ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗೆ ೨೧ ವರ್ಷ ಜೈಲು
ಮಂಡ್ಯ: ಮಾ೨೧.ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ ೨೧ ವರ್ಷ ಜೈಲು ಶಿಕ್ಷೆ ಹಾಗೂ ೫೦ ಸಾವಿರು ರೂ. ದಂಡ ವಿಧಿಸಿ ಅಧಿಕ ಸೆಷೆನ್ಸ್ ಮತ್ತು ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎ.ನಾಗಜ್ಯೋತಿ ತೀರ್ಪು ನೀಡಿದ್ದಾರೆ.
ನಗರದ ಹಾಲಹಳ್ಳಿ ಬಡಾವಣೆಯ ಲೇಬರ್ ಕಾಲನಿ ಮುಸ್ಲಿಂ ಬ್ಲಾಕ್ ನಿವಾಸಿ ಗೌಸ್ ಪಾಷಾ ಅವರ ಪುತ್ರ ಸಲ್ಮಾನ್ ಪಾಷಾ ಶಿಕ್ಷೆಗೆ ಒಳಗಾಗಿರುವ ಆರೋಪಿ.
ಸಲ್ಮಾನ್ ಪಾಷ ತನ್ನದೇ ಬಡಾವಣೆಯ ನಿವಾಸಿ ಅಪ್ರಾಪ್ತ ಬಾಲಕಿ. ಶಾಲೆಗೆ ಮತ್ತು ಟ್ಯೂಷನ್‌ಗೆ ಹೋಗುವಾಗ ಹಿಂಬಾಲಿಸಿಕೊಂಡು ಹೋಗಿ ತಿಂಡಿ ತಿನಿಸು ಕೊಟ್ಟು ಮಾತನಾಡಿಸುತ್ತಿದ್ದ ಎನ್ನಲಾಗಿದೆ.
ಜುಲೈ ೨ ೨೦೨೨ರಂದು ಬಾಲಕಿ ತನ್ನ ಮನೆಯ ರೂಂನಲ್ಲಿ ಮಲಗಿದ್ದಾಗ ಆರೋಪಿ ಸಲ್ಮಾನ್ ಪಾಷ ಆಕೆಯನ್ನು ಪುಸಲಾಯಿಸಿ ತನ್ನ ಮನೆಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂಬುದು ಆರೋಪ.
ಈ ಸಂಬಂಧ ಭಾರತೀಯ ದಂಡ ಸಂಹಿತೆ ೩೫೪(ಡಿ), ೩೬೬, ೩೭೮(ಎಬಿ), ೩೭೬ (೨)(ಎನ್) ಐಪಿಸಿ ಮತ್ತು ಕಲಂ ೬, ೧೨ ಪೋಕ್ಸೋ ಕಾಯಿದೆ ಅಡಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿದ ಅಂದಿನ ಇನ್ಸ್ಪೆಕ್ಟರ್ ಕೃಷ್ಣ ಎಸ್.ಕೆ. ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣ ಕುರಿತಂತೆ ವಾದ ವಿವಾದ ಆಲಿಸಿದ ವಿಶೇಷ ಅಧಿಕ ಸತ್ರ ಮತ್ತು ತ್ವರಿತಗತಿ ೨ನೇ ನ್ಯಾಯಾಲಯದ ವಿಶೇಷ ನ್ಯಾಯಾಧೀಶೆ ನಾಗಜ್ಯೋತಿ.ಕೆ.ಎ. ಅವರು ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಸಲ್ಮಾನ್ ಪಾಷಾಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ವಿಶೇಷ ಸರಕಾರಿ ಅಭಿಯೋಜಕ ಹೆಬ್ಬಕವಾಡಿ ನಾಗರಾಜು ಸಂತ್ರಸ್ತ ಯುವತಿಯ ಪರ ವಾದ ಮಂಡಿಸಿದ್ದರು.
—