Tuesday, October 15, 2024
spot_img

ಮಂಡ್ಯದಲ್ಲಿ ಕೈ ಅಭ್ಯರ್ಥಿಯ “ಮನೆ ಪಾಲಿಟಿಕ್ಸ್!

ಮಂಡ್ಯ:ಕೈ ಅಭ್ಯರ್ಥಿಯ ಮನೆ ಪಾಲಿಟಿಕ್ಸ್!

ಮಂಡ್ಯ ಅಂದ್ರೆ ಇದೊಂಥರಾ ರಾಜಕೀಯವನ್ನೆ ಉಸಿರಾಡುವ ಜಿಲ್ಲೆ.ರಾಜಕೀಯ ಅಂದ್ರೆ ಕೆಟ್ಟದ್ದು ಅಂತಲ್ಲ.ರಾಜಕೀಯದ ಬಗ್ಗೆ ಸದಾ ಚರ್ಚಿಸುವ ನಿಲ್ಲದ ಆಸಕ್ತಿಯೊಂದನ್ನು ರಾಜಕೀಯದೆಡೆಗೆ ಇಟ್ಟುಕೊಂಡಿರುವ ಜಿಲ್ಲೆ.ಇಲ್ಲಿ ಏನು ಘಟಿಸಿದರು ಅದನ್ನು ರಾಜಕೀಯದ ಕನ್ನಡಿಯಲ್ಲಿ ಇಟ್ಟು ನೋಡುವ ಛಾಳಿ ಇದೆ.ಈ ಲೆಕ್ಕಕ್ಕೆ ಈಗ ಮಂಡ್ಯ ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿಯ “ಮನೆ ಪಾಲಿಟಿಕ್ಸ್ ಹೊಸ ಸೇರ್ಪಡೆಯಷ್ಟೆ.ಮಂಡ್ಯದಲ್ಲಿ ಮನೆ ಮಾಡಿ ರಾಜಕೀಯ ಮಾಡಿದವರ ಪರಂಪರೆ ದೊಡ್ಡದಿದೆ.ಆಗೆಲ್ಲ ಇಲ್ಲಿನ ರೈತ ಹೋರಾಟಗಳಿಂದ ಸಾರ್ವಜನಿಕ ಬದುಕಿನಿಂದಲೆ ರಾಜಕೀಯ ನಾಯಕರು ಹುಟ್ಟುತ್ತಿದ್ದರು.ವಿಧಾನಸಭಾ ಅಭ್ಯರ್ಥಿಗಳು ಮಂಡ್ಯದಲ್ಲಿ ಮನೆ ಮಾಡುವುದನ್ನು ಮತ್ತೊಮ್ಮೆ ಚರ್ಚಿಸೋಣಾ.ಈಗ ಲೋಕಸಭಾ ಕೈ ಅಭ್ಯರ್ಥಿ ಸ್ಟಾರ್ ಚಂದ್ರು ನಿನ್ನೆ ದಿನ ಮಂಡ್ಯದಲ್ಲಿ ಮನೆ ಮಾಡಿದ ಕುರಿತು ಸಾಕಷ್ಟು ಚರ್ಚೆಗಳೆದ್ದಿವೆ.

ಮಾಜಿ ಸಂಸದ ದಿವಂಗತ ಜಿ ಮಾದೇಗೌಡರು ೯೦ರ ದಶಕದಲ್ಲಿ ಮಂಡ್ಯದಲ್ಲಿ ಸ್ವಂತ ಮನೆ ಹೊಂದಿದ್ದು ಬಿಟ್ಟರೆ ನಂತರ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದು ಬಿಟ್ಟರೆ ನಂತರ ಯಾರೊಬ್ಬರಿಗೂ ಮಂಡ್ಯದಲ್ಲಿ ಮನೆ ಮಾಡಿ ರಾಜಕೀಯ ಮಾಡುವ ಅವಶ್ಯವೆ ಕಾಣಲಿಲ್ಲ.ಮಂಡ್ಯದಲ್ಲಿ ಮನೆ ಮಾಡುವುದು ಎಂದರೆ ಮಂಡ್ಯದಲ್ಲಿ ಇರುವುದು ಮಂಡ್ಯದ ಜನರೊಂದಿಗೆ ಉಳಿದು ಅವರ ಕಷ್ಟನಷ್ಟಕ್ಕೆ ಸ್ಪಂದಿಸುವುದು ಎಂದರ್ಥ.(ಅಷ್ಟಕ್ಕು ಮಂಡ್ಯದಲ್ಲಿ ಮನೆ ಮಾಡಿದವರು ಎಷ್ಟರಮಟ್ಟಿಗೆ ಸ್ಪಂದಿಸಿದರು ಎಂಬುದು ಬೇರೆಯದೆ ಮಾತು)
ಮಾದೇಗೌಡರು ಶಾಸಕರು ಸಂಸದರು ಸಚಿವರು ಆಗಿದ್ದವರು.ವಕೀಲಿಕೆ ಮೂಲಕ ಮಂಡ್ಯದ ಬದುಕಿನಲ್ಲಿ ಮಿಳಿತಗೊಂಡಿದ್ದವರು.

ನಂತರ ೧೯೯೬ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಜ್ಯಾದಳದ ಕೆ ಆರ್ ಪೇಟೆ ಕೃಷ್ಣ ಸ್ವತಃ ಕೆ ಆರ್ ಪೇಟೆಯಲ್ಲಿ ಸ್ವಂತ ಮನೆ ಹೊಂದಿದ್ದರು.

ಆನಂತರ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ ಚಿತ್ರನಟ ಅಂಬರೀಶ್ ಗೆ ಮಂಡ್ಯದಲ್ಲಿ ಮನೆ ಮಾಡುವಂತೆ ಯಾರು ಕೇಳಲೆಯಿಲ್ಲ.ಅವರ ಆಪ್ತ ಅಮರಾವತಿ ಚಂದ್ರಶೇಖರರ ಮನೆಯೆ ಅವರ ಮನೆಯಾಗಿ ಹೋಗಿತ್ತು.

ನಂತರ ಬಂದ ಚಲುವರಾಯಸ್ವಾಮಿಗೂ ಸಹ ಮಂಡ್ಯದಲ್ಲಿ ಉಳಿದು ರಾಜಕೀಯ ಮಾಡುವ ಅನಿವಾರ್ಯತೆ ಸೃಷ್ಟಿಯಾಗಲಿಲ್ಲ.

ನಂತರ ನಡೆದ ಉಪಚುನಾವಣೆಯಲ್ಲಿ ಆಯ್ಕೆಯಾದ ಚಿತ್ರನಟಿ ರಮ್ಯ ತಾನು ಮಂಡ್ಯದಲ್ಲಿ ಉಳಿದುಕೊಳ್ಳಲು ತೊಟ್ಟಿ ಮನೆಯೊಂದು ಬೇಕೆಂದು ಒಂದಿಷ್ಟು ದಿನ ಕಾಲಪಯಾನ ಮಾಡಿ ಕಡೇಗೆ ಮಂಡ್ಯದ ವಿದ್ಯಾನಗರದಲ್ಲಿ ಚನ್ನಪಟ್ಟಣದ ಮಾಜಿ ಶಾಸಕ ಸಾದತ್ ಆಲೀಖಾನರ ಮನೆ ಬಾಡಿಗೆಗೆ ಹಿಡಿದು ಬೆಂಗಳೂರಿನಿಂದ ಮಂಡ್ಯಕ್ಕೆ ಸವಾರಿ ಮಾಡುವುದರಲ್ಲೆ ಅವರ ಅವಧಿ ಮುಗಿಯಿತು.

 

ನಂತರ ಬಂದ ಪಾಂಡವಪುರದ ಸಿಎಸ್ ಪುಟ್ಟರಾಜು ಸಹ ಬಂದೀಗೌಡ ಬಡಾವಣೆಯ ಬಾಡಿಗೆ ಮನೆ ಮೊರೆ ಹೋದರು.ವಾರಕೊಮ್ಮೆ ಮಂಡ್ಯದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕರಿಗೆ ಸಿಗುವುದಾಗಿ ಹೇಳಿದ ಅವರ ಮಾತು ಘೋಷಣೆಗೆ ಸಿಮೀತವಾಯಿತು.


ನಂತರ ನಡೆದ ಉಪಚುನಾವಣೆಯಲ್ಲಿ ಜ್ಯಾದಳದಿಂದ ಆಯ್ಕೆಯಾದ ಎಲ್ ಆರ್ ಶಿವರಾಮೇಗೌಡರಿಗೆ ಬಾಡಿಗೆಗೆ ಮನೆ ಹಿಡಿಯುವ ಅವಶ್ಯವು ಕಂಡುಬರಲಿಲ್ಲ.

೨೦೧೯ರಲ್ಲಿ ಪಕ್ಷೇತ್ತರವಾಗಿ ಆಯ್ಕೆಯಾದ ಸುಮಲತಾ ಅಂಬರೀಶ್ ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿ ಬಾಡಿಗೆಗೆ ಮನೆ ಮಾಡಿದರಾದರೂ ಬಾಡಿಗೆ ಮನೆಯಲ್ಲುಳಿದು ಜನರ ಕಷ್ಟ ಆಲಿಸಿದ್ದು ಅಷ್ಟಕಷ್ಟೆ.ಅವರದು ಸಹ ಬೆಂಗಳೂರು ಟೂ ಮಂಡ್ಯ ಸವಾರಿ.ಭವಿಷ್ಯದಲ್ಲಿ ಮಂಡ್ಯ ಹಾಗೂ ಮದ್ದೂರು ವಿಧಾನಸಭಾ ಕ್ಷೇತ್ರದ ರಾಜಕೀಯ ಭವಿಷ್ಯ ಕಟ್ಟಿಕೊಳ್ಳುವ ಅವರ ಪ್ರಯತ್ನದ ಭಾಗವಾಗಿ ಎರಡು ಕ್ಷೇತ್ರಗಳ ಗಡಿಯಾಗಿದ್ದ ಬೆಂಗಳೂರು ಮೈಸೂರು ಹೆದ್ದಾರಿಯ ಹನಕೆರೆಯಲ್ಲಿ ಸ್ವಂತಕೊಂದು ಮನೆ ಕಟ್ಟಿಕೊಳ್ಳುವ ಅವರ ಪ್ರಯತ್ನ ಹೊಸಮನೆಯ ಶಂಕುಸ್ಥಾಪನೆ ಬಿಟ್ಟು ಮೇಲೆಳಲಿಲ್ಲ.

ಈಗ ಇವರೆಲ್ಲರಿಗೂ ಸೈಡು ಹೊಡೆಯುವಂತೆ ಕೈ ಅಭ್ಯರ್ಥಿ ಸ್ಟಾರ್ ಚಂದ್ರು ಬಾಡಿಗೆ ಮನೆ ಯಾಕೆ ಸ್ವಂತಕ್ಕೆ ಇರಲಿ ಎಂಬಂತೆ ಮಂಡ್ಯದ ಬಂದೀಗೌಡ ಬಡಾವಣೆಯಲ್ಲಿ ಭರ್ತಿ ಎರಡು ಕೋಟಿ ವೆಚ್ಚದ ಮನೆಯನ್ನೆ ಖರೀದಿಸಿದ್ದಾರೆ.ಆರ್ಥಿಕವಾಗಿ ಸಾಕಷ್ಟು ದಷ್ಟಪುಷ್ಟವಾಗಿರುವ ಸ್ಟಾರ್ ಚಂದ್ರುಗೆ ಈ ಖರೀದಿ ದುಬಾರಿಯೇನಲ್ಲ.ಮಂಡ್ಯದ ಮತದಾರರಿಗೆ ವೈಯುಕ್ತಿಕವಾಗಿ ಅಷ್ಟೇನೂ ಪರಿಚಯವಿಲ್ಲದ ಚಂದ್ರು ಅಲಿಯಾಸ್ ವೆಂಕಟರಮಣಗೌಡ ಬಾಡಿಗೆ ಮನೆಯ ಬಗ್ಗೆ ಒಂದು ಹೆಜ್ಜೆ ಮುಂದೆ ಹೋಗಿ ಮನೆಯನ್ನೆ ಖರೀದಿಸಿ ತಮ್ಮ ಮೇಲೆ ಬರಬಹುದಾದ ಅಪವಾದ ನೀಗಿಕೊಳ್ಳುವ ಯತ್ನ ನಡೆಸಿದ್ದಾರೆ.ಈಗಾಗಲೇ ಒಂದು ಸುತ್ತು ಕ್ಷೇತ್ರ ಪ್ರವಾಸ ಮಾಡಿರುವ ಕೈ ಅಭ್ಯರ್ಥಿ ಸೋತರು ಗೆದ್ದರು ಎಷ್ಟರಮಟ್ಟಿಗೆ ಮಂಡ್ಯದಲ್ಲಿ ಉಳಿಯಲಿದ್ದಾರೆ ಎಂಬುದು ಭವಿಷ್ಯದ ಪ್ರಶ್ನೆಯೆ ಸರಿ

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!