Sunday, May 26, 2024
spot_img

ಕುಮಾರಸ್ವಾಮಿ ಏನು ಸಾಚಾನಾ.ಅವರು ಜೈಲಿಗೆ ಹೋಗುವ ಕಾಲ ಬಂದಿದೆ:ಶಾಸಕ‌ ಉದಯ್

ಮದ್ದೂರು : ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇನೂ ಸಾಚ ಅಲ್ಲ. ಅವರ ವಿರುದ್ಧವೂ ಮಹಿಳೆಯರು ದೂರು ಕೊಡುತ್ತಾರೆ. ಎಚ್.ಡಿ.ರೇವಣ್ಣನಂತೆ ಕುಮಾರಸ್ವಾಮಿ ಕೂಡ ಜೈಲಿಗೆ ಹೋಗುವ ಕಾಲ ಹತ್ತಿರ ಬಂದಿದೆ ಎಂದು ಮದ್ದೂರು ಶಾಸಕ ಕದಲೂರು ಉದಯ್ ಹೇಳಿದ್ದಾರೆ.

ಅವರ ಈ ಹೇಳಿಕೆಯೂ ರಾಜಕೀಯ ಪಡಶಾಲೆಯಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. “ಚಿತ್ರನಟಿ ರಾಧಿಕಾ ಅವರನ್ನ ಕುಮಾರಸ್ವಾಮಿ ಪತ್ನಿಯಂತೆ ನೋಡುತ್ತಿದ್ದಾರಾ? ಮಗಳ ವಯಸ್ಸಿನವರನ್ನ ಪುಸಲಾಯಿಸಿ, ಮಗು ಹುಟ್ಟಿಸಿ ರಸ್ತೆಯಲ್ಲಿ ಬಿಟ್ಟಿದ್ದಾರೆ. ಈ ರೀತಿ ಬಹಳಷ್ಟು ನಡೆದಿರುವ ಸಾಧ್ಯತೆಗಳಿವೆ ಎಂದರು.

ಮುಖ್ಯಮಂತ್ರಿ ಅಗಿದ್ದವರು ಇಂತಹ ನೀಚ ಕೆಲಸ ಮಾಡುತ್ತಾರಾ? ಕುಮಾರಸ್ವಾಮಿ ಏನೂ ಸಾಚ ಅಲ್ಲ ಅಂತ ಅವರ ಆಪ್ತರೇ ಹೇಳುತ್ತಾರೆ. ಕುಮಾರಸ್ವಾಮಿ ಕೂಡ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಕೇಳಿದ್ದೇವೆ” ಎಂದು ಹೇಳಿದ್ದಾರೆ.

“ಇಷ್ಟು ದಿನ ದೂರು ಕೊಡಲು ಯಾರೂ ಧೈರ್ಯ ಮಾಡಿರಲಿಲ್ಲ. ಯಾರಾದರೂ ದೂರು ಕೊಟ್ಟರೆ, ಸರ್ಕಾರ ತನಿಖೆ ನಡೆಸುತ್ತದೆ. ಬೇರೆಯವರನ್ನ ಮುಳುಗಿಸಿದ್ದೇ ಅವರ ಸಾಧನೆ. ಅವರು ಜೀವನದುದ್ದಕ್ಕೂ ಬ್ಲಾಕ್ ಮೇಲ್, ಅಪಪ್ರಚಾರ ಮಾಡುತ್ತಾ ಬಂದಿದ್ದಾರೆ” ಎಂದು ಆರೋಪಿಸಿದ್ದಾರೆ.

“ಪ್ರಜ್ವಲ್ ತನ್ನ ಕೃತ್ಯಗಳನ್ನು ತಾನೇ ವಿಡಿಯೋ ಮಾಡಿಕೊಂಡಿದ್ದ. ಜೆಡಿಎಸ್‌ ಯಾವ ಪುರುಷಾರ್ಥಕ್ಕೆ ಪ್ರತಿಭಟನೆ ಮಾಡುತ್ತಿದೆ. ನೂರಾರು ಹೆಣ್ಣುಮಕ್ಕಳಿಗೆ ಅನ್ಯಾಯ ಆಗಿದೆ. ಸಂತ್ರಸ್ತೆಯರ ಪರ ಜೆಡಿಎಸ್‌ನ ಯಾವ ನಾಯಕರೂ ಧ್ವನಿ ಎತ್ತಿಲ್ಲ. ಇವರ ಮನೆ ಹೆಣ್ಣುಮಕ್ಕಳಿಗೆ ಅನ್ಯಾಯ ಆಗಿದ್ದರೆ ಹೀಗೆ ಮಾಡುತ್ತಿದ್ರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!