Saturday, July 27, 2024
spot_img

ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದ ಅಪರಾಧಿಗೆ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ

 

ಮಂಡ್ಯ :- ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಜೈಲು ಶಿಕ್ಷೆ ವಿಧಿಸಿ ಮಂಡ್ಯದ ಅಧಿಕ ಸತ್ರ ಮತ್ತು ತ್ವರಿತಗತಿ 2ನೇ ನ್ಯಾಯಾಲಯದ ವಿಶೇಷ ನ್ಯಾಯಾಧೀಶೆ ನಾಗಜ್ಯೋತಿ.ಕೆ.ಎ ತೀರ್ಪು ನೀಡಿದ್ದಾರೆ.
ತಮಿಳುನಾಡು ಮೂಲದ ಬೆಂಗಳೂರಿನ ಪೀಣ್ಯ 2ನೇ ಹಂತದ ಚೇತನ್ ಸರ್ಕಲ್ ಬಳಿ ಇರುವ ಸ್ವಾತಿ ಬಾರ್ ಪಕ್ಕದ ನಿವಾಸಿ ಅಣ್ಣಾಮಲೈ ರ ಮಗ ವೆಂಕಟೇಶ್ ಜೈಲು ಶಿಕ್ಷೆಗೆ ಗುರಿಯಾದವರಾಗಿದ್ದಾರೆ.
ಅಪ್ರಾಪ್ತ ಬಾಲಕಿ ಮೇಲೆ ದೌರ್ಜನ್ಯ ಎಸಗಿದ ಹಿನ್ನೆಲೆಯಲ್ಲಿ ಆರೋಪಿಗೆ 21 ವರ್ಷ ಕಾರಾಗೃಹ ಶಿಕ್ಷೆ ಹಾಗೂ 1,18,000 ದಂಡ ವಿಧಿಸಲಾಗಿದೆ.
2020ರಲ್ಲಿ 14 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿ ಕೆ.ಆರ್.ಪೇಟೆ ತಾಲ್ಲೂಕು, ಕೊಡಗಹಳ್ಳಿ ಗ್ರಾಮಕ್ಕೆ ಹೋಗಲು ಬೆಂಗಳೂರಿನ ಗೋವರ್ಧನ ಬಸ್ ನಿಲ್ದಾಣದಿಂದ ಕೆ.ಎಸ್.ಆರ್.ಟಿ.ಸಿ. ಬಸ್ ಹತ್ತಿಕೊಂಡಿದ್ದು, ಇದೇ ಬಸ್ ಗೆ ವೆಂಕಟೇಶ್ ಸಹ ಹತ್ತಿಕೊಂಡಿದ್ದು ನಂತರ ಆರೋಪಿಯು ಬಾಲಕಿ ಕುಳಿತಿದ್ದ ಸೀಟ್‌ ಗೆ ಹೋಗಿ ಬಾಲಕಿಯ ಪಕ್ಕ ಕುಳಿತುಕೊಂಡು ಬಾಲಕಿಯನ್ನು ಮಾತನಾಡಿಸಿ ಲೈಂಗಿಕವಾಗಿ ಮುಟ್ಟಿ ದೌರ್ಜನ್ಯವೆಸಗಿರುತ್ತಾನೆ.
ಅದೇ ದಿನ ಮದ್ಯಾಹ್ನ ದ ವೇಳೆ ಪ್ರಕರಣದ ಸಾಕ್ಷಿದಾರರ ಜೊತೆ ಕೆ.ಎಸ್.ಆರ್.ಟಿ .ಸಿ. ಬಸ್ಸಿನಲ್ಲಿ ನಾಗಮಂಗಲ ಟೌನ್‌ಗೆ ಬಂದು ಇಳಿದುಕೊಂಡು, ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿಕೊಂಡು ಬೆಂಗಳೂರಿಗೆ ಕರೆದುಕೊಂಡು ಹೋಗಿ, ನಂತರ ರೈಲಿನಲ್ಲಿ ನಲ್ಲಿ ತಮಿಳುನಾಡು ರಾಜ್ಯದ ಕೊಯಮತ್ತೂರು ಹತ್ತಿರ ಇರುವ ಪುದುಪುದೂರಿಗೆ ಕರೆದುಕೊಂಡು ಹೋಗಿ ಧನಲಕ್ಷ್ಮಿ ನಗರದಲ್ಲಿ ಮನೆಯನ್ನು ಬಾಡಿಗೆಗೆ ತೆಗೆದುಕೊಂಡು ಅಪ್ರಾಪ್ತ ಬಾಲಕಿಯ ಕುತ್ತಿಗೆಗೆ ಹರಿಸಿನ ಕೊನೆ ದಾರವನ್ನು ಕಟ್ಟಿ ಮದುವೆ ಮಾಡಿಕೊಂಡು ಲೈಂಗಿಕ ದೌರ್ಜನ್ಯವೆಸಗಿದ್ದನು.
ಪ್ರಕರಣ ಬೆಳಕಿಗೆ ಬಂದ ನಂತರ ನಾಗಮಂಗಲ ಟೌನ್ ಠಾಣೆಯ ಪೊಲೀಸರು ಪೋಕ್ಸೋ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಎನ್.ಸುಧಾಕರ್ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಮಂಡ್ಯದ ಅಧಿಕ ಸತ್ರ ಮತ್ತು ತ್ವರಿತಗತಿ 2ನೇ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಧೀಶರಾದ ನಾಗಜ್ಯೋತಿ.ಕೆ.ಎ ರವರು ಅಪರಾಧಿ ವೆಂಕಟೇಶ್ ಗೆ ಭಾದಂಸಂ ಕಲಂ 354(ಡಿ) ಮತ್ತು ಪೋಕ್ಸೋ ಕಾಯ್ದೆ ಕಲಂ 12 ಆಡಿಯಲ್ಲಿನ ಅಪರಾಧಕ್ಕೆ 1 ವರ್ಷಗಳ
ಕಠಿಣ ಶಿಕ್ಷೆ ಮತ್ತು 5,000/- ರೂ.ಗಳ ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 3 ತಿಂಗಳ ಸಾದಾ ಶಿಕ್ಷೆ,ಭಾದಂಸಂ ಕಲಂ 363 & 366 ಕಾಯ್ದೆ ಅಡಿಯಲ್ಲಿನ ಅಪರಾಧಕ್ಕೆ 5 ವರ್ಷಗಳ ಕಠಿಣ ಶಿಕ್ಷೆ ಮತ್ತು 10,000/- ರೂ.ಗಳ ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 3 ತಿಂಗಳ ಸಾದಾ ಶಿಕ್ಷೆ ಹಾಗೂ ಭಾದಂಸಂ ಕಲಂ 9 ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಡಿಯಲ್ಲಿನ ಅಪರಾಧಕ್ಕೆ 1 ವರ್ಷಗಳ ಕಠಿಣ ಶಿಕ್ಷೆ ಮತ್ತು 50,000/- ರೂ.ಗಳ ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 8 ತಿಂಗಳ ಸಾದಾ ಶಿಕ್ಷೆ ಮತ್ತು ಭಾದಂಸಂ ಕಲಂ 376(3) ಮತ್ತು ಪೋಕೋ ಕಾಯ್ದೆ ಕಲಂ 6 ಅಡಿಯಲ್ಲಿನ ಅಪರಾಧಕ್ಕೆ 21 ವರ್ಷಗಳ ಕಠಿಣ ಶಿಕ್ಷೆ ಮತ್ತು 50,000 ರೂ.ಗಳ ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 5 ವರ್ಷ ಸಾದಾ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ
ವಿಶೇಷ ಸರ್ಕಾರಿ ಅಭಿಯೋಜಕರಾದ ಶ ಹೆಬ್ಬಕವಾಡಿ ನಾಗರಾಜು ಸಂತ್ರಸ್ತೆಯ ಪರ ವಾದ ಮಂಡಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!