ಪಾಂಡವಪುರ : ಕರ್ನಾಟಕ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳಿಗೆ ಇನ್ನಾದರೂ
ಕಡಿವಾಣ ಹಾಕಬೇಕು ಗ್ಯಾರಂಟಿ ಯೋಜನೆಗಳನ್ನು ಅರ್ಹ ಬಡವರಿಗೆ ಮಾತ್ರ ನೀಡಬೇಕು ಎಂದು ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಹಾಗೂ ಕನ್ನಡ ಸೇನೆ
ಜಿಲ್ಲಾ ಕಾರ್ಯಧ್ಯಕ್ಷರೂ ಆದ ಮಂಡಿಬೆಟ್ಟಹಳ್ಳಿ ಎಂ.ಎಸ್.ಮಂಜುನಾಥ್ ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಈ ಐದು ಗ್ಯಾರಂಟಿ ಯೋಜನೆಗಳು ಶೇ.50ಗಿಂತಲೂ ಜಾಸ್ತಿ ಸಿರಿವಂತರ ಪಾಲಾಗುತ್ತಿದೆ.ಭೂಮಿ ಉಳ್ಳವರು.ಸರಕಾರಿ ನೌಕರರು ಆದಾಯ ತೆರಿಗೆ ಪಾವತಿಸುವವರು ಶ್ರೀಮಂತರ ಸೊತ್ತಾಗಿದೆ. ಇದರಿಂದ ಸರ್ಕಾರದ ಬೊಕ್ಕಸ ಖಾಲಿಯಾಗುವುದಲ್ಲದೆ ಭಾಗ್ಯಗಳಿಗೆ ಅರ್ಥವಿಲ್ಲದಂತಾಗಿದೆ. ಹೀಗಾಗಿ ನಿರ್ಗತಿಕರು, ಬಡವರು, ಕೂಲಿ ಕಾರ್ಮಿಕರು, ಅತಿ ಸಣ್ಣ ಹಿಡುವಳಿದಾರರನ್ನು ಗುರುತಿಸುವ ಕೆಲಸವನ್ನು ಸರ್ಕಾರ ಈ ಕೂಡಲೇ ಮಾಡುವ ಮೂಲಕ ಗ್ಯಾರಂಟಿ ಯೋಜನೆಗಳ ಜಾರಿಗೆ ಸೂಕ್ತ ಕ್ರಮ ಅನುಸರಿಸಬೇಕು. ಸಾರ್ವಜನಿಕರ ತೆರಿಗೆ ಹಣ ಲೋಪವಾಗಬಾರದು ಎಂದು ಒತ್ತಾಯಿಸಿದ್ದಾರೆ