ಕೊರಟಗೆರೆಯಲ್ಲಿ ಪರಮೇಶ್ವರನ್ನು ಸೋಲಿಸಿದ್ದು ಯಾರು? ಅನ್ನದಾನಿ ಪ್ರಶ್ನೆ
ಮಂಡ್ಯ: ಎ.೩.
೨೦೧೩ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ದಲಿತ ನಾಯಕ ಜಿ
ಜಿ.ಪರಮೇಶ್ವರ್ ರನ್ನು ಸೋಲಿಸಿದ್ದು ಯಾರು.ಇದೇ ಕಾಂಗ್ರೆಸ್ ಅಲ್ವೇ. ಎಂದು ಜ್ಯಾದಳ ಪರಿಶಿಷ್ಟ ಜಾತಿ ವಿಙಾಗದ ರಾಜ್ಯಾಧ್ಯಕ್ಷ ಎಂ ಅನ್ನದಾನಿ ಪ್ರಶ್ನಿಸಿದರು.
ನಗರದ ಪತ್ರಿಕಾಭವನದಲ್ಲಿ ಮಾತನಾಡಿದ ಅವರು.ಅಂದಿನ ಕೆಪಿಸಿಸಿ ಅಧ್ಯಕ್ಷರಾಗಿದ್ದ ಪರಮೇಶ್ವರ್ ಸೋಲಿಗೆ ಕಾಂಗ್ರೆಸ್ ಕಾರಣ ಅಲ್ಲವೆ.೨೦೦೪ರಲ್ಲಿ ಖರ್ಗೆಯವರಿಗೆ ಬೆಂಬಲ ಕೊಡದಿದ್ದು ಯಾರು.ನಮ್ಮ ಜಿಲ್ಲೆಯ ಶಾಸಕರೊಬ್ಬರು ಅನರ್ಹರಾಗಿದ್ದರು ಅವರ ಪರವಾಗಿ ಸುಪ್ರೀಂಕೋರ್ಟ್ ನಲ್ಲಿ ವಕೀಲರನ್ನು ಕಟ್ಟಿ ಇವತ್ತಿಗೂ ರಾಜಕೀಯ ಮಾಡಲು ಅವಕಾಶ ಕೊಟ್ಟಿದ್ದು ಕುಮಾರಸ್ವಾಮಿಯವರು.
ಅದನ್ನು ನೆನೆಯದೆ ಕುಮಾರಸ್ವಾಮಿ ಯಾರು ದೇವರಾ ಅಂತಾ ಪ್ರಶ್ನೆ ಮಾಡುವ ಮಳವಳ್ಳಿಯ ಶಾಸಕ ನರೇಂದ್ರಸ್ವಾಮಿ ಜಿಲ್ಲೆಯಲ್ಲಿ ಪಾಳೇಗಾರಿಕೆ ಪ್ರವೃತ್ತಿ ಪ್ರದರ್ಶನ ಒಳ್ಳೇಯದಲ್ಲ ಎಂದರು.
ತಮ್ಮ ಮಾತಿನುದ್ದಕ್ಕು ನರೇಂದ್ರಸ್ವಾಮಿಯವರನ್ನು ತರಾಟಗೆ ತೆಗದುಕೊಂಡ ಅನ್ನದಾನಿ
ದಲಿತ ಪತ್ರಕರ್ತರಿಗೆ ವಾರ್ತಾ ಇಲಾಖೆಯಲ್ಲಿ ಸಿಗುವ ಜಾಹೀರಾತು ಟೆಂಡರ್ ನ್ಮು ಪಡೆಯಲು ತನ್ನ ಹೆಂಡತಿ ಹೆಸರಿನಲ್ಲಿ ಒಂದು ಬೇನಾಮಿ ಕಂಪನಿ ಹುಟ್ಟು ಹಾಕಿ ಒಂದು ಕೋಟಿ ಪಡೆದು ಈಗ ಎಂಟು ಕೋಟಿ ಪಡೆಯಲು ಸಿದ್ದವಾಗಿರುವ ನರೇಂದ್ರಸ್ವಾಮಿಯವರ ಪ್ರಯತ್ನದ ಕುರಿತು .ನಾನು ಆಕ್ಷೇಪಣೆ ಕೊಟ್ಟಿದ್ದೇನೆ.
ದಲಿತ ಪತ್ರಕರ್ತರ ದುಡ್ಡು ಲಪಟಾಯಿಸಲು ಹೊರಟಿದ್ದಿಯಲ್ಲ ಈ ಕುರಿತು ಉತ್ತರಿಸಬೇಕು.ಈಗ ಮಳವಳ್ಳಿಯ ಜನ ಪರಿತಪಿಸುತ್ತಿದ್ದಾರೆ.ಖರ್ಗೆಯವರು ಸಿದ್ದರಾಮಯ್ಯನವರ ಮುಖ ನೋಡಿ ಮತ ಕೊಟ್ಟಿದ್ದಾರೆ ವಿನಾ ನಿನ್ನ ಮುಖನೋಡಿ ಅಲ್ಲ ಎಂದು ನರೇಂದ್ರ ಸ್ವಾಮಿಯನ್ನು ಜರಿದರು.