ನೀವಿಲ್ಲಿ ನೋಡ್ತಾ ಇರುವ ನೀಲಿ ಮತ್ತು ಕೆಂಪು ಬಣ್ಣದ ಟ್ಯೂಬ್ ನಿಮ್ಮ ಮೈಗೆ ಹೀಗೆ ಇಂಜೆಕ್ಟ್ ಆಗೋದು ಡಯಾಲಿಸಿಸ್ ಮಾಡುವಾಗ. ದೇಹದಲ್ಲಿ ಹರಿಯುವ ರಕ್ತವನ್ನು ಮೊದಲು ಕೆಂಪು ಬಣ್ಣದ ಟ್ಯುಬಿನ ಮೂಲಕ ಡಯಾಲಿಸಿಸ್ ಯಂತ್ರಕ್ಕೆ ಕಳುಹಿಸಿ ಅಲ್ಲಿಂದ ಶುದ್ಧವಾಗಿ ಬರುವ ರಕ್ತವನ್ನು ನೀಲಿ ಬಣ್ಣದ ಟ್ಯುಬಿನ ಮೂಲಕ ಮತ್ತೆ ದೇಹದ ಒಳಗೆ ಬಿಡಲಾಗುತ್ತದೆ. ಈ ಇಡೀ ಪ್ರೊಸೀಜರ್ ನಾಲ್ಕು ಗಂಟೆ ತೆಗೆದುಕೊಳ್ಳುತ್ತದೆ ಅಂತಾ ಓದಿದೆ. ಈ ಇಡೀ ಪ್ರೊಸೀಜರ್ ಆಗುವಾಗ ವ್ಯಕ್ತಿ ಮಲಗಿದ್ದಲ್ಲೇ ಇರಬೇಕು! ಇದನ್ನು ವಾರದಲ್ಲಿ 3 ಸರ್ತಿ ಮಾಡಬೇಕು. ತಿಂಗಳಿಗೆ 12 ಸರ್ತಿ, ವರ್ಷಕ್ಕೆ 144 ಸರ್ತಿ.. ಅಲ್ಲಿಗೆ ವರ್ಷದ 576 ಗಂಟೆ ಅಥವಾ 24 ದಿನವನ್ನು ಆಸ್ಪತ್ರೆಯಲ್ಲಿಯೇ ಸಾಗಿಸಬೇಕು. ಆಲ್ಮೋಸ್ಟ್ ಒಂದು ತಿಂಗಳ ಬದುಕು ಅಲ್ಲಿಗೆ ವೇಸ್ಟ್ ಆಗುತ್ತೆ!
ಆದರೆ ಇದನ್ನೇ ನಿಮ್ಮ ಕಿಡ್ನಿ ದಿನಕ್ಕೆ 36 ಬಾರಿ ಯಾವ ತೊಂದರೆ, ಕಿರಿಕಿರಿ ಇಲ್ಲದೇ ಮಾಡಿಬಿಡುತ್ತದೆ! ಒಳ್ಳೆಯ ಆಹಾರ, ಇತಿಮಿತಿಯ ಮಧ್ಯ ಸೇವನೆ, ಒಂದು ಸ್ವಲ್ಪ ವ್ಯಾಯಾಮ ನಿಮ್ಮ ಕಿಡ್ನಿಗೆ ನೀವು ಕೊಡುವ ಕೃತಜ್ಞತೆ… ಇರುವುದನ್ನು ಮರೆಯದಿರಿ…
ಕಳೆದುಹೋಗುವ ಮುನ್ನ ಬದುಕನ್ನು ರಕ್ಷಿಸಿಕೊಳ್ಳಿ…