Tuesday, October 15, 2024
spot_img

ಮಂಡ್ಯ:ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಗೆಲ್ಲಿಸಲು ಚಲುವರಾಯಸ್ವಾಮಿ ಕರೆ

ಮಂಡ್ಯ: ಕಾಂಗ್ರೆಸ್ ಅಭ್ಯರ್ಥಿ ಎನ್.ಮರಿತಿಬ್ಬೇಗೌಡರು ಈಗಾಗಲೇ ನಾಲ್ಕು ಬಾರಿ ಗೆದ್ದಿದ್ದಾರೆ. ದಕ್ಷಿಣ ಶಿಕ್ಷಕರ ಕ್ಷೇತ್ರದ ನಾಲ್ಕು ಜಿಲ್ಲೆಗಳಲ್ಲಿ ಹಾಸನ, ಮೈಸೂರು, ಚಾಮರಾಜನಗರದಲ್ಲಿ ಪಕ್ಷದ ಪರಿಸ್ಥಿತಿ ತುಂಬಾ ಚೆನ್ನಾಗಿದೆ. ಮಂಡ್ಯ ತವರು ಜಿಲ್ಲೆಯಲ್ಲಿ ನೀವೆಲ್ಲರೂ ಸಹ ಸ್ವಲ್ಪ ಹೆಚ್ಚಿನ ಶ್ರಮ ವಹಿಸಿ ಹೆಚ್ಚು ಲೀಡ್ ಕೊಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಕಾಂಗ್ರೆಸ್ ಮುಖಂಡರಿಗೆ ಕರೆ ನೀಡಿದರು.

ನಗರದ ಕರ್ನಾಟಕ ಸಂಘದಲ್ಲಿ ಆಯೋಜನೆಗೊಂಡಿದ್ದ ವಿವಿಧ ಬ್ಲಾಕ್ ಘಟಕಗಳ ಮುಂಚೂಣಿ ನಾಯಕರನ್ನುದ್ದೇಶಿಸಿ ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿನ ಕುರಿತು ಅವರು ಮಾತನಾಡಿದರು.

ಮಂಡ್ಯದಲ್ಲಿ ೧೬೦೦, ಮದ್ದೂರಿನಲ್ಲಿ ೯೦೦, ನಾಗಮಂಗಲದಲ್ಲಿ ೪೫೦ ಜನ ಮತದಾರರಿದ್ದಾರೆ. ಉಳಿದ ತಾಲೂಕಿನ ಮತದಾರರನ್ನು ಭೇಟಿ ಮಾಡಲು ಕಷ್ಟವೇನಿಲ್ಲ. ಶಾಲಾ ಕಾಲೇಜು ತೆರೆದ ನಂತರ ಮತ್ತೊಮ್ಮೆ ಭೇಟಿ ನೀಡಿ. ಕೊನೆಗೆ ಅಂತಿಮವಾಗಿ ಮತದಾನದ ದಿನ ಮತಕೇಂದ್ರದ ಬಳಿ ಕನಿಷ್ಟ ೧೦೦ ಜನ ಬೆಳಿಗ್ಗೆಯಿಂದ ಸಾಯಂಕಾಲದವರೆಗೂ ಇದ್ದು ಮತದಾರನ್ನು ಮನವೊಲಿಸುವ ಕೆಲಸ ಮಾಡಬೇಕು.ಇದು ನಿಮ್ಮ ಜವಾಬ್ದಾರಿ ಎಂದು ಎಚ್ಚರಿಸಿದರು.

ಮರಿತಿಬ್ಬೇಗೌಡ ಅವರು ಅವರದೇ ಆದಂತಹ ಒಂದು ತಂಡ ಇದೆ. ಗಂಭೀರವಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಪಕ್ಷದ ಚಿಹ್ನೆ ಕೊಟ್ಟು ನಿಲ್ಲಿಸಿದ್ದೇವೆ.ಮರಿತಿಬ್ಬೇಗೌಡ ಆಯ್ಕೆಯಾದರೆ ದಕ್ಷಿಣ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಕಾಂಗ್ರೆಸ್‌ನಿಂದ ಗೆದ್ದಿದ್ದಾರೆ ಎಂಬ ಹೆಸರು ನಮಗೂ ಬರುತ್ತದೆ ಎಂದರು.

ಚುನಾವಣೆ ಬಗ್ಗೆ ಒಬ್ಬೊಬ್ಬರು ಒಂದೊಂದು ದಿಕ್ಕಿನಲ್ಲಿ ಮಾತನಾಡುತ್ತಾರೆ. ಆದರೆ ಮರಿತಿಬ್ಬೇಗೌಡರು ಈ ಕ್ಷೇತ್ರದಲ್ಲಿ ಸಮರ್ಥರಿದ್ದಾರೆ. ನಮ್ಮ ಪಕ್ಷ ಮತ್ತು ಅವರ ಒಡನಾಟದಲ್ಲಿ ಇರುವ ಮತದಾರರು ಬಹಳಷ್ಟು ಹೋರಾಟ ಮಾಡುತ್ತಿದ್ದಾರೆ.

ಮರಿತಿಬ್ಬೇಗೌಡರು ಮೊದಲು ಕಾಂಗ್ರೆಸ್‌ನಲ್ಲಿದ್ದು ಜನತಾದಳಕ್ಕೆ ಹೋಗಿ ಮತ್ತೆ ಕಾಂಗ್ರೆಸ್ಸಿಗೆ ಬಂದಿದ್ದಾರೆ. ಅವತ್ತಿನ ಮದ್ದೂರು ಮತ್ತು ಮಳವಳ್ಳಿಯ ರಾಜಕೀಯ ಪರಿಸ್ಥಿತಿಯಲ್ಲಿ ವ್ಯತ್ಯಾಸ ಆಯ್ತು. ಈಗ ಅವರಿಗೆ ಹಾಗೂ ಕೀಲಾರ ಜಯರಾಮಣ್ಣ ಅವರಿಗೆ ಜ್ಞಾನೋದಯವಾಯಿತು. ನಾವು ಹೋದಾಗ ಹುಚ್ಚರು ತಲೆ ಕೆಟ್ಟಿದೆ ಅಂತ ಮಾತನಾಡಿದರು. ಈಗ ಜ್ಞಾನೋದಯ ಆಗಿ ಅವರೂ ಸಹ ಇವತ್ತು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಹೆಸರು ತರುವಲ್ಲಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕತ್ವಕ್ಕೆ ಹಾಗೂ ಕಾಂಗ್ರೆಸ್ ಪಕ್ಷದ ವಿಚಾರಧಾರೆಗಳಿಗೆ ಬದ್ಧರಾಗಿ ಕೆಲಸ ಮಾಡ್ತಾರೆ ಎಂದರು.

ಈ ಕ್ಷೇತ್ರದಲ್ಲಿ ಶ್ರೀಕಂಠೇಗೌಡರಿಗೆ ಒಂದಷ್ಟು ಸಂಬಂಧ, ಒಡನಾಟ ಎಲ್ಲಾ ಚೆನ್ನಾಗಿತ್ತು. ಪ್ರಾಂಶುಪಾಲರಾಗಿಯೂ ಕೆಲಸ ಮಾಡಿದ್ದರು. ಆದರೆ ಇವತ್ತು ಬೇರೆ ಕ್ಷೇತ್ರದವರಿಗೆ ಟಿಕೆಟ್ ನೀಡಿದ್ದಾರೆ. ಯಾವುದೋ ಒಂದು ಶಕ್ತಿ ಮೇಲೆ ಇವತ್ತು ತೀರ್ಮಾನ ಆಗಿದೆ. ಜೆಡಿಎಸ್ ಶಕ್ತಿ ಮೇಲೆ ನಿರ್ಧಾರ ಆಗಿದೆ. ದುಡ್ಡಿಲ್ಲದೇ ಚುನಾವಣೆ ಆಗಲ್ಲ ಅಂತ ಎಲ್ಲ ವಿಚಾರದಲ್ಲೂ ಎಲ್ಲಾ ಸಂದರ್ಭದಲ್ಲೂ ಹೇಳಲು ಬರುವುದಿಲ್ಲ. ಮಧು ಮಾದೇಗೌಡರು ೨೩,೦೦೦ ಲೀಡಲ್ಲಿ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಗೆದ್ದಿದ್ದಾರೆ ಎಂದು ನೆನಪಿಸಿದರು.

ಕಾಂಗ್ರೆಸ್‌ನವರ ಧ್ವನಿ ಕುಗ್ಗಿದೆಯೇ? : ಇವತ್ತು ಒಂದು ಸದೃಢವಾದ ಕಾಂಗ್ರೆಸ್ಸನ್ನು ಮಂಡ್ಯ ಜಿಲ್ಲೆಯಲ್ಲಿ ಕಟ್ಟುವಂತ ಕೆಲಸ ಮಾಡಿದ್ದೇವೆ. ಲೋಕಸಭಾ ಫಲಿತಾಂಶ ನೂರಕ್ಕೆ ನೂರರಷ್ಟು ನಮ್ಮ ಪರ ಬರುವ ವಿಶ್ವಾಸ ಇದೆ.ಆದರೂ ನಿಮಗೆ ದನಿ ಕಡಿಮೆ. ನಿಮಗೆ ಎಲ್ಲೋ ಒಂದು ಕಡೆ ಭಯ ಇರಬಹುದು. ೧೦೦ ಜನ ಇದ್ದರೂ ದನಿ ಕಡಿಮೆ ಜೆಡಿಎಸ್ ನವರು ೪ ಜನ ಇದ್ದರೂ ಸ್ವಲ್ಪ ಹೆಚ್ಚು ದನಿ ಮಾಡ್ತಾರೆ. ಏನೇ ಆಗಲಿ ಫಲಿತಾಂಶ ಕಾಂಗ್ರೆಸ್ ಪರವಾಗಿ ಇರುತ್ತೆ.ಲೋಕಸಭಾ ಅಭ್ಯರ್ಥಿ ಸ್ಟಾರ್ ಚಂದ್ರು ಗೆಲ್ಲುತ್ತಾರೆ.ಪಕ್ಷದ ಕೆಲಸವನ್ನು ಆತ್ಮವಿಶ್ವಾಸದಿಂದ ಮಾಡಿ ಎಂದರು.

ನೌಕರರಿಗೆ ಪೇ ಕಮಿಷನ್ ಜಾರಿಗೊಳಿಸಬೇಕಾಗಿದೆ ಮತ್ತು ಎನ್‌ಪಿಎಸ್ ಜಾರಿಗೊಳಿಸಬೇಕಿದೆ.ಸರ್ಕಾರ ನೌಕರರ ಪರವಾಗಿದೆ. ಸಾರ್ವಜನಿಕರ ಪರವಾಗಿದೆ. ಬರಕ್ಕೆ ಸ್ಪಂದಿಸಿದ್ದೇವೆ ಎಂದರು.

ಸರ್ಕಾರದ ಸಾಧನೆ ಮಂದಿಟ್ಟು ಮತ ಕೇಳಿ-ಸಿ.ಡಿ.ಗಂಗಾಧರ್
ಹಿಂದೆ ಮರಿತಿಬ್ಬೇಗೌಡರು ಗೆದ್ದಾಗ ಅವರ ಸರ್ಕಾರ ಇರಲಿಲ್ಲ. ಆದರೆ ಈಗ ನಮ್ಮ ಸರ್ಕಾರ ಇದೆ.ನಾಯಕರ ಹೋರಾಟ ಇದೆ. ಶಿಕ್ಷಕರಿಗೆ, ಸಾರ್ವಜನಿಕರಿಗೆ ಒಳ್ಳೆಯ ಕಾರ್ಯಕ್ರಮಗಳನ್ನು ಕೊಟ್ಟಿದ್ದೇವೆ. ಇದೆಲ್ಲದರ ಆಧಾರದ ಮೇಲೆ ಜಿಲ್ಲೆಯ ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸ ಮಾಡಬೇಕು. ಇಂದಿನಿಂದಲೇ ಪ್ರಚಾರ ಪ್ರಾರಂಭಿಸಬೇಕು. ಎಲ್ಲರೂ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಬಿಜೆಪಿ-ಜೆಡಿಎಸ್ ಏನೇ ಹೊಂದಾಣಿಕೆ ಮಾಡಿಕೊಂಡಿದ್ದರೂ ಗೆಲ್ಲುವ ಅವಕಾಶ ನಮಗಿದೆ. ಮರೆತಿಬ್ಬೇಗೌಡರು ಕಳೆದ ನಾಲ್ಕು ಅವಧಿಯಲ್ಲಿ ಶಿಕ್ಷಕರ ಸಂಪರ್ಕ ಇಟ್ಟುಕೊಂಡು ಸ್ಪಂದಿಸುವ ಕೆಲಸ ಮಾಡಿದ್ದಾರೆ. ಸರ್ಕಾರದ ಸಾಧನೆಗಳನ್ನು ಮತದಾರರಿಗೆ ತಿಳಿಸಿ ನೀವೇ ಅಭ್ಯರ್ಥಿ ಎಂದು ತಿಳಿದು ಕೆಲಸ ಮಾಡಿ ಎಂದು ಸೂಚಿಸಿದರು.

ಮಾಜಿ ಶಾಸಕ ಹೆಚ್.ಬಿ.ರಾಮು ಸಮಾರಂಭದಲ್ಲಿ ಶಾಸಕ ರವಿಕುಮಾರ್,ಮಾಜಿ ಶಾಸಕ ಎಂ.ಶ್ರೀನಿವಾಸ್,ಅಪ್ಪಾಜಿಗೌಡ, ಕೆಆರ್ ಪೇಟೆ ಬಿ.ಎಲ್.ದೇವರಾಜು, ಹೆಚ್.ಕೆ.ರುದ್ರಪ್ಪ,ಅಂಜನಾ ಶ್ರೀಕಾಂತ್,ಸಿ.ಕೆ.ನಾಗರಾಜು,ಅಶೋಕ್ ಮುಂತಾದವರಿದ್ದರು.

ಮಾಜಿ ಶಾಸಕ ಹೆಚ್.ಬಿ.ರಾಮು,
ಮಾತನಾಡಿದರು.
ಸಮಾರಂಭದಲ್ಲಿ ಶಾಸಕ ರವಿಕುಮಾರ್,ಮಾಜಿ ಶಾಸಕ ಎಂ.ಶ್ರೀನಿವಾಸ್,ಅಪ್ಪಾಜಿಗೌಡ,ಕೀಲಾರ ಜಯರಾಂ, ಕೆಆರ್ ಪೇಟೆ ಬಿ.ಎಲ್.ದೇವರಾಜು, ಹೆಚ್.ಕೆ.ರುದ್ರಪ್ಪ,ಅಂಜನಾ ಶ್ರೀಕಾಂತ್,ಸಿ.ಕೆ.ನಾಗರಾಜು,ಬೆಳ್ಳೂರು ಶಿವರಾಂ ಅಶೋಕ್ ಮುಂತಾದವರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!