ಮಂಡ್ಯ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ಬಿಜೆಪಿ ರೈತ ಮೋರ್ಚ ಆಗ್ರಹ
ಮಂಡ್ಯ ಜಿಲ್ಲೆಯ ಏಳು ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸ ಬೇಕು ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಎಚ್ ಆರ್. ಅಶೋಕ್ ಕುಮಾರ್ ಆಗ್ರಹಿಸಿದರು
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಅವರು ಮಂಡ್ಯ ಜಿಲ್ಲೆಯಲ್ಲಿ 7 ತಾಲೂಕುಗಳಿದ್ದು ಕೇವಲ ಐದು ತಾಲೂಕು ಬರ ಪ್ರದೇಶವೆಂದು ಗುರುತಿಸಲಾಗಿದೆ ಪಾಂಡವಪುರ ಮತ್ತು ಮದ್ದೂರು ತಾಲೂಕುಗಳನ್ನು ಅತಿ ಹೆಚ್ಚು ನೀರಾವರಿ ಇರುವ ಪ್ರದೇಶವೆಂದು ಕೈ ಬಿಡಲಾಗಿದೆ ಆದರೆ ಮಳೆಯ ನೀರಿನ ಅಭಾವದಿಂದಾಗಿ ಈ ಬಾರಿ ಕಬ್ಬು ಬೆಳೆಗಾರರು ಹೆಚ್ಚಿನ ಸಂಕಷ್ಟದಲ್ಲಿದ್ದಾರೆ, ಬೆಳದಂತ ಕಬ್ಬು ಒಣಗಿದ್ದು ಪ್ರತೀ ಎಕ್ಕರೆಗೆ ರೂ.1,50,000 ಬೆಳೆ ಪರಿಹಾರ ಕೊಡಬೇಕೆಂದು ಆಗ್ರಹಿಸಿದರು.
ಕದ್ದು ಮುಚ್ಚಿ ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಕಾಂಗ್ರೆಸ್ ಸರ್ಕಾರಕ್ಕ ರೈತರ ಹಿತ ಮುಖ್ಯವಾಗಿಲ್ಲ ಬದಲಾಗಿ ಅಧಿಕಾರಕ್ಕಾಗಿ ಮುಖ್ಯಮಂತ್ರಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ರೈತ ವಿರೋಧಿಯಾಗಿದೆ ಕುಡಿಯುವ ನೀರಿಗಾಗಿ ಬೆಂಗಳೂರಿಗೆ 6ನೇ ಹಂತದ ಕುಡಿಯುವ ನೀರಿನ ಯೋಜನೆಯನ್ನು ಕೈಬಿಡಬೇಕು ಹಾಗೂ ಕೇಂದ್ರ ಸರ್ಕಾರ ಮೇಕೆದಾಟು ಅಣೆಕಟ್ಟೆಗೆ ಅನುಮತಿ ನೀಡಿರುವುದರಿಂದ ತುರ್ತಾಗಿ ಅಣೆಕಟ್ಟೆಯನ್ನು ನಿರ್ಮಿಸಿ ಕುಡಿಯುವ ನೀರಿಗೆ ಬಳಸಬೇಕು.
ಮಂಡ್ಯದ ಕೃಷಿ ಚಟುವಟಿಕೆಗೆ ಅನುಗುಣವಾಗಿ ಕಟ್ಟು ನೀರು ಬದಲಾಗಿ ನಿರಂತರ ನೀರನ್ನು ನೀಡಬೇಕು ಇದರಿಂದ ಭತ್ತ ರಾಗಿ ಬೆಳೆಯಲು ಅನುಕೂಲ ವಾಗುತ್ತದೆ ಒಂದು ವೇಳೆ ಇದೇ ರೀತಿ ಕಾಂಗ್ರೆಸ್ ಸರ್ಕಾರ ರೈತರ ವಿರೋಧಿ ನೀತಿಗಳನ್ನು ಅನುಸರಿಸಿದರೆ ರಾಜ್ಯ ರೈತ ಮೋರ್ಚಾ ಬೀದಿಗಿಳಿದು ಕೃಷಿ ಸಚಿವ ಚೆಲುವರಾಯಸ್ವಾಮಿ ಹಾಗೂ ಪಿಎಂ ನರೇಂದ್ರಸ್ವಾಮಿ ನೀರಾವರಿ ಸಚಿವರು ಮಂಡ್ಯದವರೇ ಆಗಿರುವುದರಿಂದ ಅವರ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಡ್ಯ ಜಿಲ್ಲಾ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಸಿಎಂ ಜವರೇಗೌಡ ಅನಿಲ್ ಕುಮಾರ್ ಕೃಷ್ಣ ಸುನಿಲ್ ಉಪಸ್ಥಿತರಿದ್ದರು.


