Wednesday, November 6, 2024
spot_img

ನಾಗಮಂಗಲ ಆಸ್ಪತ್ರೆಯ ರೋಗಿಗಳ ಊಟದಲ್ಲು ಲೂಟಿಗಿಳಿದ ಅಧಿಕಾರಿಗಳು ಗುತ್ತಿಗೆದಾರರು

ನಾಗಮಂಗಲ:ರೋಗಿಗಳ ಊಟದಲ್ಲು ಲೂಟಿಗಿಳಿದ ಗುತ್ತಿಗೆದಾರರು

ಸರಕಾರಿ ಆಸ್ಪತ್ರೆಗಳಿಗೆ ದಾಖಲಾಗುವ ಸಾರ್ವಜನಿಕರಿಗಾಗಿ ಸರಕಾರ ಊಟದ ವ್ಯವಸ್ಥೆ ಮಾಡಿದೆ.ರೋಗಿಗಳಿಗೆ ಪೌಷ್ಟಿಕ ಹಾಗೂ ಗುಣಮಟ್ಟದ ಆಹಾರ ಒದಗಿಸಲು ಸರಕಾರ ಮಾಡಿರುವ ಈ ವ್ಯವಸ್ಥೆಯಲೂ ತಾಲೋಕು ಸರಕಾರಿ ಆಸ್ಪತ್ರೆಯ ಅಧಿಕಾರಿಗಳು ಗುತ್ತಿಗೆದಾರರು ಜಂಟಿ ಹಗಲು ದರೋಡೆಗಿಳಿದಿರುವುದು ನಾಗಮಂಗಲ ತಾಲೋಕು ಆಸ್ಪತ್ರೆಯಲ್ಲಿ ಕಂಡುಬಂದಿದೆ.
ಕಳೆದ ೨೦೨೨ ರ ಸಾಲಿನಲ್ಲಿ ಇಲ್ಲಿನ ಒಳರೋಗಿಗಳಿಗೆ ಸಿದ್ದ ಪಡಿಸಿದ ಆಹಾರ ಪೂರೈಸಲು ತಿಪಟೂರು ಮೂಲದ ತೇಜಸ್ ಎಂಟರ್ಪ್ರೈಸಸ್ ಎಂಬ ಸಂಸ್ಥೆ ಗುತ್ತಿಗೆ ಪಡೆಯುತ್ತದೆ.
ದಿನವೊಂದಕ್ಕೆ ಪ್ರತಿ ಒಳರೋಗಿಗೆ ಅನ್ನ ಸಾಂಬಾರು ಕೋಳಿಮೊಟ್ಟೆ ಬಾಳೆಹಣ್ಣು ಕಾಫೀಗೆ ಈ ಸಂಸ್ಥೆ ನಮೂದಿಸಿರುವ ದರ ಬರೋಬ್ಬರಿ ೨೩೯ರೂಗಳು.ಇದು ನಾಗಮಂಗಲ ಇರಲಿ ಮಂಡ್ಯ ನಗರದ ಜಿಲ್ಲಾ ಕೇಂದ್ರದ ಪ್ರತಿಷ್ಟಿತ ಹೋಟೆಲ್ ಗಳಲ್ಲು ಇಷ್ಟೊಂದು ದುಬಾರಿ ದರವಿಲ್ಲ.

ಸಾಮಾನ್ಯವಾಗಿ ಪ್ರತಿನಿತ್ಯ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಆಹಾರ ಪೂರೈಕೆಯ ಇಂಡೆಂಟ್ ಸಿದ್ದಪಡಿಸಲಾಗುತ್ತಾದರೂ ನೀಡಿದ ಇಂಡೆಂಟಿಗೂ ಆಸ್ಪತ್ರೆಯಲ್ಲಿ ಮಂಜೂರಾಗುವ ಬಿಲ್ಲಿಗೂ ಅಜಗಜಾಂತರವಿದೆ.

ಇನ್ನು ಇಂತಿಷ್ಟೆ ಗುಣಮಟ್ಟದ ಅಕ್ಕೀ ತರಕಾರಿ ಮೊಟ್ಟೆಯನ್ನು ನೀಡಬೇಕೆಂಬ ಷರತ್ತು ಇದ್ದರೂ ಕಳಪೆ ಅಕ್ಕಿ ಹಾಗೂ ಮಾರುಕಟ್ಟೆಯಲ್ಲಿ ತಿರಸ್ಕೃತಗೊಂಡ ಮೊಟ್ಟೆಯನ್ನು ಪೂರೈಸಲಾಗುತ್ತಿದೆ.ಇನ್ನು ಸರಕಾರದ ವೆಚ್ಚದಲ್ಲಿ ಆಹಾರ ಪೂರೈಕೆ ನಡೆಯುತ್ತಿದ್ದರು ಈ ಕುರಿತು ಯಾವುದೆ ಫಲಕವನ್ನು ಆಸ್ಪತ್ರೆಯಲ್ಲಿ ಅಳವಡಿಸಿಲ್ಲ.ಈ ಕುರಿತು ಸಾಕಷ್ಟು ದೂರುಗಳು ಜಿಲ್ಲಾಧಿಕಾರಿ ಕಚೇರಿಗೆ ಸ್ವೀಕೃತವಾದ ಪರಿಣಾಮ ಧಿಡೀರನೆ ಭೇಟಿ ನೀಡಿದ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಸಿದ್ದಪಡಿಸಿದ ಆಹಾರಕ್ಕಾಗಿ ಗುತ್ತಿಗೆ ಏಜೆನ್ಸಿಗೆ ನೀಡುತ್ತಿರುವ ದರವನ್ನು ನೋಡಿ ಹೌಹಾರಿದರು.ಕಡೆಗೆ ಈ ಸಂಬಂದ ಒಂದು ವರದಿ ಸಲ್ಲಿಸುವಂತೆ ತಹಶೀಲ್ದಾರರಿಗೆ ಸೂಚಿಸಿದರು ಯಾವುದೆ ವರದಿ ಈವರೆಗೂ ಸಲ್ಲಿಕೆಯಾಗಿಲ್ಲ.

ಸದರಿ ಏಜೆನ್ಸಿಗೆ ನೀಡಿರುವ ಟೆಂಡರ್ ಅವಧಿ ಮುಗಿದು ಎರಡು ವರ್ಷ ಕಳೆದರೂ ಈವರೆಗೂ ಟೆಂಡರ್ ನಡೆಸುವ ಗೋಜಿಗೆ ಆಸ್ಪತ್ರೆಯ ಅಧಿಕಾರಿಗಳು ಮುಂದಾಗಿಲ್ಲ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಅಧಿಕಾರಿಗಳು ಸಹ ಈ ಹಗರಣದಲ್ಲಿ ಭಾಗೀಯಾಗಿದ್ದು ಸಿದ್ದಪಡಿಸಿದ ಆಹಾರ ಪೂರೈಕೆ ಸಂಬಂದ ನೂತನ ನಿಯಮಾವಳಿ ರೂಪಿಸುವ ತನಕ ಹಳೇಯ ಏಜೆನ್ಸಿಗಳನ್ನು ಮುಂದುವರಿಸುವಂತೆ ಆದೇಶಿಸಿ ಈ ಧಂದೆಗೆ ಹಸಿರು ನಿಶಾನೆ ತೋರಿದ್ದಾರೆ.ಸ್ವತಃ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಕ್ಷೇತ್ರದ ತಾಲ್ಲೂಕು ಆಸ್ಪತ್ರೆಯಲ್ಲಿ ರೋಗಿಗಳ ಹೆಸರಿನಲ್ಲಿ ಧಂಧೆ ನಿರಾತಂಕವಾಗಿ ಸಾಗಿದ್ದು ಜಿಲ್ಲೆಯ ಉಳಿದ ತಾಲೋಕು ಆಸ್ಪತ್ರೆಗಳಲ್ಲು ಇದೆ ಸ್ಥಿತಿ ಮುಂದುವರಿದಿದ್ದು.ಜಿಲ್ಲಾಧಿಕಾರಿಗಳು ಕ್ರಮವಹಿಸಬೇಕಿದೆ.ಸಾಮಾನ್ಯವಾಗಿ ಗ್ರಾಮಾಂತರ ಪ್ರದೇಶದ ರೋಗಿಗಳ ಪೈಕಿ ಶೇ೮೦ರಷ್ಟು ಮಂದಿ ಮನೆಯಿಂದಲೇ ಆಹಾರ ತರುತ್ತಿದ್ದು ಆದಾಗಿಯೂ ಅವರ ಹೆಸರಿನಲ್ಲು ಇಂಡೆಂಟ್ ಸಿದ್ದಪಡಿಸಿ ಬಿಲ್ ಮಾಡಲಾಗುತ್ತಿದೆ.

ಪ್ರತಿ ರೋಗಿಗೆ ಆಧಾರ್ ಆಧಾರಿತ ಹಾಜರಾತಿ ಪಡೆಯುವುದರಿಂದ ಈ ಧಂದೆಗೆ ಕಡಿವಾಣ ಹಾಕಲು ಸಾಧ್ಯವಿದೆ.ಇನ್ನಾದರೂ ಆರೋಗ್ಯ ಸಚಿವರು ಎಚ್ಚೆತ್ತುಕೊಳ್ಳುವರೆ ಕಾದು ನೋಡೋಣಾ

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!