ಕಳ್ಳತನಕ್ಕೆ ಬಂದ ಕಳ್ಳ ಜನರ ಸದ್ದಿಗೆ ಬೆದರಿ ಪರಾರಿ
ಮೇ೨೫. ರಾತ್ರಿ ಸುಮಾರು 10 ಗಂಟೆಯಲ್ಲಿ ಕೆ.ಆರ್.ಪೇಟೆ ಪಟ್ಟಣದಲ್ಲಿ ಜಲ ಜೀವನ್ ಮಿಷನ್ ಪೈಪ್ ಅಳವಡಿಸಲು ಬಂದಿರುವ ಕೂಲಿ ಕಾರ್ಮಿಕರು ಹೇಮಗಿರಿ ರಸ್ತೆಯಲ್ಲಿನ ಮುತ್ತುರಾಯಸ್ವಾಮಿ ಬಡಾವಣೆ ಬಳಿ ತಾತ್ಕಲಿಕವಾಗಿ ಹಾಕಿಕೊಂಡಿರುವ ಶೆಡ್ ಗೆ ನುಗ್ಗಿ ಕಳ್ಳತನ ನಡೆಸಲು ಬಂದಿದ್ದ ಕಳ್ಳ ಜನರ ಸದ್ದಿಗೆ ಬೆದರಿ ಪರಾರಿಯಾದ ಘಟನೆ ಶನಿವಾರ ರಾತ್ರಿ ಜರುಗಿದೆ.
ಜಲಜೀವನ್ ಮಿಷನ್ ಯೋಜನೆಯಡಿ ಕೂಲಿ ಕೆಲಸ ಮಾಡಲು ಬಂದಿರುವ ಕಾರ್ಮಿಕರ ಶೆಡ್ ಗಳಿಗೆ ನುಗ್ಗಿದ ಕಳ್ಳ.ಮಲಗಿದ್ದ ಮಹಿಳೆಯರ ಕಿವಿಯೋಲೆ ಬಿಚ್ಚಿ, ಸರ ಕದಿಯುವಷ್ಟರಲ್ಲಿ ಮಹಿಳೆಗೆ ಎಚ್ಚರವಾಗಿ ಕೂಗಿಕೊಂಡಿದ್ದಾಳೆ.ಆಗ ಉಳಿದ ಶೆಡ್ ನಲ್ಲಿದ್ದ ಸಹ ಕಾರ್ಮಿಕರು ಮತ್ತು ಆ ಬಡಾವಣೆಯ ಜನರು ಮಹಿಳೆಯ ಸದ್ದು ಕೇಳಿ ಓಡಿ ಬಂದಿದ್ದಾರೆ.ಆಗ ಆ ಕಳ್ಳ ಕಳ್ಳತನ ಮಾಡಲು ತಾನು ತಂದಿದ್ದ ಬೈಕನ್ನು ಬಿಟ್ಟು ಪೇರಿಯಾಗಿದ್ದಾನೆ. ನಂತರ ಸ್ಥಳೀಯರು ಪೋಲಿಸ್ ಸಹಾಯವಾಣಿಗೆ ಫೋನ್ ಮಾಡಿದ ನಂತರ ಸ್ಥಳಕ್ಕೆ ಬಂದ ಪೋಲೀಸರು ಕಾರ್ಮಿಕರ ಬಳಿ ಮಾಹಿತಿ ಪಡೆದುಕೊಂಡು ಕಳ್ಳ ತಂದಿದ್ದ ಬೈಕ್ ವಶಪಡಿಸಿಕೊಂಡರು .
ಕೆ.ಆರ್.ಪೇಟೆ ಪಟ್ಟಣದಲ್ಲಿ ಇತ್ತೀಚೆಗೆ ಮೊಬೈಲ್ ಕಳ್ಳತನ , ಸರಗಳ್ಳತನ ವಿಪರೀತ ಹೆಚ್ಚುತ್ತಿದ್ದು ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ವರಿಷ್ಠಾಧಿಕಾರಿಗಳು ನಿನ್ನೆ ಪಟ್ಟಣದ ಸರಕಾರಿ ಬಸ್ ನಿಲ್ದಾಣ ಸೇರಿದಂತೆ ಹಲವು ಭಾಗದಲ್ಲಿ ಪರೀಶೀಲನೆ ನಡೆಸಿದರು . ವಿಪರ್ಯಾಸವೆಂದರೆ ಅದೇ ದಿನ ಪಟ್ಟಣದಲ್ಲಿ ಕಾರ್ಮಿಕರ ಶೆಡ್ ಗೆ ನುಗ್ಗಿ ಮಹಿಳೆಯರನ್ನು ದೋಚಲು ಪ್ರಯತ್ನಿಸಿರುವುದು ಕೆ.ಆರ್.ಪೇಟೆ ಪಟ್ಟಣ ಪೋಲೀಸರಿಗೆ ಕಳ್ಳರು ಸವಾಲು ಎಸೆದಂತಿದೆ