಳನೀರು ಬೆಲ್ಲಕ್ಕು ಸಹಕಾರಿ ಮಾರುಕಟ್ಟೆಯನ್ನು ಕಟ್ಟಬೇಕು.ಇದಕ್ಕೆ ರಾಜ್ಯ ಸರಕಾರದ ಬೆಂಬಲವೂ ಇರಬೇಕು.ಇಲ್ಲವೆ ಸ್ಥಳೀಯ ಕನ್ನಡಿಗರಿಗೆ ಪ್ರೋತ್ಸಾಹ ನೀಡಬೇಕು.
ಈ ಘಟನೆ ಸೂಕ್ಷ್ಮವಾಗಿ ಅವಲೋಕಿಸಿದರೆ ,
೧)ನಮ್ಮ ನಾಡಿನಲ್ಲಿ ಹೊರ ರಾಜ್ಯದವರು ಏರು ಗತಿಯಲ್ಲಿ ನಮ್ಮ ಭೂಮಿಯನ್ನು ಆವಾರಿಸಿಕೊಳ್ಳುತ್ತಿದ್ದಾರೆ .
೨) ನಮ್ಮ ನಾಡಿನ ಕಾರ್ಯಾಂಗ , ಶಾಸಕಾಂಗ ಮತ್ತು ರಾಜಕೀಯ ಪಕ್ಷಗಳ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ .
೩)ನಮ್ಮ ಆರ್ಥಿಕ ಶಕ್ತಿಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಿದ್ದಾರೆ .
೪)ನಾಡಿನ ನಾಡಿಮಿಡಿತವನ್ನು ತಮ್ಮ‌ ತೆಕ್ಕೆಗೆ ತೆಗೆದುಕೊಳ್ಳುತ್ತಿದ್ದಾರೆ .
ಅಂದರೆ ಇನ್ನು ‌ಕೆಲವೇ ವರ್ಷಗಳಲ್ಲಿ ಅವರು ಇಡೀ ನಮ್ಮ ರಾಜ್ಯ/ಭಾಷೆ/ ಬದುಕನ್ನು ಅಫೋಶನ ತೆಗೆದುಕೊಳ್ಳುವುದರಲ್ಲಿ ದೂರವಿಲ್ಲ .

ಅಂದರೆ ಈ ವಿದ್ಯಮಾನಗಳನ್ನು ಅವಲೋಕಿಸಿದರೆ ನಾವು ನಮ್ಮ ಬದುಕನ್ನೇ ಈಗಾಗಲೇ ಅವರ ತೆಕ್ಕೆ ಕೊಟ್ಟಂತೆ ಕಾಣುತ್ತಿದೆ .
ಹಾಗಾದರೆ ನಮ್ಮ ಮುಂದಿನ ಹಾದಿ ಏನಾಗಬೇಕು ? ಮತ್ತು ಹೇಗಿರಬೇಕು ?
ಉತ್ತರ ಭಾರತೀಯರು ರೈತರಿಗೆ ಅವಶ್ಯ ಇರುವ ಕೃಷಿ ಪರಿಕರಗಳ ಪ್ರಮುಖ ಉತ್ಪಾದಕ ಉದ್ದಿಮೆಗಳ ಮೇಲೆ ಪಾರಮ್ಯ ಸಾಧಿಸುತ್ತಿದ್ದಾರೆ . ಅದರಲ್ಲೂ PVC ಪೈಪ್ ಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಇವರ ಹಿಡಿತದಲ್ಲಿವೆ .ಮೊದಲೆಲ್ಲ ವ್ಯಾಪಾರ ವಹಿವಾಟಿಗಷ್ಟೆ ಸಿಮೀತವಾಗಿದ್ದ ಈ ಉತ್ತರ ಭಾರತೀಯರು ಈಗ ಕುಶಲಕರ್ಮಿಗಳನ್ನು ಅಲ್ಲಿಂದಲೆ ಇಲ್ಲಿಗೆ ಅಮದು ಮಾಡಿಕೊಳ್ಳುತ್ತಿದ್ದಾರೆ.ಪರಿಣಾಮ ಈ ತಳಮಟ್ಟದ ಕಾರ್ಮಿಕರು ಪ್ರತೀ ಖರೀದಿಗೆ ಈ ಉತ್ತರ ಭಾರತೀಯರ ಅಂಗಡಿಗಳಿಗೆ ಹೋಗುವಂತ ಅನಿವಾರ್ಯತೆಯನ್ನು ಕನ್ನಡಿಗರಿಗೆ ಸೃಷ್ಟಿಸುತ್ತಿದ್ದಾರೆ. ಚಿನ್ನ -ಬೆಳ್ಳಿ ಮಾರಾಟದಲ್ಲಿ ಇವರನ್ನು ಬಿಟ್ಟರೆ ನಮ್ಮವರನ್ನು ಹುಡುಕಿದರೂ ಸಿಗುವುದಿಲ್ಲ . ದಿನಸಿ ಪ್ರಧಾರ್ಥಗಳು ಹೋಲ್ ಸೇಲ್ ಮತ್ತು ಚಿಲ್ಲರೆ ಗಣನೀಯವಾಗಿ ಆವರಿಸಿಕೊಳ್ಳುತ್ತಿದ್ದಾರೆ .
ಹೊರ ರಾಜ್ಯದ ಉತ್ತರ ಭಾರತೀಯರು ಉದ್ದಿಮೆ ಉತ್ಪಾದಕ ವರ್ಗವು ಒಂದು ಉದ್ದಿಮೆಯಲ್ಲಿ ಪಾರಮ್ಯ ಸಾಧಿಸುತ್ತದೆಯೋ ಅದು ಕರ್ನಾಟಕ ದಲ್ಲಿರುವ ತನ್ನ ರಾಜ್ಯದ ಚಿಲ್ಲರೆ ವ್ಯಾಪಾರಿಗಳನ್ನು ಉಳಿಸಿಕೊಳ್ಳಲು ತನ್ನವರಲ್ಲವರಾದ ಕನ್ನಡಿಗ ಚಿಲ್ಲರೆ ವ್ಯಾಪಾರಿಗಳನ್ನು ತುಳಿಯಲು ಆದಷ್ಟು ಪ್ರಯತ್ನ ಮಾಡುತ್ತದೆ . ಅಂದರೆ ,100 ರೂಪಾಯಿಗೆ ಮಾರಾಟ ಮಾಡುವ ವಸ್ತುವನ್ನು ತನ್ನವರಿಗೆ 98 ರೂಪಾಯಿಗೆ ಮಾರಾಟ ಮಾಡಿದರೆ, ತನ್ನದವರಲ್ಲದವರಾದ ಕನ್ನಡಿಗ ಚಿಲ್ಲರೆ ವ್ಯಾಪಾರಿಗಳಿಗೆ 102 ರೂಪಾಯಿಗೆ ಮಾರಾಟ ಮಾಡುತ್ತಾನೆ . ಅಂದರೆ ತನ್ನರಿಂದ ಕಳೆದುಕೊಂಡ 2 ರೂಪಾಯಿಯನ್ನು ತನ್ನವರಲ್ಲ ದವರಿಂದ ವಸೂಲಿ ಮಾಡುತ್ತಾನೆ . ಇಲ್ಲಿ ಉತ್ಪಾದಕನ ಕಡೆಯವನು ಚಿಲ್ಲರೆ ಮಾರಾಟಗಾರ ಜನರಿಗೆ 100 ರೂಪಾಯಿಗೆ ಮಾರಾಟ ಮಾಡಿದರೆ , ಉತ್ಪಾದಕನ ಕಡೆಯಲ್ಲದವನಾದ ಕನ್ನಡಿಗ ಚಿಲ್ಲರೆ ವ್ಯಾಪಾರಿ 102 ರೂಪಾಯಿಗೆ ಜನರಿಗೆ ಮಾರಾಟ ಮಾಡಬೇಕಾಗುತ್ತದೆ . ಇಲ್ಲಿ ಸಹಜವಾಗಿಯೇ ಜನರು 100 ರೂಪಾಯಿಗೆ ಮಾರಾಟ ಮಾಡುವವನ ಕಡೆಗೆ ಹೋಗುತ್ತಾರೆ . ಇದರಿಂದ ನಿಧಾನವಾಗಿ 102 ರೂಪಾಯಿಗೆ ಮಾಡುವ ಕನ್ನಡಿಗ ಚಿಲ್ಲರೆ ವ್ಯಾಪಾರಿಯ ವ್ಯಾಪಾರ ಕಡಿಮೆಯಾಗಿ ಆ ಉದ್ದಿಮೆಯಿಂದ ಹೊರಗೆ ಬರುತ್ತಾನೆ . ನಂತರ ನಿಧಾನವಾಗಿ 100 ರೂಪಾಯಿಗೆ ಮಾರಾಟ ಮಾಡುತ್ತಿದ್ದ ಕರ್ನಾಟಕದಲ್ಲಿರುವ ಹೊರ ರಾಜ್ಯದ ಚಿಲ್ಲರೆ ವ್ಯಾಪಾರಿ 110 ರೂಪಾಯಿಗೆ ಮಾರಾಟ ಮಾಡುತ್ತಾನೆ . ಇಲ್ಲಿ ಒಂದು ಸ್ಥಳೀಯ ವ್ಯಾಪಾರಿ ವ್ಯಾಪಾರ ದಿಂದ ಹೊರಗೆ ಬಂದರೆ , 102 ರೂಪಾಯಿ ಕೊಡುತ್ತಿದ್ದ ಜನರು ಹೆಚ್ಚುವರಿಯಾಗಿ 10 ರೂಪಾಯಿ ಕೊಡಬೇಕಾಗುತ್ತದೆ . ಅಂದರೆ ಸ್ಥಳೀಯ ವ್ಯಾಪಾರಿ ಮತ್ತು ಜನರು ಹೊರಗಿನ ಉತ್ಪಾದಕ ಉದ್ದಿಮೆದಾರ ತನ್ನದಲ್ಲದ ತಪ್ಪಿಗೆ ಅನಿವಾರ್ಯವಾಗಿ ಹೊರಗಿನವರಿಗೆ ಹಣ ಕೊಡಬೇಕಾಗುತ್ತದೆ . ಇಲ್ಲಿ ಸ್ಥಳೀಯ ಉದ್ದಿಮೆದಾರನೂ ಸೋತ ಮತ್ತು ಜನರು ಜನರೂ ಸೋಲುತ್ತಾರೆ .
ಇಷ್ಟೆಲ್ಲಾ ಮಾಡಲು ಹೊರ ರಾಜ್ಯದ ಉತ್ಪಾದಕ ಉದ್ದಿಮೆದಾರ ತನ್ನವರಾದ ಸ್ಥಳೀಯ ವ್ಯಾಪಾರ ಮಾಡುವ ಚಿಲ್ಲರೆ ಮಾರಾಟಗಾರನಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ (ಬ್ಯಾಂಕ್ ಬಡ್ಡಿ ದರಗಿಂತಲೂ ಕಡಿಮೆ ) ಹಣ ಕೊಡುತ್ತಾನೆ . ಇದರಿಂದ ಆತ ಚಿಲ್ಲರೆ ಮಾರಾಟ ಮಾಡಲು ಸಹಾಯವಾಗುತ್ತದೆ . ಇದರಿಂದಾಗಿ ಆತನ ಉದ್ದಿಮೆಯು ಬೆಳೆಯುತ್ತದೆ .
ಇದಕ್ಕೆ ಪರಿಹಾರ ಎಂದರೆ , ಸ್ಥಳೀಯ ಬ್ಯಾಂಕ್‌ ವ್ಯವಸ್ಥೆಯನ್ನು ಬದಲಾಯಿಸಬೇಕಾದ ಅನಿವಾರ್ಯತೆ ಇದೆ . ಅಂದರೆ ಉದ್ದಿಮೆ ಸ್ಥಾಪಿಸುವ ಸ್ಥಳೀಯ ಕನ್ನಡಿಗರಿಗೆ ಅದರಲ್ಲೂ ರೈತರಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡುವ ಬ್ಯಾಂಕಿಂಗ್ ವ್ಯವಸ್ಥೆಯನ್ನು ರಾಜ್ಯ ಸರ್ಕಾರಗಳು ಸ್ಥಾಪಿಸುವ ಮಹತ್ತರ ಹೆಜ್ಜೆಯನ್ನು ಹಾಕಬೇಕಿದೆ . ಇದರಿಂದ ಉದ್ದಿಮೆಗಳು ಸ್ಥಳೀಯ ನಿಧಾನವಾಗಿ ಬೆಳೆಯುತ್ತದೆ .ಇದರ ಜತೆಗೆ , ಸ್ಥಳೀಯ ಬೆಳೆದಿರುವ ಉತ್ಪಾದಕ ಉದ್ದಿಮೆದಾರರು ಚಿಲ್ಲರೆ ಮಾರಾಟಗಾರರಿಗೆ ಹಣಕಾಸಿನ ಪ್ರೋತ್ಸಾಹ ನೀಡಿ ಬೆಳೆಸಬೇಕಾದ ಅವಶ್ಯಕತೆ ಇದೆ .
ಇದರ ಜತೆಗೆ ಸರ್ಕಾರಿ ಸ್ವಾಮ್ಯದ ವಾಣಿಜ್ಯ ಜಮೀನು , ಕಟ್ಟಡ ,ಮಳಿಗೆಗಳನ್ನು ಹರಾಜ ಪ್ರಕ್ರಿಯೆ ಮಾಡುವಾಗ ಕನ್ನಡಿಗರಿಗೆ ಅದರಲ್ಲೂ ಎರಡರಿಂದ ಮೂರು ತಲೆಮಾರು ಮತದಾನ ಚೀಟಿ ಇರುವ ಸ್ಥಳೀಯರಿಗೆ ಮಾತ್ರ ಭಾಗವಹಿಸಲು ಅವಕಾಶ ಮಾಡಿಕೊಡ ಬೇಕಾಗುತ್ತದೆ . ಇದರಿಂದ ನಿಧಾನವಾಗಿ ಸ್ಥಳೀಯ ಕನ್ನಡಿಗ ಉತ್ಪಾದಕ ಉದ್ದಿಮೆದಾರರು ಮತ್ತು ಚಿಲ್ಲರೆ ವ್ಯಾಪಾರಿಗಳು ಬೆಳೆಯುತ್ತಾರೆ . ಮತ್ತು ಉನ್ನತ ಸ್ಥಾನದಲ್ಲಿರು ಅಧಿಕಾರಿ ವರ್ಗಕ್ಕೆ ಸ್ಥಳೀಯ ಕನ್ನಡಿಗ ಅಧಿಕಾರಿಗಳನ್ನು ನೇಮಿಸಬೇಕು . ಇದರಿಂದಾಗಿ ಅವರು ಸಹಜವಾಗಿ ವ್ಯಾಪಾರ ವಹಿವಾಟಿನಲ್ಲಿ ಸ್ಥಳೀಯರಿಗೆ ಆದ್ಯತೆ ಕೊಡುತ್ತಾರೆ .
ಕೊನೆಯದಾಗಿ , ಕರ್ನಾಟಕ ಮತ್ತು ಕನ್ನಡದ ಆಸ್ಮಿತೆಗೆ ಕನ್ನಡಿಗರು ಒತ್ತು ನೀಡಿದಲ್ಲಿ ನಮ್ಮ ತನ ಉಳಿಸಿಕೊಳ್ಳಲು ಕಷ್ಟ ಆಗುವುದಿಲ್ಲ . ನಮ್ಮ ಜವಾಬ್ದಾರಿ ಮರೆತು ಹೀಗೆಯೇ ಮುಂದುವರೆದರೆ ನಾವೇ ಪರಕೀಯರಾಗುವುದರಲ್ಲಿ ಸಂಶಯ ಇಲ್ಲ
-ಮಾಕವಳ್ಳಿ ಕುಮಾರಸ್ವಾಮಿ

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles