ಹಳೇ ಮೈಸೂರು, ನ.25: ಕರಾಟೆ ಫೆಡರೇಷನ್ ಆಫ್ ಶೋಟೋಕನ್ ಇಂಡಿಯಾ ವತಿಯಿಂದ ತೆಲಂಗಾಣ ರಾಜ್ಯದ ಹೈದರಾಬಾದ್ನಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಶ್ರೀರಂಗಪಟ್ಟಣದ ಜ್ಯೋತಿನಿವಾಸ್ ಶಾಲೆಯ ವಿದ್ಯಾರ್ಥಿಗಳು ಎದುರಾಳಿಗಳನ್ನು ಮಣಿಸಿ ಮೊದಲ ಸ್ಥಾನ ಗಿಟ್ಟಿಸುವ ಮೂಲಕ ಮಂಡ್ಯ ಜಿಲ್ಲೆಗೆ ಮತ್ತು ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಬಾಲಕ ಮತ್ತು ಬಾಲಕಿಯರ ಜೂನಿಯರ್ ವಿಭಾಗದಲ್ಲಿ ಶ್ರೀರಂಗಪಟ್ಟಣದ ಜ್ಯೋತಿನಿವಾಸ್ ಶಾಲೆಯ ವಿದ್ಯಾರ್ಥಿಗಳಾದ 4ನೇ ತರಗತಿಯ ಯದುವೀರ್ – ಪ್ರಥಮ, 5ನೇ ತರಗತಿಯ ಜಾನ್ವಿಕ- ದ್ವಿತೀಯ, 5ನೇ ತರಗತಿಯ ಬಾನ್ವಿ ಗಣೇಶ್ ಮತ್ತು ದೈವಿಕ್ ಗೌಡ – ತೃತೀಯ ಬಹುಮಾನ ಪಡೆದಿದ್ದಾರೆ. ಇವರ ಈ ಸಾಧನೆಗೆ ಜ್ಯೋತಿನಿವಾಸ್ ಶಾಲೆಯ ಪ್ರಾಂಶುಪಾಲರಾದ ಸಿಸ್ಟರ್ ಜೋಶಿ ಹಾಗೂ ಸಿಸ್ಟರ್ ಅನೆಸ್ ಬಹುಮಾನ ನೀಡಿ ಅಭಿನಂದಿಸಿದರು.
ಮಕ್ಕಳ ಈ ಸಾಧನೆಗೆ ಕಾರಣಕರ್ತರಾದ ಶಾಲೆಯ ಕರಾಟೆ ಶಿಕ್ಷಕರು ಹಾಗೂ ಮಾಸ್ಟರ್ ಮಾರ್ಷಲ್ ಆರ್ಟ್ಸ್ ಕರಾಟೆ ಸಂಸ್ಥೆಯ ಸಂಸ್ಥಾಪಕರಾದ ಕರಾಟೆ ಮಾಸ್ಟರ್ ಹೇಮಂತ್ ರವರನ್ನು ಶಾಲೆಯ ವತಿಯಿಂದ ಅಭಿನಂದಿಸಲಾಯಿತು.


