*ಸರಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿ ಎಸ್ ಎಸ್ ಎಲ್ ಸಿಯಲ್ಲಿ ಡಿಸ್ಟಿಂಕ್ಷನ್ ಪಡೆದ ಕೃಷ್ಣರಾಜ ಪೇಟೆ ಪುನೀತ್
ಕೆ.ಆರ್.ಪೇಟೆ:ಮೇ.೯.ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಮಾಕವಳ್ಳಿ ಪುನೀತ್ ಎಂ.ಆರ್ 625 ಅಂಕಗಳಿಗೆ 589 ಪಡೆದುಕೊಳ್ಳುವ ಮೂಲಕ ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ*
ತಾಲೂಕಿನ ಕಸಬಾ ಹೋಬಳಿಯ ಮಾಕವಳ್ಳಿ ಗ್ರಾಮ ಮುಖಂಡ ರಾಜೇಗೌಡ ಮತ್ತು ಇಂದ್ರಮ್ಮ ಅವರ ಪುತ್ರ ಪುನೀತ್ ಎಂ.ಆರ್ ಮಾಕವಳ್ಳಿ ಸರ್ಕಾರಿ ಪ್ರೌಢಶಾಲೆಯ ಕನ್ನಡ ಮಾಧ್ಯಮದಲ್ಲೇ ವ್ಯಾಸಂಗ ಮಾಡುತ್ತಿದ್ದು 2023-24ನೇ ಸಾಲಿನ ಎಸ್.ಎಸ್.ಎಲ್. ಸಿ ಪರೀಕ್ಷೆಯಲ್ಲಿ ಕನ್ನಡ 124, ಇಂಗ್ಲೀಷ್ 98, ಹಿಂದಿ 99, ಗಣಿತ 83, ವಿಜ್ಞಾನ 87, ಸಮಾಜ 98. ಒಟ್ಟು 650 ಕ್ಕೆ 589 ಅಂಕಗಳನ್ನು ಪಡೆದುಕೊಂಡು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ.
ರೈತ ಕುಟುಂಬದಲ್ಲಿ ಜನಸಿ ವ್ಯಾಸಂಗದ ಜೊತೆಗೆ ಕೃಷಿ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳುತ್ತಿದ್ದ ಪುನೀತ್ ಎಂ.ಆರ್ ಡಿಸ್ಟಿಂಕ್ಷನ್ ಪಡೆದುಕೊಂಡ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಕರು ಮತ್ತು ಗ್ರಾಮಸ್ಥರು ಅಭಿನಂದಿಸಿದ್ದಾರೆ.