ವರದಿ:ಕೃಷ್ಣರಾಜಪೇಟೆ ಕುಮಾರಸ್ವಾಮಿ
ಕೃಷ್ಣರಾಜ ಪೇಟೆ:ಎ.೨.ಜೆಡಿಎಸ್-ಬಿಜೆಪಿ ಮೈತ್ರಿಯಾದರೆ ನಮ್ಮನ್ನು ಮೂಲೆ ಗುಂಪು ಮಾಡುತ್ತಾರೆ ಎಂಬ ಅನುಮಾನ ನಮ್ಮ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಪರಿಭಾವಿಸಬಾರದು ಎಂದು ಬಿಜೆಪಿ ಮುಖಂಡ ಕೆ.ಸಿ ನಾರಾಯಣ ಗೌಡ ತಮ್ಮ ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರಿಗೆ ಭರವಸೆ ನೀಡಿದರು
ಇಂದು ಕೃಷ್ಣರಾಜ ಪೇಟೆಯ ಬಿಜೆಪಿ ಸಭಾಂಗಣದಲ್ಲಿ ಸಭೆಯಲ್ಲಿ ಮಾತನಾಡಿ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ರವರನ್ನು ಗೆಲ್ಲಿಸಿದರೆ ಜೆಡಿಎಸ್ ಪಕ್ಷದವರಿಗಿಂತ ಬಿಜೆಪಿಗೆ ಹೆಚ್ಚಿನ ಶ್ರೇಯಸ್ಸು ಬರುತ್ತದೆ ಇದರಿಂದ ಕೇಂದ್ರದಲ್ಲಿ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಆಗುತ್ತಾರೆ ಎಂದರು .
ಕೆಲವು ದಿನಗಳ ಹಿಂದೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಕುಮಾರಸ್ವಾಮಿ ರವರು ಅನಿರೀಕ್ಷಿತವಾಗಿ ನನ್ನ ಮನೆಯಲ್ಲಿ ಭೇಟಿಯಾಗಿ ಬೆಂಬಲ ಕೋರಿದರು . ನಾನು ನನ್ನ ಬೆಂಬಲಿಗರ ಜತೆ ಮಾತನಾಡಿ ಮುಂದಿನ ನಿರ್ಧಾರ ತಿಳಿಸುತ್ತೇನೆ ಎಂದೆ. ಅದಕ್ಕೆ ಅವರು ನಿಮ್ಮ ಜತೆಯಲ್ಲಿ ಇರುವವರು ಬಹುತೇಕ ನಮ್ಮ ಪಕ್ಷದಲ್ಲೇ ಇದ್ದವರು . ನಾನೇ ಅವರಲ್ಲಿ ಮಾತನಾಡುತ್ತೇನೆ ಎಂದು ಎಲ್ಲರಿಗೂ ಫೋನ್ ಮುಖಾಂತರ ಮಾತನಾಡಿದರು . ನಂತರ ನಾನು ಈ ಹಿಂದೆ ಪೌರ ಸಚಿವ ನಾಗಿದ್ದಾಗ ಮಂಡ್ಯ ಜಿಲ್ಲೆಯನ್ನು ಸ್ಮಾರ್ಟ್ ಸಿಟಿ ಮಾಡಬೇಕೆಂದು ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರದಿಂದ ಅನುಮತಿ ಕೋರಿದೆ . ಆದರೆ ಆಗ ಮಂಡ್ಯ ಜಿಲ್ಲೆ ಜನಸಂಖ್ಯೆ ಕಡಿಮೆ ಇತ್ತು . ಈಗ ಸುಮಾರು 19 ಲಕ್ಷ ಇದೆ . ನೀವು ಸಂಸದರಾದ ಮೇಲೆ ಇದರ ಬಗ್ಗೆ ಗಮನ ಹರಿಸ ಬೇಕು ಎಂದೆ ಇದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಮುಂದುವರಿದು ಈ ನಡುವೆ ಕೆ.ಆರ್.ಪೇಟೆ , ನಾಗಮಂಗಲ , ಪಾಂಡವಪುರ ತಾಲ್ಲೂಕಿಗಳಿಗೆ ಗೊರೂರು ಡ್ಯಾಂ ನಿಂದ ಹನಿ ನೀರನ್ನೂ ಬಿಡುತ್ತಿಲ್ಲ . ಆದರೆ ತುಮಕೂರಿಗೆ ನಿರಂತರವಾಗಿ ನೀರನ್ನು ಬಿಡುತ್ತಿದ್ದಾರೆ . ನಮಗೂ ಇದೇ ರೀತಿಯಲ್ಲಿ ನೀರನ್ನು ಬಿಡದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ಘಟಕ ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡಲಿದೆ ಎಂದರು .
ಸಭೆಯಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಚೋಕನಹಳ್ಳಿ ಪ್ರಕಾಶ್ , ಮೂಡಾ ಮಾಜಿ ಅಧ್ಯಕ್ಷ ವಾಸು , ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ವಿ.ಡಿ.ಹರೀಶ್ , ಬೂಕನಕೆರೆ ಜವರೇಗೌಡ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು .