Saturday, July 27, 2024
spot_img

ಮಕ್ಕಳ ಕುರಿತು ಶಾಸನ ಸಭೆಗಳಲ್ಲಿ ಚರ್ಚೆಯಾಗಬೇಕು:ಹಿರಿಯ ಪತ್ರಕರ್ತ ಮಮ್ತಾಜ್ ಅಭಿಮತ

ಪಾಂಡವಪುರ: ಮಕ್ಕಳ ಸಮಸ್ಯೆಗಳ ಕುರಿತು ಶಾಸನ ಸಭೆಗಳಲ್ಲಿ ಚರ್ಚೆ ನಡೆಯಬೇಕು ಎಂದು ಹಿರಿಯ ಪತ್ರಕರ್ತ ಜಿ. ಮುಮ್ತಾಜ್ ಅಲೀಮ್ ಹೇಳಿದರು.

ತಾಲ್ಲೂಕಿನ ಹರವು ಗ್ರಾಮದಲ್ಲಿರುವ ಪ್ರಾಚೀನ ಸ್ಮಾರಕ ರಾಮದೇವರ ದೇಗುಲದ ಆವರಣದಲ್ಲಿ ಗ್ರಾಮ ಸಂಸ್ಕೃತಿ ಸಾಂಸ್ಕೃತಿಕ ವೇದಿಕೆ ಆಯೋಜಿಸಿದ್ದ, ಹದಿನಾರನೇ ವರ್ಷದ ಕುಣಿಯೋಣು ಬಾರಾ ಬೇಸಿಗೆ ಶಿಬಿರದ ಸಮಾರೋಪ‌ ಸಮಾರಂಭದಲ್ಲಿ ಅವರು ಮಾತನಾಡಿದರು ‌

 

ಶಾಸನ ಸಭೆಗಳಲ್ಲಿ ಮಕ್ಕಳ ಸಮಸ್ಯೆಗಳ ಕುರಿತು ಶಾಸಕರು ಚರ್ಚೆಯನ್ನೇ ನಡೆಸುತ್ತಿಲ್ಲ ಎಂದು ಅವರು ವಿಷಾದಿಸಿದರು.

ಬಾಲ ಕಾರ್ಮಿಕ ಪದ್ದತಿ , ಬೀದಿ ಮಕ್ಕಳ ಮೇಲಿನ ದೌರ್ಜನ್ಯ ಅದರಲ್ಲೂ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ , ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲಿನ ಅತ್ಯಾಚಾರ , ಪೋಷಕರು ಸೇರಿದಂತೆ ಸಮಾಜ ವಿರೋಧಿ ಶಕ್ತಿಗಳ ಮಕ್ಕಳನ್ನು ಭಿಕ್ಷಾಟನೆಗೆ ಹಚ್ಚುವುದು, ಮಕ್ಕಳ ಅಪಹರಣ, ಮಕ್ಕಳ ಆರೋಗ್ಯ ಸಮಸ್ಯೆ ಇತ್ಯಾದಿಗಳಿಂದ ಲಕ್ಷಾಂತರ ಮಕ್ಕಳು ರಾಷ್ಟ್ರದಲ್ಲಿ ಬಳಲುತ್ತಿದ್ದಾರೆ ಎಂದರು.

ಬಡತನ, ಅಪೌಷ್ಟಿಕತೆ, ಸ್ವಚ್ಚತೆಯ ಕೊರತೆಗಳಿಂದಲೂ ಮಕ್ಕಳ ಸಾವು-ನೋವುಗಳು ನಡೆಯುತ್ತವೆ, ಮಕ್ಕಳು ಸೇರಿದಂತೆ ದೇಶದ ಪ್ರತಿ ನಾಗರಿಕನಿಗೂ ಸಂವಿಧಾನ ಕಾನೂನಿನ ರಕ್ಷಣೆಯನ್ನು ಖಾತರಿಪಡಿಸುತ್ತದೆ ಎಂಬುದನ್ನು ಅವರು ಒತ್ತಿ ಹೇಳಿದರು.

ರಂಗಕರ್ಮಿ ಗಿರೀಶ್ ಮಾಚಳ್ಳಿ ಮಾತನಾಡಿ, ಬಾಲ್ಯದಲ್ಲೇ ತಮ್ಮ ಹಳ್ಳಿಯ ಒಡನಾಟ, ಮಣ್ಣಿನಗುಣ ಮೈಗೂಡಿಸಿಕೊಂಡು ರಂಗ ಭೂಮಿಗೆ ಬಂದವರೇ ನಿಜ ಕಲಾವಿದರಾಗಿ ರೂಪುಗೊಳ್ಳುತ್ತಾರೆ. ಇಂತಹ ಶಿಬಿರಗಳೇ ಮಕ್ಕಳಿಗೆ ಅಡಿಪಾಯ ಎಂದರು.

ಗ್ರಾಮೀಣ ಪ್ರದೇಶದಲ್ಲಿ ಇಂತಹ ಶಿಬಿರಗಳನ್ನು ಆಯೋಜಿಸಿ ಮಕ್ಕಳ ಜ್ಞಾನ ಶಾಖೆಯನ್ನು ಬೆಳೆಸುತ್ತಿರುವ ಲೇಖಕ ಹರವು ದೇವೇಗೌಡರ ನಿರಂತರ ಶ್ರಮ ಶ್ಲಾಘನೀಯ ಎಂದರು.

ಪಾಳುಬಿದ್ದು ಶಿಥಿಲಾವಸ್ಥೆಗೆ ತಲುಪಿ, ಅನೈತಿಕ ಚಟುವಟಿಕೆಗಳ ತಾಣವಾಗಿದ್ದ ಪ್ರಾಚೀನ ಸ್ಮಾರಕ ಈ ರಾಮದೇವರ ದೇಗುಲವನ್ನು ಮೂವತ್ತು ವರ್ಷಗಳಿಂದ ಜೀರ್ಣೋದ್ಧಾರ ಮಾಡಿಸಿ ಈ ಪರಿಸರವನ್ನು ರಂಗ ಚಟುವಟಿಕೆಗೆ ಬಳಸುತ್ತಾ ದೇಗುಲವನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿ ಮಾಡಿರುವುದು ಈ ಸಮಾಜಕ್ಕೆ ಮಾದರಿ ಎಂದರು.

ಕಾರ್ಯಕ್ರಮದಲ್ಲಿ ಜಾನಪದ ನೃತ್ಯಗಳು , ಕಂಸಾಳೆ ಹಾಗೂ ‘ನೀಲಿಮರ’ ಎಂಬ ಮಕ್ಕಳ ನಾಟಕವನ್ನು ಪ್ರದರ್ಶಿಸುವ ಮೂಲಕ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕಲಾಶಕ್ತರನ್ನು ಮಕ್ಕಳು ರಂಜಿಸಿದರು.

ಶಿಬಿರದ ವ್ಯವಸ್ಥಾಪಕ ಹರವು ದೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!