Sunday, July 14, 2024
spot_img

ದಕ್ಷಿಣ ಶಿಕ್ಷಕರ ಕ್ಷೇತ್ರ ಶೇ ೯೩ ರಷ್ಟು ಮತ ಚಲಾವಣೆ

 

ಪಾಂಡವಪುರ : ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳನ್ನು ಒಳಗೊಂಡಿರುವ ಕರ್ನಾಟಕ ವಿಧಾನಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ತಾಲೂಕಿನಲ್ಲಿ ಬಿರುಸಿನ ಮತದಾನ ನಡೆದಿದ್ದು, ಶೇ.93ರಷ್ಟು ಮತದಾನ ಚಲಾವಣೆಯಾಗಿದೆ.

ಪಟ್ಟಣದ ತಾಲೂಕು ಆಡಳಿತ ಸೌಧದ ಎರಡನೇ ಕೊಠಡಿಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಯಲ್ಲಿ ಬೆಳಗ್ಗೆ ಮತದಾನ ಆರಂಭವಾಗಿ, ಸುಶಿಕ್ಷಿತ ಸಮುದಾಯ ಎಂದೇ ಹೆಸರಾಗಿರುವ ಶಿಕ್ಷಕರ ವರ್ಗದವರು ಮತ ಹಕ್ಕು ಚಲಾಯಿಸಿದರು.

ಮತದಾನ ಆರಂಭದ ಸಂದರ್ಭದಲ್ಲಿ ಮತದಾರರ ಸಂಖ್ಯೆ ವಿರಳವಾಗಿತ್ತು. ಸ್ವಲ್ಪ ಹೊತ್ತು ಕಳೆದ ನಂತರ ಮತಗಟ್ಟೆಯತ್ತ ಮತದಾರರು ಆಗಮಿಸಿದರು. ಮಧ್ಯಾಹ್ನ 12 ರ ವೇಳೆಗೆ ತಾಲೂಕಿನಲ್ಲಿ 260 ಪುರುಷ ಹಾಗೂ 186 ಮಹಿಳೆಯರು ಸೇರಿ ಒಟ್ಟು
446 ಮತದಾರರ ಪೈಕಿ 141 ಪುರುಷ ಹಾಗೂ 81 ಮಹಿಳಾ ಮತದಾರರು ಸೇರಿ
221 ಮತದಾರರು ಹಕ್ಕು ಚಲಾಯಿಸಿ ಶೇ.55ರಷ್ಟು
ಮತದಾನ ನಡೆದಿದೆ.

ಮಧ್ಯಾಹ್ನ 2ಕ್ಕೆ 196 ಪುರುಷ, 127 ಮಹಿಳೆಯರು ಸೇರಿ 323 ಮತಗಳಾಗಿದ್ದು ಶೇ.72.42ರಷ್ಟು ಚಲಾವಣೆಯಾದರೆ, ಅಂತಿಮವಾಗಿ ಸಂಜೆ 4ಕ್ಕೆ 251ಪುರುಷ, 164 ಮಹಿಳೆಯರು ಸೇರಿ ಒಟ್ಟು 415 ಮತಗಳು ಚಲಾವಣೆಯಾಗಿ ಶೇ.93ರಷ್ಟು ಮತದಾನವಾಗಿತ್ತು.

ಮತಗಟ್ಟೆಯ ಹೊರಭಾಗದಲ್ಲಿ ತಮ್ಮ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು ಹಾಗೂ ಶಿಕ್ಷಕರನೇಕರು ಬಿರುಸಿನ ಮತ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು ಕಂಡು ಬಂದಿತು.

ತಾಲೂಕು ಕೇಂದ್ರವಾದ ಪಾಂಡವಪುರ ತಾಲೂಕು ಆಡಳಿತ ಸೌಧದಲ್ಲಿ ಕಚೇರಿಯಲ್ಲಿ ತೆರೆದಿದ್ದ ಒಂದೇ ಮತಗಟ್ಟೆಯಲ್ಲಿ
ಪ್ರೌಢಶಾಲೆಗಳ ಶಿಕ್ಷಕರು, ಪಿಯು ಹಾಗೂ ಪದವಿ ಕಾಲೇಜುಗಳ ಉಪನ್ಯಾಸಕರು, ಪ್ರಾಧ್ಯಾಪಕರು, ವಿಶ್ವವಿದ್ಯಾಲಯಗಳ ಬೋಧಕರು ತಮ ಪ್ರಾಶಸ್ತ್ರದ ಮತವನ್ನು ಚಲಾಯಿಸುತ್ತಿದ್ದ ಸನ್ನಿವೇಶ ಸಾಮಾನ್ಯವಾಗಿತ್ತು. ಯಾವುದೇ ವಿಧಾನಸಭೆ, ಲೋಕಸಭೆ ಚುನಾವಣೆಗೂ ಕಡಿಮೆಯಿಲ್ಲದಂತೆ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ನಡೆಯಿತು. ಯಾವುದೇ ಅಹಿತಕರ ಘಟನೆ ನಡೆಯದೆ ಸುಗಮವಾಗಿ ಮತದಾನ ನಡೆಯಿತು. ಸುಶಿಕ್ಷಿತ ಮತದಾರರು ಮತಗಟ್ಟೆಗಳ ಎದುರು ಸರದಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸುವ ಮೂಲಕ ಮತದ ಮಹತ್ವ ಸಾರಿದ್ದಾರೆ.

ಶಿಕ್ಷಕರ, ರೃತರ ಪರ ಧ್ವನಿ ಎತ್ತುವ ಮರಿತಿಬ್ಬೇಗೌಡರ ಆಯ್ಕೆ ಮಾಡಿ: ಶಾಸಕ ದಿನೇಶ್ ಗೂಳಿಗೌಡ ಮನವಿ : ಕರ್ನಾಟಕ ವಿಧಾನ ಪರಿಷತ್ ತನ್ನದೇ ಆದ ಇತಿಹಾಸವನ್ನು ಹೊಂದಿದೆ. 75 ಸದಸ್ಯರನ್ನು ವಿವಿಧ ಕ್ಷೇತ್ರಗಳಿಂದ ಆಯ್ಕೆ ಮಾಡಿ ಅಲ್ಲಿಂದ ಕಳುಹಿಸಿ ಕೊಡಲಾಗುತ್ತದೆ. ವಿಧಾನ ಪರಿಷತ್ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮರಿತಿಬ್ಬೇಗೌಡರು ಸ್ಪರ್ಧಿಸಿದ್ದಾರೆ. ಇವರನ್ನು ಕಳೆದ 24 ವರ್ಷಗಳಿಂದ ನಾನು ಸದನದ ಒಳಗೆ ಹಾಗೂ ಹೊರಗೆ ಎಲ್ಲ ಕ್ಷೇತ್ರಗಳ ಶಿಕ್ಷಕರ, ರೈತರ ಹಾಗೂ ಧ್ವನಿ ಇಲ್ಲದವರ ಪರವಾಗಿ ನಿರಂತರವಾಗಿ ಹೋರಾಟವನ್ನು ಮಾಡಿಕೊಂಡು ಬಂದಿದ್ದಾರೆ. ಹೀಗಾಗಿ ಅವರನ್ನು ಮೇಲ್ಮನೆಗೆ ಆಯ್ಕೆ ಮಾಡಿ ಕಳುಹಿಸಬೇಕು
ಎಂದು ಶಾಸಕ ದಿನೇಶ್ ಗೂಳಿಗೌಡ ಹೇಳಿದರು.

ಪಟ್ಟಣದಲ್ಲಿ ಸುದ್ದಿರರೊಂದಿಗೆ ಮಾತನಾಡಿದ ಅವರು, ರೈತರ ಪರವಾಗಿ ಮರಿತಿಬ್ಬೇಗೌಡರು ನಿರಂತರವಾಗಿ ಧ್ವನಿ ಎತ್ತಿದ್ದಾರೆ. ಇದೆಲ್ಲದರ ಜೊತೆಗೆ ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣ, ಪದವಿ ಪೂರ್ವ ಹಾಗೂ ಪದವಿ ಶಿಕ್ಷಣವೇ ಇರಬಹುದು, ವೈದ್ಯಕೀಯ ಶಿಕ್ಷಣ ಇರಬಹುದು, ತಾಂತ್ರಿಕ ಶಿಕ್ಷಣ ಇರಬಹುದು, ಪಾಲಿಟೆಕ್ನಿಕ್’ಗೆ ಸಂಬಂಧಪಟ್ಟಂತೆ ಇರಬಹುದು, ವಿವಿ ಪ್ರಾಧ್ಯಾಪಕರ ಸಮಸ್ಯೆ ಈ ರೀತಿಯ ಯಾವುದೇ ಸಮಸ್ಯೆಗಳಿದ್ದರೂ ಶಿಕ್ಷಕರ, ಉಪನ್ಯಾಸಕ ವರ್ಗದ, ವಿದ್ಯಾರ್ಥಿಗಳ ಪರವಾಗಿ ವಿಧಾನ ಪರಿಷತ್ತಿನಲ್ಲಿ ಕಾರ್ಯನಿರ್ವಹಣೆ ಮಾಡಿದ್ದಾರೆ ಎಂದು ಶಾಸಕರಾದ ದಿನೇಶ್ ಗೂಳಿಗೌಡ ಹೇಳಿದರು.

5ನೇ ಬಾರಿಗೆ ಆಯ್ಕೆ ಮಾಡಲು ಮನವಿ: ಶಿಕ್ಷಕ ಬಂಧುಗಳು ಇಂತಹ ಒಬ್ಬ ಪ್ರತಿನಿಧಿಯನ್ನು ಪಡೆಯಲು ಹೆಮ್ಮೆ ಪಡಬೇಕು. ಮರಿತಿಬ್ಬೇಗೌಡರು, ಸತತವಾಗಿ 4 ಬಾರಿ ನಿಮ್ಮೆಲ್ಲರ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಹೀಗಾಗಿ ಶಿಕ್ಷಕ ಬಂಧುಗಳು ಅವರ ಕೈ ಹಿಡಿದು 5ನೇ ಬಾರಿಗೆ ವಿಧಾನ ಪರಿಷತ್ತಿಗೆ ಕಳುಹಿಸಿಕೊಡಬೇಕು ಎಂದು ಮನವಿ ಮಾಡಿದರು.

ಮೈತ್ರಿ ಆಟ ನಡೆಯದು : ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಆಟ ನಡೆಯದು. ಕಳೆದ ವಿಧಾನಸಭೆಯಲ್ಲಿಯೇ ಮೈತ್ರಿ ಪ್ರಯೋಜನವಾಗಲಿಲ್ಲ. ಈಗ ಶಿಕ್ಷಕ ಬಂಧುಗಳು ಕಾಂಗ್ರೆಸ್ ಪಕ್ಷ ಬೆಂಬಲಿಸುವ ಭರವಸೆ ಇದೆ ಎಂದರು.

ಐದು ವರ್ಷ ಸುಭದ್ರ ಸರ್ಕಾರ : ಲೋಕಸಭೆ ಚುನಾವಣೆ ಫಲಿತಾಂಶ ಬಳಿಕ ವಿರೋಧಿಗಳ ಯಾವುದೇ ತಂತ್ರ ಫಲಿಸದು. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಐದು ವರ್ಷ ಸುಭದ್ರ ಸರ್ಕಾರ ಇರಲಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಕೇವಲ 85 ಸ್ಥಾನ ಬರಲಿದೆ ಎಂದಿದ್ದರು. ಆದರೆ 136ಸ್ಥಾನಗಳನ್ನು ನೀಡುವ ಮೂಲಕ ಮತದಾರರು ಕಾಂಗ್ರೆಸ್ ಬೆಂಬಲಿಸಿದರು. ಸರ್ಕಾರ ನುಡಿದಂತೆ ಐದು ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. 4.40 ಕೋಟಿ ಜನರಿಗೆ ಈ ಯೋಜನೆ ತಲುಪಿದ್ದು, ಬರಗಾಲದಲ್ಲೂ ರಾಜ್ಯದ ಜನತೆಗೆ ಈ ಗ್ಯಾರಂಟಿ ಯೋಜನೆಗಳು ವರದಾನವಾಗಿವೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ 15ರಿಂದ 18ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಾಕ್ಸ್
ಗೆದ್ದೆ ಗೆಲ್ಲುವೆ : ಲೋಕಸಭೆಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಮಾತನಾಡಿ, ಮಂಗಳವಾರ ನಡೆಯುವ ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ನಾನು ಗೆದ್ದೆ ಗೆಲ್ಲುತ್ತೇನೆ. ಯಾವುದೇ ಆತಂಕ ಬೇಡ ಎಂದರು.

ರಾಜ್ಯದ ಫಲಿತಾಂಶದ ಬಗ್ಗೆ ಪ್ರಸ್ತಾಪಿಸುವುದಿಲ್ಲ. ಮಂಡ್ಯ ಕ್ಷೇತ್ರ ಗೆಲ್ಲುವುದು ಗ್ಯಾರಂಟಿ ಎಂದ ಅವರು, ಎಕ್ಸಿಟ್ ಪೋಲ್ ಬಗ್ಗೆ ಪ್ರಸ್ತಾಪಿಸಿ ಯಾರೂ ಕೂಡ ಶೇ.100ರಷ್ಟು ಒಳ ಹೋಗಿ ನೋಡಿರುವುದಿಲ್ಲ. 10ರಷ್ಟು ಮಾತ್ರ ಎಕ್ಸಿಟ್ ಪೋಲ್ ಯಶಸ್ವಿಯಾಗುತ್ತದೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಡಿ.ಗಂಗಾಧರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ತ್ಯಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೃಷ್ಣೇಗೌಡ, ಕಿಸಾನ್ ಕಾಂಗ್ರೆಸ್ ಮೇಲುಕೋಟೆ ಘಟಕದ ಅಧ್ಯಕ್ಷ ಸಿ.ಆರ್.ರಮೇಶ್, ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಉಮಾಶಂಕರ್, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಸ್.ಪರಮೇಶ್,
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ನಿರ್ದೇಶಕ ಎನ್.ಕೃಷ್ಣೇಗೌಡ, ಮುಖಂಡರಾದ ಡಿ.ಕೆ.ದೇವೇಗೌಡ, ಪಾಪು, ಎಂ.ಆರ್.ದೇವರಾಜು ತಮ್ಮಣ್ಣ, ವನರಾಜು, ಕೆ.ಕುಬೇರ, ಬಿ.ಜೆ.ಸ್ವಾಮಿ, ಎಸ್.ಟಿ.ದೊಡ್ಡವೆಂಕಟಯ್ಯ, ಸಿದ್ದಲಿಂಗಯ್ಯ, ಬಸವರಾಜು, ಚಿಕ್ಕಾಡೆ ಮಹೇಶ್, ಅಂಕೋಲಾ, ರೈತಸಂಘದ ಅಧ್ಯಕ್ಷ ಪಿ.ನಾಗರಾಜು, ಸಾಹಿತಿ ಡಾ.ಬೋರೇಗೌಡ ಚಿಕ್ಕಮರಳಿ,
ದಸಂಸ ಮುಖಂಡ ಅಂಕಯ್ಯ, ಹೋರಾಟಗಾರ ಎಚ್.ಎನ್.ನಾರಾಯಣಗೌಡ ಹಾಗೂ ಶಿಕ್ಷಣ ಪ್ರತಿನಿಧಿಗಳು ಇದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!