ಮೈಸೂರು ಜಾತ್ರೆಗೆ ಮಂಡ್ಯದಲ್ಲಿ ಕುಡಿತ ಗಲಾಟೆ:ಬಿಂದಾಸ್ ಬಾರ್ ಮೂರು ದಿನ ಬಂದ್
ಮಂಡ್ಯ: ಮಾ೨೯.ಮೈಸೂರು ಜಿಲ್ಲೆಯ ರಮ್ಮನಹಳ್ಳಿ ಜಾತ್ರೆ ಸಂಧರ್ಭದಲ್ಲಿ ಗಲಾಟೆ ಆಗುವ ಸಂಭವ ಇರುವುದರಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಮಹದೇವಪುರದ ಬಿಂದಾಸ್ ಬಾರ್ ನ್ನು ಮೂರು ದಿನಗಳ ಮಟ್ಟಿಗೆ ಬಂದ್ ಮಾಡುವಂತೆ ಮಂಡ್ಯ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಕ್ಕೆ ಹೊಂದಿಕೊಂಡತಿರುವ ರಮ್ಮನಹಳ್ಳಿ ಲಕ್ಷ್ಮೀದೇವಿ ಜಾತ್ರೆಯು ಇದೇ ಮಾ30ರಿಂದ ಎ02 ವರೆಗೆ ನಡೆಯಲಿದೆ.ಈ ಸಂಧರ್ಭದಲ್ಲಿ ಜಾತ್ರೆಗೆ ಇಪ್ಪತ್ತು ಸಾವಿರಕ್ಕು ಹೆಚ್ಚು ಜನರು ಭಾಗವಹಿಸಲಿದ್ದಾರೆ.ಜಾತ್ರೆಗೆ ಬರುವ ಬಹಳಷ್ಟು ಮಂದಿ ರಮ್ಮನಹಳ್ಳಿಗೆ ಹೊಂದಿಕೊಂಡಿರುವ ಶ್ರೀರಂಗಪಟ್ಟಣ ತಾಲ್ಲೂಕಿನ ಮಹದೇವಪುರ ಗ್ರಾಮದ ಬಿಂದಾಸ್ ಬಾರ್ ನಲ್ಲಿ ಕುಡಿದು ಗಲಾಟೆ ಜಗಳ ನಿರಂತರವಾಗಿ ನಡೆಯುತ್ತ ಬಂದಿದೆ.ಈ ಕುರಿತು ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಬಿಂದಾಸ್ ಬಾರ್ ನಲ್ಲಿ ಮದ್ಯ ಮಾರಾಟ ನಿಷೇಧಿಸುವಂತರ ಮಂಡ್ಯ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳು ಕೋರಿದ್ದರು.
ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿಗಳಾದ ಡಾ.ಕುಮಾರರವರು ತಮಗೆ ದತ್ತವಾದ ಅಧಿಕಾರ ಬಳಸಿಕೊಂಡು ಅಬಕಾರಿ ಕಾಯ್ದೆ 1965 ಕಲಂ 21ರ ಪ್ರಕಾರ ಬಿಂದಾಸ್ ಬಾರ್ ನಲ್ಲಿ ಮಾರ್ಚ್ 30 ಮಧ್ಯರಾತ್ರಿಯಿಂದ ಎ.2 ವರೆಗೆ ಮದ್ಯ ಶೇಖರಣೆ.ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.