Wednesday, November 6, 2024
spot_img

ನೀತಿ ಸಂಹಿತೆ ಜಾರಿಯಲ್ಲಿದ್ದರು ಮಂಡ್ಯದಲ್ಲಿ ಅಕ್ರಮ ಮದ್ಯ ಮಾರಾಟ:ಕರುನಾಡ ಸೇವಕರ ಗಂಭೀರ ಆರೋಪ

ಅಕ್ರಮ ಮದ್ಯ ಸರಬರಾಜು: ಜಿಲ್ಲಾಡಳಿತ ಮೌನ

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಡಾಬಾ, ರೆಸ್ಟೋರೆಂಟ್‌ಗಳಲ್ಲಿ ಅಕ್ರಮ ಮದ್ಯ ಸರಬರಾಜು: ಕರುನಾಡ ಸೇವಕರು ಸಂಘಟನೆ ಗಂಭೀರ ಆರೋಪ

ಏಪ್ರಿಲ್ 26ರಂದು ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣೆಗಳು ಜರುಗುತ್ತಿದ್ದು ಕಟ್ಟುನಿಟ್ಟಿನ ನೀತಿಸಂಹಿತೆ ಜಾರಿಯಲ್ಲಿದ್ದರೂ ವಿವಿಧ ರಾಜಕೀಯ ಪಕ್ಷಗಳು ಮತದಾರರನ್ನು ಮದ್ಯದ ಆಮಿಷವೊಡ್ಡಿ ಸೆಳೆಯಲು ಪ್ರಯತ್ನಿಸುತ್ತಿವೆ. ಇದರ ಭಾಗವಾಗಿ ಮಂಡ್ಯ ಲೋಕಸಭಾ ಕ್ಷೇತ್ರದ ಎಂಟು ತಾಲ್ಲೂಕುಗಳಲ್ಲಿ ಪ್ರಮುಖ ಮಾಂಸಹಾರಿ ರೆಸ್ಟೋರೆಂಟ್ ಮತ್ತು ಡಾಬಾಗಳಲ್ಲಿ ಗ್ರಾಹಕರಿಗೆ ಅಕ್ರಮವಾಗಿ ಮದ್ಯ ಪೂರೈಕೆ ಮಾಡಲಾಗುತ್ತಿದೆ. ಜಿಲ್ಲಾಡಳಿತ ಶೀಘ್ರ ಕ್ರಮ ಜರುಗಿಸಬೇಕು ಎಂದು ಕರುನಾಡ ಸೇವಕರು ಸಂಘಟನೆಯ ಗೌರವಾಧ್ಯಕ್ಷ ಎಂ.ಬಿ.ನಾಗಣ್ಣಗೌಡ ಆರೋಪಿಸಿದ್ದಾರೆ.

ಮಂಡ್ಯದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಅಬಕಾರಿ ಕಾಯ್ದೆಗಳ ಪ್ರಕಾರ ಇದು ನಿಷೇಧವಾಗಿದ್ದರೂ ಅಕ್ರಮ ಮದ್ಯ ಸರಬರಾಜು ಮಂಡ್ಯ ಜಿಲ್ಲೆಯಲ್ಲಿ ವ್ಯಾಪಕವಾಗಿದೆ. ಇದಲ್ಲದೆ ನಿಯಮಾನುಸಾರ ವೈನ್‌ಸ್ಟೋರ್‌ಗಳಲ್ಲಿ ಮದ್ಯಸೇವನೆಗೆ ಅವಕಾಶವಿರದಿದ್ದರೂ ಇಲ್ಲಿಯೂ ಸಹ ಅವಧಿ ಮೀರಿದರೂ ಮದ್ಯಸೇವನೆಗೆ ಅವಕಾಶ ಕಲ್ಪಿಸಲಾಗಿದೆ. ಇದೆಲ್ಲದರ ಪರಿಣಾಮ ಚುನಾವಣೆಯು ನಿಷ್ಪಕ್ಷಪಾತ ಹಾಗೂ ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಯುವ ಸಾಧ್ಯತೆಗಳು ಕಡಿಮೆ ಇವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ ಅಕ್ರಮ ಮದ್ಯ ಸರಬರಾಜಿಗೆ ಅವಕಾಶ ನೀಡಿರುವ ಡಾಬಾ, ರೆಸ್ಟೋರೆಂಟ್, ಹೊಟೇಲ್‌ಗಳ ಮೇಲೆ ಅಗತ್ಯ ಕ್ರಮ ಜರುಗಿಸಬೇಕಾಗಿ ಮತ್ತು ವೈನ್‌ಸ್ಟೋರ್‌ಗಳಲ್ಲಿ ನಿರ್ದಾಕ್ಷೀಣ್ಯವಾಗಿ ಮದ್ಯಸೇವನೆಯನ್ನು ಹತ್ತಿಕ್ಕುವಂತೆ ಅವರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ. ತಪ್ಪಿದಲ್ಲಿ ಜಿಲ್ಲಾಡಳಿತಕ್ಕೆ ಮತ್ತು ಚುನಾವಣಾಧಿಕಾರಿಗಳಿಗೆ ಇದನ್ನು ಜಾರಿ ಮಾಡುವಲ್ಲಿ ಸಾಧ್ಯವಾಗದಿದ್ದ ಪಕ್ಷದಲ್ಲಿ ಅನಿರ್ಧಾಷ್ಟಾವಧಿಗೆ ಚುನಾವಣೆ ಮುಂದೂಡುವಂತೆ ಸಂಘಟನೆಯ ಪರವಾಗಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.ಅಬಕಾರಿ ಜಿಲ್ಲಾಧಿಕಾರಿ ಎ ರವಿಶಂಕರ್ ಮನವಿ ಸ್ವೀಕರಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು

 

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!