Wednesday, November 6, 2024
spot_img

ಪಾಂಡವಪುರ:ಮತ್ತೊಂದು ಭ್ರೂಣಹತ್ಯೆ ಪ್ರಕರಣ ಬೆಳಕಿಗೆ.ಧಾವಿಸಿದ ಪೋಲಿಸರು ಜಿಲ್ಲಾ ಆರೋಗ್ಯಾಧಿಕಾರಿಗಳು

ಪಾಂಡವಪುರ: ಮೊನ್ನೆಯಷ್ಟೇ ಪಾಂಡವಪುರ ಪಟ್ಟಣದ ಆರೋಗ್ಯಾಧಿಕಾರಿಗಳ ಕಚೇರಿ ಸಮೀಪದಲ್ಲೇ ಇರುವ ಆರೋಗ್ಯ ವಸತಿ ಗೃಹದಲ್ಲಿ ಹೆಣ್ಣು ಭ್ರೂಣ ಪತ್ತೆಯಾಗಿ 9 ಆರೋಪಿಗಳು ಬಂಧನದ ಬಳಿಕ ಮತ್ತೊಂದು ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಪಾಂಡವಪುರದಲ್ಲಿ ಬೆಳಕಿಗೆ ಬಂದಿದೆ.

ಭ್ರೂಣ ಪತ್ತೆಗೆ ಒಳಗಾಗಿ ಅಕ್ರಮವಾಗಿ ಗರ್ಭಪಾತಕ್ಕೆ ಮಾಡಿಸಿಕೊಂಡಿದ್ದ ಮಹಿಳೆಯೊಬ್ಬಳು ತೀವ್ರ ರಕ್ತಸ್ರಾವದಿಂದ ಒಂದೂವರೆ ತಿಂಗಳ ಬಳಿಕ ಪಟ್ಟಣದ ಉಪವಿಭಾಗೀಯ ಆಸ್ಪತ್ರೆಗೆ ಗುರುವಾರ ದಾಖಲಾಗುವ ಮೂಲಕ ಈ ಪ್ರಕರಣ ಬೆಳಕಿಗೆ ಬಂದಿದೆ.

ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದ ಮಾಲಾಶ್ರೀ ಭ್ರೂಣ ಪತ್ತೆಯ ನಂತರ ಗರ್ಭಪಾತಕ್ಕೆ ಒಳಗಾಗಿದ್ದ ಮಹಿಳೆ.

ಕಳೆದ ಒಂದೂವರೆ ತಿಂಗಳ ಹಿಂದೆಯೇ ಭ್ರೂಣ ಪತ್ತೆ ಹಚ್ಚಿ ಹತ್ಯೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ. ಮಹಿಳೆಗೆ ಈಗಾಗಲೇ 9 ವರ್ಷ ಮತ್ತು ಒಂದೂವರೆ ವರ್ಷದ ಎರಡು ಹೆಣ್ಣು‌ ಮಕ್ಕಳಿರುವುದಾಗಿ ಗೊತ್ತಾಗಿದೆ.

ಒಂದೂವರೆ ತಿಂಗಳುಗಳು ಕಳೆದ ಬಳಿಕ ರಕ್ತಸ್ರಾವ ಹೆಚ್ಚಾದ ಹಿನ್ನೆಲೆಯಲ್ಲಿ ಗಾಬರಿಗೊಂಡು ಗುರುವಾರ ಮಧ್ಯಾಹ್ನ ಪಾಂಡವಪುರ ಉಪವಿಭಾಗೀಯ ಆಸ್ಪತ್ರೆ ದಾಖಲಾಗಿ ಪರೀಕ್ಷೆಗೆ ಒಳಗಾಗಿದ್ದರು. ಪರೀಕ್ಷೆ ನಡೆಸಿದ ವೈದ್ಯರು ಅನುಮಾನಗೊಂಡು ವಿಚಾರಿಸಿದ ವೇಳೆ ಗರ್ಭಪಾತ ಮಾಡಿಸಿಕೊಂಡಿರುವುದಾಗಿ ಮಹಿಳೆ ಮಾಹಿತಿ ಬಹಿರಂಗಗೊಳಿಸಿದ್ದಾಳೆ.

ಪಾಂಡವಪುರ ತಾಲೂಕಿನ ಚಿಕ್ಕಾಡೆ ಮತ್ತು ಕುಂತಿಬೆಟ್ಟದ ನಡುವಿನಲ್ಲಿ ಭ್ರೂಣ ಪತ್ತೆ ಹಚ್ಚಿ ತಾಲೂಕಿನ ಹೊಸಕೋಟೆ ಗ್ರಾಮದ ಹೆಂಚಿನ ಮನೆಯಲ್ಲಿ ಗರ್ಭಪಾತ ಮಾಡಿಸಿಕೊಂಡಿದ್ದಾಗಿ ಮಹಿಳೆ ವೈದ್ಯರಿಗೆ ಮಾಹಿತಿ ನೀಡಿದ್ದಾಳೆ.

ಡಿಎಚ್ ಒ ಭೇಟಿ ಪರಿಶೀಲನೆ : ವಿಚಾರ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಮೋಹನ್ ಮಹಿಳೆಯ ಆರೋಗ್ಯ ವಿಚಾರಣೆ ಮಾಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆಡಳಿತಾ ವೈದ್ಯಾಧಿಕಾರಿ ಡಾ.ಸಿ.ಎ.ಅರವಿಂದ್ ಹಾಗೂ ಇತರೆ ವೈದ್ಯರಿಂದ ಮಾಹಿತಿ ಪಡೆದುಕೊಂಡರು.

ಪೊಲೀಸರ ಭೇಟಿ : ಪ್ರಕರಣಕ್ಕೆ ಸಂಬಂಧಿಸಿದಂತೆ ಸಬ್ ಇನ್ಸ್ ಪೆಕ್ಟರ್ ಉಮೇಶ್ ಮಾಹಿತಿ ಪಡೆದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಸು ದಾಖಲಿಸಿಕೊಂಡಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಈ ಪ್ರಕರಣ ಪತ್ತೆಯಂದಾಗಿ ಮತ್ತಷ್ಟು ಹೆಣ್ಣು ಭ್ರೂಣ ಹತ್ಯೆ ನಡೆದಿರುವ ಬಗ್ಗೆ ಹಾಗೂ ದೊಡ್ಡ ಜಾಲವೇ ಅಡಗಿರುವ ಕುರಿತಂತೆ ಶಂಕೆ ವ್ಯಕ್ತವಾಗಿದೆ. ಪೊಲೀಸರು ತನಿಖೆ ಚುರುಕುಗೊಳಿಸುವ ಮೂಲಕ ಮತ್ತಷ್ಟು ಹಗರಣ ಬಯಲಿಗೆಳೆಯಬೇಕಾಗಿದೆ.

 

ಪಾಂಡವಪುರ ಪಟ್ಟಣದ ಉಪವಿಭಾಗೀಯ ಆಸ್ಪತ್ರೆಗೆ ಹೆಣ್ಣು ಭ್ರೂಣ ಪತ್ತೆ ಮಾಡಿ ಗರ್ಭಪಾತಕ್ಕೆ ಒಳಗಾದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್ ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!