ಕೃಷ್ಣರಾಜ ಪೇಟೆ:ಎ.೨೦.ದೇವೇಗೌಡರು ಮತ್ತು ಕುಮಾರಸ್ವಾಮಿ ರವರು ಈ ತಾಲ್ಲೂಕಿಗೆ ಯಾವುದೇ ರೀತಿಯ ಕೊಡುಗೆ ಕೊಡಲಿಲ್ಲ . ಅದರಲ್ಲೂ ಮಂಡ್ಯ ಜಿಲ್ಲೆಗೆ ಯಾವುದೇ ರೀತಿಯ ಕೊಡುಗೆ ಕೊಟ್ಟಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿಯಾಡಿದರು.ಲೋಕಸಭಾ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಮೇಕೆದಾಟು ಯೋಜನೆಯ ಜಾರಿಗಾಗಿ ನಾವು ಹೋರಾಟ ಮಾಡುವಾಗ ಗೇಲಿ ಮಾಡಿದ ದೇವೇಗೌಡರು ಈಗ ಯೋಜನೆ ಆಗಬೇಕು ಎನ್ನುತ್ತಿದ್ದಾರೆ . ಇವರ ಮೈತ್ರಿ ಪಕ್ಷವಾದ ಬಿಜೆಪಿ ಕೇಂದ್ರದಲ್ಲಿದೆ ಅವರಿಂದ ಯೋಜನೆಗೆ ಅನುಮತಿ ಕೊಡಿಸಬಹುದಿತ್ತಲ್ಲವೇ ? ಎಂದು ಪ್ರಶ್ನಿಸಿದರು . ೨೦೦೪ರಲ್ಲಿ ಕೆ ಆರ್ ಪೇಟೆ ಕೃಷ್ಟರನ್ನು ಮಂತ್ರಿ ಮಾಡಲು ದೇವೆಗೌಡರು ಒಪ್ಪಲಿಲ್ಲ.ಕಡೆಗೆ ನಾವು ಸ್ಪೀಕರ್ ಮಾಡಲು ದೇವೆಗೌಡರನ್ನು ಒಪ್ಪಿಸಬೇಕಾಯಿತು ಎಂದರು.
ಮುಂದುವರಿದು ಅವರು ಮಾತನಾಡುತ್ತಾ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗುವ ಗೊರೂರು ಅಣೆಕಟ್ಟು ಕೊಡುಗೆ ನಮ್ಮದು .ಇದರ ಜತೆಗೆ ತಾಲ್ಲೂಕಿನ ನೀರಾವರಿ ಯೋಜನೆಗಳು ನಮ್ಮ ಕಾಂಗ್ರೆಸ್ ಕೊಡುಗೆಗಳು . ಮುಂದೆಯೂ ಕೂಡಾ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ನಮ್ಮ ಅಭ್ಯರ್ಥಿ ವೆಂಕಟ ರಮಣೇಗೌಡರಿಗೆ ಅತೀ ಹೆಚ್ಚು ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು .
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಏಕವಚನದಲ್ಲೆ ಮಾತನಾಡುತ್ತಾ ಮಂಡ್ಯ ಲೋಕಸಭಾ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ರವರನ್ನು ಉದ್ದೇಶಿಸಿ ರಾಮನಗರದ ಜನತೆ ನಿನ್ನ ಪತ್ನಿಯನ್ನು ಎಮ್ಮೆಲ್ಲೆ ನಿನ್ನ ಸಿಎಂ ನಿನ್ನ ತಂದೆಯನ್ನು ಪ್ರಧಾನಿ ಮಾಡಿದರು . ನೀನು ಇಲ್ಲಿಗೆ ಬಂದು ಖಾಲಿ ಚೆಂಬು ,ಟ್ರಂಕ್ ಅಲ್ಲಾಡಿಸಿಕೊಂಡು ಬುಡುಬುಡಿಕೆ ಆಡಿಸುತ್ತಿದ್ದೀಯಾ , ಈಗ ಅವರನ್ನು ಬಿಟ್ಟು ಇಲ್ಲಿಗೆ ಬಂದು ನಿಂತಿದ್ಧೀಯಲ್ಲ, ನಿನಗೆ ನಾಚಿಕೆ ಆಗುವುದಿಲ್ಲವೇ ? ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು . ಈ ಚುನಾವಣೆಯಲ್ಲಿ ಹಾಸನ , ಮಂಡ್ಯ , ಬೆಂಗಳೂರು ಗ್ರಾಮಾಂತರ ಮೂರು ಕಡೆ ನಿಮ್ಮ ಕುಟುಂಬದವರು ಸೋಲುತ್ತಾರೆ . ಅಲ್ಲಿಗೆ ನಿಮ್ಮ ಜೆಡಿಎಸ್ ಪಕ್ಷ ಕಥೆ ಮುಗಿದು ಬಿಜೆಪಿ ಜತೆ ವಿಲೀನ ಆಗುತ್ತದೆ ಎಂದು ವಾಗ್ದಾಳಿ ನಡೆಸಿದರು . ಮುಂದಿನ ದಿನಗಳಲ್ಲಿ ಮಂಡ್ಯದಲ್ಲಿ ಮತ್ತೊಂದು ಸುಸಜ್ಜಿತ ಸಕ್ಕರೆ ಕಾರ್ಖಾನೆ ಮಾಡುತ್ತೇವೆ ಎಂದು ಘೋಷಿಸಿದರು. ಇದೇ ಸಂಧರ್ಭದಲ್ಲಿ ವೇದಿಕೆ ಮೇಲೆ ಕುಳಿತಿದ್ದ ಸ್ಥಳೀಯ ನಾಯಕರುಗಳಿಗೆ ,ತಮಗೆ ವಹಿಸಿರುವ ಬೂತ್ ಗಳಲ್ಲಿ ಅತೀ ಹೆಚ್ಚು ಲೀಡ್ ತರದಿದ್ದರೆ ಇನ್ಯಾವತ್ತೂ ವೇದಿಕೆ ಮೇಲೆ ಆಗಲಿ , ನನ್ನ ಬಳಿಯಾಗಲಿ ಬರಬೇಡಿ . ಎಂದು ಎಚ್ಚರಿಕೆ ನೀಡಿದರು .
ಕೃಷಿ ಸಚಿವ ಚಲುವರಾಯಸ್ವಾಮಿ ಮಾತನಾಡಿ , ಕಾವೇರಿ ನದಿ ನೀರು ಹಂಚಿಕೆ ನಾವು ಬಗೆಹರಿಸುತ್ತೇವೆ ಎಂದು ಕುಮಾರಸ್ವಾಮಿ ಮತ್ತು ದೇವೇಗೌಡರು ಹೇಳುತ್ತಿದ್ದಾರೆ. ಆದರೆ ಕಾವೇರಿ ನದಿ ನೀರು ಹಂಚಿಕೆ ವಿಷಯವು ಈಗಾಗಲೇ ಕಾವೇರಿ ಟ್ರಿಬ್ಯುನಲ್ ವ್ಯಾಪ್ತಿಯಲ್ಲಿದೆ .ಅದನ್ನು ಯಾರೂ ಏನೂ ಮಾಡುವುದಕ್ಕೆ ಆಗುವುದಿಲ್ಲ . ಅವರಿಗೆ ಶಕ್ತಿ ಇದ್ದರೆ , ಮೇಕೆದಾಟು ಯೋಜನೆಗೆ ಕೇಂದ್ರದಿಂದ ಅನುಮತಿ ಕೊಡಿಸಲಿ ಎಂದರು .
ಸಭೆಯಲ್ಲಿ ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ, ಮಂಡ್ಯ ಶಾಸಕ ಗಣಿಗ ರವಿ , ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಾಜಿ ಶಾಸಕರುಗಳಾದ ಬೊಮ್ಮೇನಹಳ್ಳಿ ಪ್ರಕಾಶ್ , ಕೆ.ಬಿ.ಚಂದ್ರ ಶೇಖರ್ , ತಾಲ್ಲೂಕು ಅಧ್ಯಕ್ಷ ಹರಳಹಳ್ಳಿ ವಿಶ್ವನಾಥ್ ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು