ಮಂಡ್ಯ, ಜೂನ್ ೨೬ : ವೈದ್ಯಕೀಯ ಪ್ರವೇಶಾತಿಯ ನೀಟ್ ನಲ್ಲಿ ನಡೆದ ಅಕ್ರಮದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಪರೀಕ್ಷೆಯನ್ನು ರದ್ದುಪಡಿಸಿ ಮರು ಪರೀಕ್ಷೆ ನಡೆಸಬೇಕು ಎಂದು ಮಳವಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಅಜ್ಜಹಳ್ಳಿ ರಾಮಕೃಷ್ಣ ಒತ್ತಾಯಿಸಿದರು.
ವೈದ್ಯಕೀಯ ಪ್ರವೇಶಾತಿಗೆ ದೇಶದಲ್ಲಿ ನಡೆದ ನೀಟ್ ಪರೀಕ್ಷೆಯ ಪ್ರಕರಣದಲ್ಲಿ ಭಾರಿ ಅಕ್ರಮ ನಡೆದಿರುವುದು, ವೈದ್ಯಕೀಯ ಅಧ್ಯಯನಕ್ಕೆ ಮುಂದಾಗಿದ್ದ ಅನ್ಯಾಯ ಮಾಡಿ, ಪರೀಕ್ಷೆ ಪತ್ರಿಕೆ ಸೋರಿಕೆಯಾಗುವ ಜೊತೆಗೆ ವೈದ್ಯಕೀಯ 67 ರಾಂಕ್ ಬಂದಿರುವುದು ಒಂದೇ ಪರೀಕ್ಷೆ ಕೇಂದ್ರದ ಎಂಟು ವಿದ್ಯಾರ್ಥಿಗಳು ಪ್ರಥಮ ರಾಂಕ್ ಪಡೆದಿರುವುದು ಅಕ್ರಮ ನಡೆದಿರುವುದಕ್ಕೆ ಪೂರಕ ಸಾಕ್ಷಿಯಾಗಿದೆ ಎಂದರು.
ಅಲ್ಲದೇ ತರಾತುರಿಯಲ್ಲಿ ಕೃಪಾಂಕ ನೀಡಿರುವುದು. ಲೋಕಸಭೆಯ ಫಲಿತಾಂಶ ದಿನ ನೀಟ್ ಪರೀಕ್ಷೆ ಫಲಿತಾಂಶ ಪ್ರಕಟಿಸಿರುವುದು ಮತ್ತಷ್ಟು ಅನುಮಾನ ಹೆಚ್ಚಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀಟ್ ಪರೀಕ್ಷೆಯ ನಂತರ ಕೆಲವು ಅಕ್ರಮಗಳು ನಡೆದಿರುವುದಕ್ಕೆ ಸಾಕ್ಷಿಯಾಗಿದ್ದು ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಪ್ರಾಣ ಕಳೆದುಕೊಳ್ಳದಂತೆ ನಮ್ಮನಾಳುವ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ನೀಟ್ ಪರೀಕ್ಷೆ ಅಕ್ರಮದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ಜತೆಗೆ ಪರೀಕ್ಷೆಯನ್ನು ರದ್ದುಪಡಿಸಿ ಕೂಡಲೇ ಮರು ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸಿ.ಆರ್.ರಮೇಶ್, ಸುಂಡಹಳ್ಳಿ ಮಂಜುನಾಥ್, ಪುಟ್ಟರಾಮು, ಅಂತನಹಳ್ಳಿ ಬಸವರಾಜು ಇತರರಿದ್ದರು.