ಪಾಂಡವಪುರ : ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ರೈನ್ ಬೋ ಸೂಪರ್ ಮಾರ್ಕೆಟ್ ಗೆ ಬೆಂಕಿ ತಗುಲಿದ ಪರಿಣಾಮ 2 ಸಾವಿರ ನಗದು ಹಾಗೂ
ಸುಮಾರು 25ಲಕ್ಷ ರೂ. ಮೌಲ್ಯದ ಪದಾರ್ಥಗಳು ಹಾನಿಗೊಳಗಾಗಿರುವ ಘಟನೆ ಪಟ್ಟಣದ ನಾಗಮಂಗಲ ರಸ್ತೆಯಲ್ಲಿ ನಡೆದಿದೆ.
ತಾಲೂಕಿನ ಬನಘಟ್ಟ ಗ್ರಾಮದ ನಿವಾಸಿ ಅಶ್ವತ್ಥ ಎಂಬುವವರಿಗೆ ಸೇರಿದ ರೈನ್ ಬೋ ಸೂಪರ್ ಮಾರ್ಕೆಟ್ ಬೆಂಕಿಗಾಹುತಿಯಾಗಿದೆ.
ಘಟನೆಯಿಂದಾಗಿ ಕ್ಯಾಷ್ ಕೌಂಟರ್ ನಲ್ಲಿಟ್ಟಿದ್ದ ಸುಮಾರು 2ಲಕ್ಷ ರೂ.ನಗದು ಸುಟ್ಟು ಕರಕಲಾಗಿದ್ದು, ಮಾರ್ಕೆಟ್ ನಲ್ಲಿದ್ದ ತಿಂಡಿ ಪದಾರ್ಥಗಳು, ಧವನ ಧಾನ್ಯಗಳು, ಗೃಹ ಬಳಕೆ ವಸ್ತುಗಳು ಬೆಂಕಿಗೆ ಹಾನಿಗೊಳಗಾಗಿವೆ.
ಮಾರ್ಕೆಟ್ ನ ಪ್ರಿಡ್ಜ್ ನಿಂದ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಮಾಲೀಕ ಅಶ್ವತ್ಥ ಶಂಕೆ ವ್ಯಕ್ತಪಡಿಸಿದ್ದು, ಬೆಂಕಿಯಿಂದ ಮೆಲ್ಟ್ ಆಗಿರುವ ಸಾಕಷ್ಟು ಪದಾರ್ಥಗಳು ಮತ್ತೆ ವ್ಯಾಪಾರಕ್ಕೆ ಬಳಕೆ ಮಾಡಲಾಗದು ಎಂದಿದ್ದಾರೆ.
ಈ ಸಂಬಂಧ ಪಾಂಡವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.