ಪಾಂಡವಪುರ, ಜೂನ್ ೩೦:ವಿವಿಧೆಡೆ ಕಳವು ಮಾಡಿದ್ದ ಸುಮಾರು 5.20ಲಕ್ಷ ರೂ. ಬೆಲೆ ಬಾಳುವ ವಿವಿಧ ಮಾದರಿಯ 13 ದ್ವಿಚಕ್ರ ವಾಹನಗಳನ್ನು ಅಮಾನತ್ತುಪಡಿಸಿ ಕೊಂಡಿರುವ ಪಾಂಡವಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕೆ.ಆರ್.ನಗರ ನಿವಾಸಿ, ಹಾಲಿ ವಾಸ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದ ರಾಜಾಚಾರಿ ಬಿನ್ ಚಲುವಚಾರಿ,(41) ಎಂಬಾತ ಬಂಧಿತ ಆರೋಪಿ.
ವಿಶ್ವಕರ್ಮ ಜನಾಂಗಕ್ಕೆ ಸೇರಿದ ರಾಜಾಚಾರಿ ಸಾಮಿಲ್ ನಲ್ಲಿ ಮರ ಕುಯ್ಯುವ ಕೆಲಸ ಮಾಡುತ್ತಿದ್ದು, ಈತನನ್ನು ದಸ್ತಗಿರಿ ಮಾಡಿದ ಪೊಲೀಸರು ಈ ಆರೋಪಿ ಕೊಟ್ಟ ಮಾಹಿತಿಯ ಮೇರೆಗೆ ಮಂಡ್ಯ ಜಿಲ್ಲೆ, ಮೈಸೂರು ಜಿಲ್ಲೆ ಹಾಗೂ ಮೈಸೂರು ನಗರದಲ್ಲಿ ಕಳವು ಮಾಡಿದ್ದ ವಿವಿಧ ಮಾದರಿಯ 13 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲಾ ಪೊಲೀಸ್ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ರವರ ಮಾರ್ಗದರ್ಶನದಲ್ಲಿ ಶ್ರೀರಂಗಪಟ್ಟಣ ಉಪವಿಭಾಗ ಡಿವೈಎಸ್ಪಿ ಮುರಳಿ ಅವರ ನಿರ್ದೇಶನದಂತೆ, ಪಾಂಡವಪುರ ಪೊಲೀಸ್ ಇನ್ಸ್‌ಪೆಕ್ಟರ್ ಚ್.ಆರ್.ವಿವೇಕಾನಂದರವರ ನೇತೃತ್ವದಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳಾದ ಆರ್.ಬಿ.ಉಮೇಶ, ಕೆ.ಸಿ.ಧರ್ಮಪಾಲ್, ಸಿಬ್ಬಂದಿಗಳಾದ ಎನ್.ಶಿವರಾಜ, ವರದರಾಜು, ಎಂ.ಕೆ.ಪ್ರಶಾಂತ, ರಾಜೇಶ್, ತೌಸಿಫ್ ಅವರುಗಳು ಪತ್ತೆ ಮಾಡಿದ್ದು ಅವರ ಈ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಅವರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.