Thursday, September 19, 2024
spot_img

ಪಾಂಡವಪುರ:ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ.ಪಿಯೂಸಿ ಮಹತ್ವದ ಘಟ್ಟ.ಎನ್ ಮಹದೇವಪ್ಪ ನುಡಿ

ಪಾಂಡವಪುರ :ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ, ಪಿಯುಸಿ ಅತ್ಯಂತಮಹತ್ವದ ಘಟ್ಟವಾಗಿದೆ. ಹೆಚ್ಚು ಪರಿಶ್ರಮ ಹಾಕಿದರೆ ಏನನ್ನಾದರೂ ಸಾಧಿಸಬಹುದು ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ (ಪ್ರೌಢಶಾಲಾ ವಿಭಾಗ)
ಉಪ ಪ್ರಾಂಶುಪಾಲ ಎನ್.ಮಹದೇವಪ್ಪ ಹೇಳಿದರು.

ತಾಲೂಕಿನ ಜಯಂತಿನಗರ ಕ್ರಾಸ್ ನಲ್ಲಿರುವ ಶ್ರೀ ಶಂಭುಲಿಂಗೇಶ್ವರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ದಿ.ಎ.ಎನ್.ಮಾಯಣ್ಣೇಗೌಡ ಎರೇಗೌಡನಹಳ್ಳಿ, ದಿ.ಕೆ.ಆರ್.ಪುಟ್ಟೇಗೌಡ ಕೆನ್ನಾಳು ಹಾಗೂ ದಿ.ತೊಟ್ಟಿಲು ಪುಟ್ಟೇಗೌಡ ಹುಲಿವಾನ ಅವರ ಸ್ಮರಣಾರ್ಥ ಆಯೋಜಿಸಿದ್ದ 2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಹಿಂದಿನ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಹಾಗೂ ಈಗಿನ ಫಲಿತಾಂಶ ಗಮನಿಸಿದರೆ ವಿದ್ಯಾರ್ಥಿಗಳು ಅವರ ಸ್ವಂತ ಜ್ಞಾನದಿಂದ ಗೆದ್ದು ಬಂದಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಇದು ನೈಜ ಫಲಿತಾಂಶವಾಗಿದ್ದು, ಯಶಸ್ಸು ಯಾರ ಸ್ವತ್ತಲ್ಲ, ಪರಿಶ್ರಮಪಟ್ಟವರಿಗೆ ಮಾತ್ರ ಯಶಸ್ಸು ದೊರಕಲಿದೆ ಎಂದರು.

ಸಾಧನೆ ಮಾಡಲೋರಟ ಸಾಧಕರಿಗೆ ಧೈರ್ಯ ಪ್ರಮುಖವಾಗಿ ಬೇಕಿದೆ. ಪೋಷಕರು ಮನೆಯಲ್ಲಿ ಮಕ್ಕಳಿಗೆ ಒಳ್ಳೆಯ ವಾತಾವರಣ ನಿರ್ಮಿಸುವ ಜತೆಗೆ ಅವರಿಗೆ ಬೇಕಾದ ಪೂರಕ ವ್ಯವಸ್ಥೆಗಳನ್ನು ಒದಗಿಸಿಕೊಡಬೇಕು. ಆದರೆ ನಾವು ಮೊಬೈಲ್ ಯುಗದಲ್ಲಿದ್ದೇವೆ. ಇದು ಸದುಪಯೋಗಕ್ಕಿಂತಲೂ ಮಕ್ಕಳನ್ನು ಅಧೋಗತಿಗೆ ತಲುಪಿಸಲಿದೆ. ಒಳಿತಿಗಿಂತ ಕೆಟ್ಟದನ್ನೆ ಅವಲಂಬಿಸುವುದೇ ಹೆಚ್ಚು. ಹೀಗಾಗಿ ಪೋಷಕರು ತಮ್ಮ ಮಕ್ಕಳಿಗೆ ಮೊಬೈಲ್ ಬಳಕೆ ಮಾಡಿ ಓದಿನತ್ತ ಗಮನಹರಿಸುವಂತೆ ತಿಳಿಹೇಳಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ಓದಿನ ಜತೆಗೆ ಸಂಸ್ಕಾರ ಇಟ್ಟುಕೊಳ್ಳಬೇಕು. ಆದರೆ ಇತ್ತೀಚಿನ ವಿದ್ಯಾರ್ಥಿಗಳ ಬದುಕು ಸಂಸ್ಕಾರ ರಹಿತ ಬದುಕಾಗಿದೆ. ಮಕ್ಕಳು ತಂದೆ-ತಾಯಿಯ ಮಾತನ್ನೇ ಕೇಳುವುದಿಲ್ಲ. ಭಾರತೀಯ ಸಂಸ್ಕ್ರತಿಯಲ್ಲಿ ಸಂಸ್ಕಾರ ಎನ್ನುವುದು ಬಹು ದೊಡ್ಡದು. ಹೀಗಾಗಿ ಮಕ್ಕಳಿಗೆ ವಿದ್ಯೆಯಷ್ಟೆ ಸಂಸ್ಕಾರ ಕೂಡ ಅಷ್ಟೇ ಮುಖ್ಯ. ನಮ್ಮ ಸುತ್ತಮುತ್ತಲಿನ ಪರಿಸರ ಹಾಳಾಗದಂತಾಗಿರಲು ಮಕ್ಕಳಿಗೆ ಸಂಸ್ಕಾರ ಅತ್ಯಗತ್ಯ ಎಂದರು.

ಡಿಎಂಎಸ್ ಜ್ಞಾನ ಕುಟೀರದ ಮುಖ್ಯ ಶಿಕ್ಷಕ
ಜಗದೀಶ್ ಮಾತ‌ನಾಡಿ, ಎಲ್ಲಾ ದಾನಗಳಿಗಿಂತಲೂ ವಿದ್ಯಾದಾನ ಶ್ರೇಷ್ಟವಾದದು. ಜೀವನದ ಕೊನೆವರೆಗೆ ವಿದ್ಯೆ ಇದ್ದೇ ಇರುತ್ತದೆ. ಕಳೆದ ಮೂರು ದಶಕಗಳಿಂದಲೂ ಶ್ರೀ ಶಂಭುಲಿಂಗೇಶ್ವರ ಎಜುಕೇಷನ್‌ ಟ್ರಸ್ಟ್ ಕಾರ್ಯದರ್ಶಿ ಎಂ.ಪಂಚಲಿಂಗೇಗೌಡರು ಗ್ರಾಮೀಣ ಮಕ್ಕಳಿಗೆ ವಿವಿಧ ಕೋರ್ಸ್ ಗಳನ್ನು ತೆರೆದು ವಿದ್ಯಾದಾನ ಮಾಡುತ್ತಿರುವುದು ಶ್ಲಾಘನೀಯ. ಆ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆ ನಡೆಸುವುದೇ ದುಸ್ತರ. ಪಂಚಲಿಂಗೇಗೌಡರು ಗ್ರಾಮೀಣ ಮಕ್ಕಳ ಭವಿಷ್ಯ ರೂಪಿಸುವ ಕೆಲಸವನ್ನು ಅತ್ಯಂತ ಯಶಸ್ವಿಯಾಗಿ ನಿಬಾಯಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀ ಶಂಭುಲಿಂಗೇಶ್ವರ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಎಂ.ಪಂಚಲಿಂಗೇಗೌಡ ಮಾತನಾಡಿ, ಎಷ್ಟೇ ಕಷ್ಟವಿದ್ದರೂ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸಲು ಪೋಷಕರು ಪರಿಶ್ರಮಪಡುತ್ತಾರೆ. ಹೀಗಾಗಿ ಮಕ್ಕಳು ತಂದೆ-ತಾಯಿಗಳಿಗೆ ಕೃತಜ್ಞತೆ ಅರ್ಪಿಸಬೇಕು ಎಂದರು.

ಕಳೆದ 35 ವರ್ಷಗಳಿಂದಲೂ ಸಂಸ್ಥೆಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸದ ಜತೆಗೆ ವಿವಿಧ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಏಕ ಕಾಲಕ್ಕೆ ಐದು ತರಬೇತಿ ಶಾಲೆಗಳನ್ನು ಪ್ರಾರಂಭಿಸಿ ಯಶಸ್ವಿಯಾಗಿ ನಡೆಸಿದ ಹೆಗ್ಗಳಿಕೆ ನಮ್ಮ ಸಂಸ್ಥೆಯದ್ದು. ತಾಲೂಕಿನಲ್ಲಿ ಪ್ರಪ್ರಥಮ ಬಾರಿಗೆ ವಾಹನ ವ್ಯವಸ್ಥೆ ಮಾಡಿದ್ದು ಕೂಡ ನಮ್ಮ ಸಂಸ್ಥೆ ಎಂದರು.

ಶ್ರೀ ಶಂಭುಲಿಂಗೇಶ್ವರ ಎಜುಕೇಷನ್‌ ಟ್ರಸ್ಟ್ ಅಧ್ಯಕ್ಷ ಪಿ.ಹೊನ್ನರಾಜು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬಾಲಚಂದ್ರ, ಕಾರ್ಯದರ್ಶಿ ಎಂ.ಪಂಚಲಿಂಗೇಗೌಡ, ಆಡಳಿತಾಧಿಕಾರಿ ಪಿ.ಅಕ್ಷಯ್, ಪಿಯು ಕಾಲೇಜು ಪ್ರಾಂಶುಪಾಲೆ ಆರ್.ವಿ.ಸೌಮ್ಯ, ಮುಖ್ಯ ಶಿಕ್ಷಕ ಕೆ.ಆರ್.ಮೋಹನ್ ರಾಜು, ಡಿಎಂಎಸ್ ಜ್ಞಾನ ಕುಟೀರ ವಿದ್ಯಾಸಂಸ್ಥೆ ಮುಖ್ಯ ಶಿಕ್ಷಕ ಜಗದೀಶ್, ಹಿರಿಯ ಪತ್ರಕರ್ತ ಎನ್.ಕೃಷ್ಣೇಗೌಡ ಇತರರಿದ್ದರು

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!